36 ವರ್ಷಗಳ ಬಳಿಕ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ ದೆಹಲಿಯಲ್ಲಿ ಮಾರಾಟ!

36 ವರ್ಷಗಳ ನಿಷೇಧದ ನಂತರ ಸಲ್ಮಾನ್ ರಶ್ದಿ ಅವರ 'ದ ಸಟಾನಿಕ್ ವರ್ಸೆಸ್' ಪುಸ್ತಕ ಭಾರತದಲ್ಲಿ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಪುಸ್ತಕ ಮಾರಾಟ ಉತ್ತಮವಾಗಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧರ್ಮದೂಷಣೆ ಆರೋಪದ ಮೇರೆಗೆ ಪುಸ್ತಕ ನಿಷೇಧಿಸಲಾಗಿತ್ತು, ಆದರೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ನಿಷೇಧ ರದ್ದುಪಡಿಸಿದೆ.

novelist Salman Rushdie book 'The Satanic Verses' goes on sale in india after 36 years rav

ನವದೆಹಲಿ (ಡಿ.26): ದಿ.ಪ್ರಧಾನಿ ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಿಷೇಧಗೊಂಡಿದ್ದ ಬ್ರಿಟಿಷ್‌-ಇಂಡಿಯಾ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ 36 ವರ್ಷಗಳ ನಂತರ ಸದ್ದಿಲ್ಲದೆ ಭಾರತಕ್ಕೆ ಮರಳಿದೆ.

‘ದೆಹಲಿಯಲ್ಲಿ ಕೆಲವು ದಿನಗಳಿಂದ ಪುಸ್ತಕ ಬಿಕರಿಯಾಗುತ್ತಿದ್ದು, ಪುಸ್ತಕ ಸದ್ಯ ಕಡಿಮೆ ದಾಸ್ತಾನು ಹೊಂದಿದೆ. ಪುಸ್ತಕದ ಬಗ್ಗೆ ಓದುಗರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು, ಮಾರಾಟ ಉತ್ತಮವಾಗಿರಲಿದೆ’ ಎಂದು ಬಹ್ರಿಸನ್ಸ್ ಪುಸ್ತಕ ಮಾರಾಟಗಾರರ ಮಾಲೀಕ ರಜನಿ ಮಲ್ಹೋತ್ರಾ ಪಿಟಿಐಗೆ ತಿಳಿಸಿದ್ದಾರೆ.

ನಾಲ್ಕು ಮದುವೆ, ನಾಲ್ಕು ವಿಚ್ಛೇದನ, 75 ವರ್ಷದ ಸಲ್ಮಾನ್‌ ರಶ್ದಿ ಜೀವನ!

ನಿಷೇಧ ಏಕೆ?: ಪುಸ್ತಕ ಧರ್ಮ ದೂಷಣೆಯಿಂದ ಕೂಡಿದೆ ಎಂದು ಪುಸ್ತಕ ಮತ್ತು ಲೇಖಕ ಸಲ್ಮಾನ್‌ ವಿರುದ್ಧ ಮುಸ್ಲಿಂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು.

ನಿಷೇಧ ರದ್ದು: ಪುಸ್ತಕ ಆಮದು ನಿಷೇಧ ರದ್ದು ಪ್ರಶ್ನಿಸಿದ್ದ ಅರ್ಜಿಯೊಂದನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್‌ ವಜಾಗೊಳಿಸಿತ್ತು. ಪುಸ್ತಕ ನಿಷೇಧಿಸುವ ಆದೇಶದ ಪ್ರತಿ ಹಾಜರಿಗೆ ಅಧಿಕಾರಿಗಳು ವಿಫಲರಾದ ಬೆನ್ನಲ್ಲೇ, ಅಂಥ ಯಾವುದೇ ನಿಷೇಧ ಇಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು.

ಕುರಾನ್ ಎಂಜಾಯ್ ಮಾಡುವ ಗ್ರಂಥವಲ್ಲ:

ಭಾರತೀಯ ಮೂಲದ ಲೇಖಕರಾಗಿರುವ ಸಲ್ಮಾನ್ ರಶ್ದಿ ವಿವಾದಾತ್ಮಕ ಕೃತಿ ಬಳಿಕವೂ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದರು.‘ಇಸ್ಲಾಂನ ಪರಮೋಚ್ಚ ಗ್ರಂಥವನ್ನು ತಿದ್ದುಪಡಿ ಮಾಡಿ ಅದನ್ನು ಹೆಚ್ಚು ಮಾನವೀಯಗೊಳಿಸಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುರಾನ್ ಅಷ್ಟು ಎಂಜಾಯ್ ಮಾಡಬಲ್ಲ ಕೃತಿಯಲ್ಲ. ನಿರೂಪಣೆ ಅಷ್ಟು ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios