ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಖ್ಯಾತೆ; ಹಿರಿಯ ಅಧಿಕಾರಿಗಳ ಜೊತೆ ಅಜಿತ್ ದೋವಲ್ ಸಭೆ!
ಹಲವು ಸುತ್ತಿನ ಮಾತುಕತೆ ಬಳಿಕವೂ ಚೀನಾ ನರಿ ಬುದ್ದಿ ಬಿಟ್ಟಿಲ್ಲ. ಪ್ಯಾಂಗಾಂಗ್ ಸರೋವರದ ಬಳಿ ಒಳನುಸುಳಲು ಯತ್ನಿಸಿದ ಚೀನಾ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಇದೀಗ ಈ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ
ನವದೆಹಲಿ(ಸೆ.01): ಚೀನಾ ಪದೆ ಪಜೆ ಗಡಿ ಕಿರಿಕ್ ಮಾಡುತ್ತಿರುವ ಕಾರಣ ಲಡಾಖ್ ಪ್ರಾಂತ್ಯದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಶಾಂತವಾಗಿದೆ ಅನ್ನುವಷ್ಟರಲ್ಲೇ ಚೀನಾ ಮತ್ತೆ ಪ್ಯಾಂಗಾಂಗ್ ಸರೋವರದ ಬಳಿ ಒಳನುಸುಳಲು ಯತ್ನಿಸಿದೆ. ಚೀನಾ ಸೇನಾ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಆದರೆ ಸದ್ಯ ಪ್ಯಾಂಗಾಂಗ್ ಸರೋವರದ ಗಡಿ ರೇಖೆ ಬಳಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಚೀನಾದ ಗಡಿ ಖ್ಯಾತೆ ಕುರಿತು ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!
ಪ್ಯಾಂಗಾಂಗ್ ಸರೋವರದ ಗಡಿ ರೇಖೆ ಬಳಿ ನಡೆದ ಹೊಸ ಕಿರಿಕ್ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪರಿಸ್ಥಿತಿ ಅವಲೋಕನ ನಡೆಸಲಾಗಿದೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉನ್ನತ ಮಟ್ಟ ಸಭೆ ನಡೆಸಲಿದ್ದಾರೆ.
ಆಗ್ಟಸ್ಟ್ 29 ಹಾಗೂ 30 ರಂದು ಚೀನಾ ಸೇನೆ ಪ್ಯಾಂಗಾಂಗ್ ಸರೋವರದ ಗಡಿ ಬಳಿ ಒಳನುಸಳಲು ಯತ್ನಿಸಿದೆ. ಗಡಿ ವಾಸ್ತವ ರೇಖೆಯನ್ನು ಬದಲಿಸುವ ಪ್ರಯತ್ನ ಮಾಡಿದೆ. ಈ ಮೂಲಕ ಗಡಿ ನಿಯಂತ್ರ ರೇಖೆ ಬಳಿ ಯಥಾಸ್ಥಿತಿ ಕಾಯ್ದುಕೊಳ್ಳುವ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತೀಯ ಸೇನೆ ವಕ್ತಾರ ಕೊಲೊನೆಲ್ ಅಮನ್ ಆನಂದ್ ಹೇಳಿದ್ದಾರೆ.