Asianet Suvarna News Asianet Suvarna News

ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ!

* ಕೋವಿಡ್‌ ಲಸಿಕೆ ಪಡೆದವರಿಗೆ ಆನ್‌ಲೈನ್‌ ಮೂಲಕವೇ ನೀಡಲಾಗುತ್ತಿರುವ ಪ್ರಮಾಣ ಪತ್ರ

* ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ

* ಕೋವಿನ್‌ ವೆಬ್‌ಸೈಟ್‌ ಮೂಲಕ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ

Now correct personal details on CoWIN vaccine certificate online pod
Author
Bangalore, First Published Jun 10, 2021, 9:13 AM IST

ನವದೆಹಲಿ(ಜೂ.10): ಕೋವಿಡ್‌ ಲಸಿಕೆ ಪಡೆದವರಿಗೆ ಆನ್‌ಲೈನ್‌ ಮೂಲಕವೇ ನೀಡಲಾಗುತ್ತಿರುವ ಪ್ರಮಾಣ ಪತ್ರದಲ್ಲಿ ಯಾವುದೇ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಕುರಿತು ಆರೋಗ್ಯ ಸೇತು ಆ್ಯಪ್‌ನ ಅಧಿಕೃತ ಟ್ವೀಟರ್‌ ಖಾತೆಯಿಂದ ಮಾಹಿತಿ ನೀಡಲಾಗಿದೆ.

ಈ ಅವಕಾಶದ ಅನ್ವಯ ಪ್ರಮಾಣಪತ್ರದಲ್ಲಿ ಹೆಸರು, ಜನ್ಮವರ್ಷ, ಲಿಂಗದಲ್ಲಿ ಆಗಿರುವ ಯಾವುದೇ ತಪ್ಪು ಮಾಹಿತಿಯನ್ನು ಸ್ವತಃ, ಲಸಿಕೆ ಪಡೆದವರು ಬದಲಾವಣೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ವಿದೇಶ ಪ್ರಯಾಣ ಸೇರಿದಂತೆ ನಾನಾ ವಿಷಯಗಳಿಗೆ ಕೋವಿಡ್‌ ಪ್ರಮಾಣ ಪತ್ರ ಕಡ್ಡಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ದೋಷ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬಳಕೆದಾರರು ಕೋವಿನ್‌ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಈ ಬದಲಾವಣೆ ಮಾಡಿಕೊಳ್ಳಬಹುದು.

ಕೋವಿಡ್‌ ಲಸಿಕೆ ಪಡೆದುಕೊಂಡವರಿಗೆ ತಮ್ಮ ಸ್ಟೇಟಸ್‌ ಅಪ್‌ಡೇಟ್‌ ಮಾಡುವ ಅವಕಾಶವನ್ನು ಕೆಲ ದಿನಗಳ ಹಿಂದೆ ಸರ್ಕಾರ ಕಲ್ಪಿಸಿತ್ತು. ಅದರನ್ವಯ ಮೊದಲ ಡೋಸ್‌ ಪಡೆದುಕೊಂಡವರಿಗೆ ನೀಲಿ ಬಣ್ಣದ ಬಾರ್ಡರ್‌ ಬರುತ್ತಿದ್ದರೆ, 2 ಡೋಸ್‌ ಪಡೆದುಕೊಂಡವರಿಗೆ ಡಬ್ಬಲ್‌ ಬಾರ್ಡರ್‌ ಬರುತ್ತಿತ್ತು.

Follow Us:
Download App:
  • android
  • ios