Asianet Suvarna News Asianet Suvarna News

ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರದ ವೇಳೆ ಟಿವಿಗೆ ಕೈಮುಗಿದು ರಾಮನಿಗೆ ನಮಸ್ಕರಿಸಿದ ಒಡಿಶಾ ಸಿಎಂ!

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಅಯೋಧ್ಯೆಗೆ ಹೋಗಲು ಸಾಧ್ಯವಾಗದ ಹಲವರು ನೇರಪ್ರಸಾರದಲ್ಲಿಯೇ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಿದರು.
 

Odisha CM Naveen Patnaik watched Pran Pratishtha ceremony with folded hands san
Author
First Published Jan 22, 2024, 2:30 PM IST

ಭುವನೇಶ್ವರ (ಜ.22):ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ವರ್ಚುವಲ್‌ ಆಗಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಕುರ್ತಾ ಪೈಜಾಮಾ  ಧರಿಸಿದ್ದ ಅವರು ಇಡೀ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಯುವವರೆಗೂ ಶ್ರೀರಾಮನಿಗೆ ಕೈಮುಗಿದುಕೊಂಡೇ ಕುಳಿತಿದ್ದರು. ಅವರ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರೊಂದಿಗೆ 5ಟಿ ಅಧ್ಯಕ್ಷ ವಿಕೆ ಪಾಂಡಿಯನ್ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಣೆ ಮಾಡಿದರು. ಅವರ ಭಕ್ತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 2.7 ಎಕರೆ ಭೂಮಿಯಲ್ಲಿ ನಿಂತಿರುವ ರಾಮ ಮಂದಿರುವ ವಾಸ್ತುಶಿಲ್ಪದ ಪರಮ ವೈಭವವಾಗಿದೆ. 161 ಅಡಿ ಎತ್ತರದ ಮಂದಿರ, 235 ಅಡಿ ವ್ಯಾಪಿಸಿದೆ. ಒಟಟು 360 ಅಡಿ ಉದ್ದವನ್ನು ಹೊಂದಿದೆ.  ಪ್ರಾಚೀನ ಭಾರತದ ಎರಡು ದೇವಾಲಯ-ಕಟ್ಟಡ ಶೈಲಿಗಳಲ್ಲಿ ಒಂದಾದ ವಿಶಿಷ್ಟವಾದ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರವು ಎಲ್ಲಾ ವೈದಿಕ ಆಚರಣೆಗಳನ್ನು ಅನುಸರಿಸುತ್ತದೆ ಮತ್ತು ಆಧುನಿಕ ತಂತ್ರಜ್ಞಾನವನ್ನು  ಸಂಯೋಜಿಸಿದೆ. ನಿರ್ಮಿಸಲಾದ ಪ್ರದೇಶವು ಸುಮಾರು 57,000 ಚದರ ಅಡಿಗಳನ್ನು ಒಳಗೊಂಡಿದೆ, ಇದು ಮೂರು-ಅಂತಸ್ತಿನ ರಚನೆಯನ್ನು ಹೊಂದಿದೆ.

Follow Us:
Download App:
  • android
  • ios