Asianet Suvarna News Asianet Suvarna News

ಕಾಶ್ಮೀರದಲ್ಲಿ ಈಗ ನೀವೂ ಜಾಗ ಖರೀದಿಸಬಹುದು: ಕೇಂದ್ರದಿಂದ ಅಧಿಸೂಚನೆ!

ಕಾಶ್ಮೀರದಲ್ಲಿ ಈಗ ನೀವೂ ಜಾಗ ಖರೀದಿಸಬಹುದು!| ಕೇಂದ್ರದಿಂದ ಅಧಿಸೂಚನೆ

Now any Indian citizen can buy land in Jammu and Kashmir pod
Author
Bangalore, First Published Oct 28, 2020, 8:00 AM IST

ಶ್ರೀನಗರ(ಅ.28): ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಇನ್ನು ಮುಂದೆ ಹೊರಗಿನವರೂ ಜಮೀನು ಖರೀದಿಸಬಹುದು. ಈ ಕುರಿತ ಅತ್ಯಂತ ಮಹತ್ವದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

ಈವರೆಗೆ ‘ಜಮ್ಮು-ಕಾಶ್ಮೀರದ ‘ಕಾಯಂ ನಿವಾಸಿ’ ಆದವರು ಮಾತ್ರ ಇಲ್ಲಿನ ಜಮೀನು ಖರೀದಿಸಬಹುದು’ ಎಂಬ ಕಾನೂನು ಇತ್ತು. ಬೇರೆ ರಾಜ್ಯದವರಿಗೆ ಭೂಮಿ ಕೊಳ್ಳುವ ಅವಕಾಶ ಇರಲಿಲ್ಲ. ಆದರೆ ಕಳೆದ ವರ್ಷ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿ ಹಾಗೂ ಪ್ರತ್ಯೇಕ ಲಡಾಖ್‌ ಸೃಷ್ಟಿಸಿದ ಸಂದರ್ಭದಲ್ಲಿ ಈ ಅಂಶವನ್ನೂ ಕೈಬಿಡಲಾಗಿತ್ತು. ಇದು ಈಗ ಕಾರ್ಯರೂಪಕ್ಕೆ ಬರುವಂತಾಗಲು ಕೇಂದ್ರ ಸರ್ಕಾರವು ‘ಜಮ್ಮು-ಕಾಶ್ಮೀರ ನೋಂದಣಿ (ಕೇಂದ್ರೀಯ ಕಾನೂನುಗಳ ಅಳವಡಿಕೆ)- 3ನೇ ಆದೇಶ, 2020’ ಅಧಿಸೂಚನೆ ಜಾರಿ ಮಾಡಿದೆ. ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ.

ಸರ್ಕಾರದ ಅಧಿಸೂಚನೆಗೆ ಕಾಶ್ಮೀರದಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಇದನ್ನು ವಿರೋಧಿಸಿದ್ದು. ‘ಜಮ್ಮು-ಕಾಶ್ಮೀರ ಮಾರಾಟಕ್ಕಿದೆ. ಇಲ್ಲಿನ ಬಡವರು ಹಾಗೂ ಸಣ್ಣ ಹಿಡುವಳಿದಾರರು ಹೊಸ ಕಾನೂನಿನಿಂದ ತೊಂದರೆ ಅನುಭವಿಸಲಿದ್ದಾರೆ’ ಎಂದಿದ್ದಾರೆ.

Follow Us:
Download App:
  • android
  • ios