2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!
ಚೆಫ್, ಫಿಲ್ಮ್‌ಮೇಕರ್ ವಿಕಾಸ ಖನ್ನ ಸದ್ಯ ನ್ಯೂಯಾರ್ಕ್‌ನಲ್ಲಿದ್ದರೂ ಭಾರತೀಯರ ಸಂಕಷ್ಟಕ್ಕೆ ಸದಾ ನೆರವಾಗುತ್ತಲೇ ಇದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಊಟ, ಆಹಾರ ಪೊಟ್ಟಣ ಹಂಚುತ್ತಿರುವ ವಿಕಾಸ್ ಖನ್ನು ಇದೀಗ ಈದ್ ಹಬ್ಬ ಆಚರಿಸುತ್ತಿರುವ 2 ಲಕ್ಷ ಮಂದಿಗೆ ಆಹಾರ ವಿತರಿಸುತ್ತಿದ್ದಾರೆ.
ಮುಂಬೈ(ಮೇ.23): ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಮಾಸ್ಟರ್ ಚೆಫ್, ಸನಿಮಾ ನಿರ್ಮಾಣಕಾರ ವಿಕಾಸ್ ಖನ್ನ ಪ್ರತಿ ಭಾರಿ ಭಾರತೀಯರ ಸಂಕಷ್ಟಕ್ಕೆ ನೆರವಾಗುತ್ತಲೇ ಇದ್ದಾರೆ. ಇದೀಗ ಈದ್ ಉಲ್ ಫಿತರ್ ಆಚರಿಸಲು ಹಣ ಹಾಗೂ ಆಹಾರ ದವಸ ಧಾನ್ಯವಿಲ್ಲದೆ ಕಂಗಾಲಾಗಿರುವ ಮುಸ್ಲಿಂ ಬಾಂದವರಿಗೆ ರೇಶನ್ ವಿತರಣೆ ಮಾಡುತ್ತಿದ್ದಾರೆ. ಬರೋಬ್ಬರಿ 2 ಲಕ್ಷ ಮಂದಿಗೆ ರೇಶನ್ ವಿತರಿಸಲು ಮುಂದಾಗಿದ್ದಾರೆ.
'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ.
ವಿಕಾಸ್ ಖನ್ನ ತಂಡದ ಸದಸ್ಯರು 1 ಲಕ್ಷ ಕೆಜಿ ಡ್ರೈ ಫ್ರೂಟ್ಸ್, ಅಕ್ಕಿ, ಬೇಳೆ, ಸಕ್ಕರೆ, ಧಾನ್ಯ, ಮೆಣಸು ಸೇರಿದಂತೆ ಎಲ್ಲಾ ದಿನಸಿ ವಸ್ತುಗಳನ್ನು ವಿತರಿಸಿದ್ದಾರೆ. ಹಲವು ಸಂಖ ಸಂಸ್ಥೆಗಳ ಜೊತೆ ಕೈಜೋಡಿಸಿರುವ ವಿಕಾಸ್ ಖನ್ನ ಈದ್ ಹಬ್ಬ ಆಚರಿಸುತ್ತಿರುವ ಬಾಂದವರಿಗೆ ನೆರವಾಗಿದ್ದಾರೆ.
ಈದ್ ಆಚರಣೆಗೆ ಬೇಕಾದ ದಿನಸಿ ವಸ್ತುಗಳನ್ನು ಪೂರೈಸಿದ್ದಾರೆ. ಇದು ಅತೀ ದೊದ್ದ ಈದ್ ಫೆಸ್ಟ್ ಎಂದೇ ಕರೆಯಲಾಗುತ್ತಿದೆ. ಲಾಕ್‌ಡೌನ್ ಆರಂಭವಾದ ದಿನದಿಂತ ವಿಕಾಸ್ ಖನ್ನ ತಂಡದ ಸದಸ್ಯರು ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ನಿರಂತರವಾಗಿ ಆಹಾರ ಒದಗಿಸುತ್ತಿರುವ ವಿಕಾಸ್, ಇದಕ್ಕಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ವಿಕಾಸ್ ಖನ್ನ ಸೇವೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ನಗರಗಳಲ್ಲಿ ವಿಕಾಸ್ ಖನ್ನ ತಂಡದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಬಡವರ ಹಸಿವು ನೀಗಿಸಲು ಅವಿರತ ಶ್ರಮ ಪಡುತ್ತಿದ್ದಾರೆ.