Asianet Suvarna News Asianet Suvarna News

ಇನ್ನು ಮುಂದೆ ವಾಟ್ಸಪ್‌ನಲ್ಲೇ ಕೋವಿಡ್‌ ಲಸಿಕೆ ಪ್ರಮಾಣ ಪತ್ರ!

* ವಾಟ್ಸಾಪ್‌ ಸಂದೇಶದ ಮೂಲಕವೇ ಕೋವಿಡ್‌ ಲಸಿಕೆಯ ಪ್ರಮಾಣಪತ್ರ ಪಡೆಯುವ ಹೊಸ ವ್ಯವಸ್ಥೆ

* ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಪಡೆದ ಕೆಲವೇ ಸೆಕೆಂಡ್‌ಗಳಲ್ಲಿ ಆ ವ್ಯಕ್ತಿಯ ಮೊಬೈಲ್‌ಗೆ ಸರ್ಟಿಫಿಕೇಟ್

Now Get Covid Vaccination Certificate Within Seconds On WhatsApp pod
Author
Bangalore, First Published Aug 9, 2021, 7:38 AM IST

ನವದೆಹಲಿ(ಆ.09): ವಾಟ್ಸಾಪ್‌ ಸಂದೇಶದ ಮೂಲಕವೇ ಕೋವಿಡ್‌ ಲಸಿಕೆಯ ಪ್ರಮಾಣಪತ್ರ ಪಡೆಯುವ ಹೊಸ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಸೌಲಭ್ಯ ಪಡೆಯಲು, ನೊಂದಾಯಿತ ಮೊಬೈಲ್‌ ಸಂಖ್ಯೆ ಮೂಲಕ ‘Covid Certificate’ ಎಂದು ಟೈಪ್‌ ಮಾಡಿ ಸರ್ಕಾರದ ಅಧಿಕೃತ ಕೊರೋನಾ ಸಹಾಯಡೆಸ್ಕ್‌ +91 90131-51515 ಸಂಖ್ಯೆಗೆ ಕಳಿಸಬೇಕು.

ಆ ಬಳಿಕ 30 ಸೆಕೆಂಡ್‌ನಲ್ಲಿ ಒಟಿಪಿ ಬರಲಿದ್ದು, ಈ ಸಂಖ್ಯೆಯನ್ನು ನಮೂದಿಸಿದರೆ ಕೋವಿಡ್‌ ಪ್ರಮಾಣ ಪತ್ರ ಬರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಟ್ವೀಟ್‌ ಮಾಡಿದೆ. ದೇಶದಲ್ಲಿ ಯಾವುದೇ ವ್ಯಕ್ತಿ ಕೋವಿಡ್‌ ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಪಡೆದ ಕೆಲವೇ ಸೆಕೆಂಡ್‌ಗಳಲ್ಲಿ ಆ ವ್ಯಕ್ತಿಯ ಮೊಬೈಲ್‌ಗೆ ಸಂದೇಶದ ಮುಖಾಂತರ ಕೋವಿಡ್‌ ಪ್ರಮಾಣ ಪತ್ರದ ಲಿಂಕ್‌ ಬರುತ್ತದೆ.

ವಾಟ್ಸಪ್‌ನಲ್ಲಿ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?

* ಮೊದಲಿಗೆ +91 90131-51515 ಸೇವ್‌ ಮಾಡಿಕೊಳ್ಳಿ

* ಈ ಸಂಖ್ಯೆಗೆ ವಾಟ್ಸಪ್‌ನಲ್ಲಿ ಕೋವಿಡ್‌ ಸರ್ಟಿಫಿಕೇಟ್‌ ಎಂದು ಟೈಪಿಸಿ ಕಳಿಸಿ

* ಕೆಲವೇ ಸೆಕೆಂಡ್‌ಗಳಲ್ಲಿ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದೆ

* ಈ ಒಟಿಪಿ ನಮೂದಿಸಿದರೆ ನಿಮ್ಮ ಕೋವಿಡ್‌ ಪ್ರಮಾಣ ಪತ್ರ ತೆರೆದುಕೊಳ್ಳಲಿದೆ

Follow Us:
Download App:
  • android
  • ios