ಗೋವಾ(ಜೂ. 30)  ಮಾಸ್ಕ್ ಧರಿಸದೆ ಓಡಾಡುವವರನ್ನು ನೇರವಾಗಿ ಜೈಲಿಗೆ ಕಳಿಸಲು ಸರ್ಕಾರ ನಿರ್ಧರಿಸಿದೆ.  ಸಾಮಾಜಿಕ ಅಂತರ ಮುರಿಯುವವರು ಮತ್ತು ಮಾಸ್ಕ್ ಧರಿಸದೇ ಓಡಾಡುವವರಿಗೆ ಜೈಲು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಎಚ್ಚರಿಕೆ ನೀಡಿದ್ದಾರೆ.

ನಾನು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಮಾಸ್ಕ್ ಧರಿಸದವರಿಗೆ ಹಾಕುತ್ತಿರುವ ದಂಡದ ಮೊತ್ತ ಏರಿಕೆ ಮಾಡಲಾಗಿದೆ.  ಕೊರೋನಾ ಲಾಕ್ ಡೌನ್ ರೂಲ್ಸ್ ಮುರಿಯುವವರನ್ನು ನೇರವಾಗಿ ಜೈಲಿಗೆ ಕಳಿಸುತ್ತೇವೆ ಎಂದು ಪ್ರಮೋದ್ ಎಚ್ಚರಿಸಿದ್ದಾರೆ.

ಮಾಜಿ ಸಚಿವ ರೇವಣ್ಣಗೂ ಕೊರೋನಾ ನಡುಕ

ಲಾಕ್ ಡೌನ್ ಶಾಶ್ವತ ಪರಿಹಾರ ಅಲ್ಲ, ಇದೊಂದು ಕ್ರಮ ಎನ್ನುವುದು ಗೊತ್ತಿದೆ. ಅಗತ್ಯ ಬಿದ್ದರೆ ಗೋವಾದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮುನ್ನಚ್ಚೆರಿಕೆ ಕ್ರಮ ತೆಗೆದುಕೊಳಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮಾಸ್ಕ್ ಧರಿಸುವುದು, ಸಾನಿಟೈಸ್ ಮಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.  ಗೋವಾದಲ್ಲಿ ಇಲ್ಲಿಯವರೆಗೆ  724 ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.