26/11 ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ್ದ ಜೆಕೆ ದತ್ ದಕ್ಷ ಕಮಾಂಡೋ ಅಧಿಕಾರಿ ಕೊರೋನಾಗೆ ಬಲಿ ಆಪರೇಶನ್ ಬ್ಲಾಕ್ ಟೊರೆಂಡೊ ಸಂಘಟಿಸಿದ ಚತುರ

ನವದೆಹಲಿ(ಮೇ.19):  2008 ಮುಂಬೈ ದಾಳಿ ಅದೆಂತಾ ಘನಘೋರ ದಾಳಿ ಅನ್ನೋದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನದ ಲಷ್ಕರ್-ಇ-ತೈಬಾ, ಇಸ್ಲಾಮಿಸ್ಟ್ ಭಯೋತ್ಪಾದನಾ ಸಂಘಟನೆ ಸತತ 4 ದಿನ ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 166 ಅಮಾಯಕರು ಬಲಿಯಾಗಿದ್ದಾರೆ. ಇನ್ನೂ 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭಯೋತ್ಪಾದಕರ ದಾಳಿಯನ್ನು ಪೊಲೀಸ್, ಸೇನೆ ಜೊತೆ ಸೇರಿ NSG ಪಡೆ ನಿರ್ನಾಮ ಮಾಡಿತ್ತು. ಈ NSG ಪಡೆಯನ್ನು ಮುನ್ನಡೆಸಿದ ಕಮಾಂಡೋ ಅಧಿಕಾರಿ ಜೆಕೆ ದತ್ ಕೊರೋನಾದಿಂದ ನಿಧನರಾಗಿದ್ದಾರೆ.

ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!

72 ವರ್ಷದ ಜೆಕೆ ದತ್ತಾ ಅವರಿಗೆ ಕೊರೋನಾ ರೋಗ ಲಕ್ಷಣ ಕಂಡುಬಂದಿತ್ತು. ಹೀಗಾಗಿ ದತ್ತಾ ಅವರನ್ನು ಗುರುಗಾಂವ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು 3.30ರ ವೇಳೆಗೆ ಹೃದಯಾಘಾತದಿಂದ ಜೆಕೆ ದತ್ ನಿಧನರಾಗಿದ್ದಾರೆ. 

2008ರಲ್ಲಿ ಮುಂಬೈನ ತಾಜ್ ಹೊಟೆಲ್‌, ಒಬೆರಾಯ್ ಹಾಗೂ ನರಿಮಾನ್ ಪಾಯಿಂಟ್‌ನಲ್ಲಿ ಅಡಗಿದ್ದ ಉಗ್ರರ ಸದೆಬಡಿಯಲು NSG ಕಮಾಂಡೋ ಪಡೆ ಹೆಲಿಕಾಪ್ಟರ್ ಮೂಲಕ ಬಂದಿಳಿತ್ತು. ಆಪರೇಶನ್ ಬ್ಲಾಕ್ ಟೊರೆಂಡೊ ಹೆಸರಿನಲ್ಲಿ ದಾಳಿ ಸಂಘಟಿಸಿದ ಜೆಕೆ ದತ್ ಕಮಾಂಡೋ ಪಡೆ ಉಗ್ರರ ಸದಬಡಿದಿತ್ತು. ಈ ಹೋರಾಟದಲ್ಲಿ ಬೆಂಗಳೂರಿನ ಕಮಾಂಡೋ ಸಂದೀಪ್ ಉಣ್ಣಿಕೃಷ್ಣನ್ ಹುತಾತ್ಮರಾಗಿದ್ದರು.

26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕಿ-ಉರ್-ರೆಹಮಾನ್ ಲಖ್ವಿಗೆ 15 ವರ್ಷ ಜೈಲು!

1971 ರ ಬ್ಯಾಚ್ ಬಂಗಾಳ ಕೇಡರ್ ಐಪಿಎಸ್ ಅಧಿಕಾರಿ ಜೆಕೆ ದತ್ 2006 ರಿಂದ 2009 ರವರೆಗೆ ಎನ್‌ಎಸ್‌ಜಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರಾಗಿದ್ದರು.