ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ವೇಳೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಹೆಚ್ಚಿನ ವಿನಾಯ್ತಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚುತ್ತಿರುವ ಆದಾಯ ತೆರಿಗೆ ಇಲಾಖೆ ಅವರಿಗೆಲ್ಲಾ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ.

ನವದೆಹಲಿ: ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ವೇಳೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಹೆಚ್ಚಿನ ವಿನಾಯ್ತಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚುತ್ತಿರುವ ಆದಾಯ ತೆರಿಗೆ ಇಲಾಖೆ ಅವರಿಗೆಲ್ಲಾ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. ವೇತನ ವರ್ಗದ ಆದಾಯ ತೆರಿಗೆ ಪಾವತಿದಾರರು ಈ ಹಿಂದೆ ಆದಾಯ ತೆರಿಗೆ ಇಲಾಖೆಯನ್ನು ಸುಲಭವಾಗಿ ವಂಚಿಸಬಹುದಿತ್ತು. ಆದರೆ ತೆರಿಗೆ ಇಲಾಖೆ ಇದೀಗ ಸುಧಾರಿತ ತಂತ್ರಜ್ಞಾನ ಬಳಕೆ ಮಾಡುತ್ತಿರುವ ಕಾರಣ, ತೆರಿಗೆ ವಂಚಕರನ್ನು ಸುಲಭವಾಗಿ ಪತ್ತೆ ಮಾಡಿ ಅಂಥವರಿಗೆ ನೋಟಿಸ್‌ ರವಾನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ತೆರಿಗೆ ತಜ್ಞರ ಹೆಚ್ಚಿನ ರೀಫಂಡ್‌ ಭರವಸೆ ಹಿನ್ನೆಲೆಯಲ್ಲಿ ವೇತನ ವರ್ಗದ ತೆರಿಗೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಕೆ ಮಾಡುತ್ತಿದ್ದರು. ಉದಾಹರಣೆಗೆ ಗೃಹ ಸಾಲ, ಬಂಧುಗಳಿಂದ ನಕಲಿ ಪಾವತಿ ರಸೀದಿ, ನಕಲಿ ದೇಣಿಗೆ ದಾಖಲೆಗಳನ್ನು ಸಲ್ಲಿಸುತ್ತಿದ್ದರು.

ITR Filing:ಜು. 31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ; ತೆರಿಗೆ ರೀಫಂಡ್ ಕೂಡ ಇಲ್ಲ!

ಪತ್ತೆ ಹೇಗೆ?:

ಆದರೆ ಹೊಸ ಹೊಸ ತಂತ್ರಜ್ಞಾನಗಳ ಬಳಕೆ ಕಾರಣ, ಕಳೆದ 10 ವರ್ಷದಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರ ಎಲ್ಲಾ ದಾಖಲೆಗಳನ್ನು ಸುಲಭವಾಗಿ ತಾಳೆ ಹಾಕುವುದು ಆದಾಯ ತೆರಿಗೆ ಇಲಾಖೆಗೆ ಸಾಧ್ಯ. ಅದೇ ರೀತಿ 50 ಲಕ್ಷಕ್ಕಿಂತ ಕಡಿಮೆ ವೇತನದವರ ಹಿಂದಿನ 8 ವರ್ಷಗಳ ದಾಖಲೆ ತಾಳೆ ಕೂಡಾ ಸುಲಭ. ಇದಲ್ಲದೇ, ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆ ಮಾಹಿತಿ ಕೂಡಾ ಆದಾಯ ತೆರಿಗೆ ಇಲಾಖೆಗೆ ಲಭ್ಯವಿರುವ ಕಾರಣ, ಯಾವುದೇ ಸಣ್ಣ ಸುಳ್ಳು ಮಾಹಿತಿ ಕೂಡಾ ಅವರನ್ನು ಸಿಕ್ಕಿಹಾಕಿಸಬಲ್ಲದು. ಈ ಕಾರಣಕ್ಕಾಗಿಯೇ ಈ ವರ್ಷ ಸಾಕಷ್ಟು ಪ್ರಮಾಣದ ವೇತನ ವರ್ಗದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯು, ಸೂಕ್ತ ದಾಖಲೆಗಳನ್ನು ಕೇಳಿ ನೋಟಿಸ್‌ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ.

Youtube Channel ನಲ್ಲಿ ಹಣ ಗಳಿಸಲು ಈ ರೂಲ್ಸ್ ಫಾಲೋ ಮಾಡಿ : ಟ್ಯಾಕ್ಸ್ ಕಟ್ಟೋಕೆ ಮರೀಬೇಡಿ