'ಸನಾತನ ವಿರೋಧಿ ಘೋಷಣೆ ಕೂಗಲಾರೆ..' ಖರ್ಗೆಗೆ ರಾಜೀನಾಮೆ ಪತ್ರ ಸಲ್ಲಿಸಿ ಬಿಜೆಪಿ ಸೇರಿದ ಗೌರವ್‌ ವಲ್ಲಭ್‌!

Gaurav Vallabh Resigned: ಲೋಕಸಭೆ ಚುನಾವಣೆಗೆ ನಡೆಯುತ್ತಿರುವ ಸಿದ್ಧತೆಗಳ ನಡುವೆ ಗೌರವ್ ವಲ್ಲಭ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅದರೊಂದಿಗೆ ಕಾಂಗ್ರೆಸ್‌ ಪಕ್ಷ ದಿಕ್ಕು ತೋಚದೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
 

Gaurav Vallabh left Congress after writing a letter to Kharge says I cannot raise anti Sanatan slogans san

ನವದೆಹಲಿ (ಏ.4): ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತ ಎದುರಾಗಿದೆ. ಪಕ್ಷದ ಪ್ರಮುಖ ವಕ್ತಾರರಾಗಿದ್ದ ಪ್ರೊಫೆಸರ್‌ ಗೌರವ್‌ ವಲ್ಲಭ್‌ ಕಾಂಗ್ರೆಸ್‌ ಪಕ್ಷಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲಿಯೇ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡ ಅವರು, ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಖ್ಯಾತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲಿಯೇ ಗೌರವ್‌ ವಲ್ಲಭ್‌ ಕೂಡ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ರಾಜೀನಾಮೆ ನೀಡುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸನಾತನ ವಿರೋಧಿ ಗೋಷಣೆಯನ್ನು ಕೂಗಲಾರೆ. ಆ ಕಾರಣಕ್ಕಾಗಿ ಪಕ್ಷದಲ್ಲಿ ನಾನು ಇರುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಗೌರವ್ ವಲ್ಲಭ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, "ಕಾಂಗ್ರೆಸ್ ಪಕ್ಷವು ಇಂದು ಮುನ್ನಡೆಯುತ್ತಿರಬಹುದು. ಆದರೆ, ಅದು ದಿಕ್ಕೇ ಇಲ್ಲದ ಹಾದಿ. ಇದನ್ನು ಅನುಭವಿಸಲು ನಾನು ಸಿದ್ಧನಿಲ್ಲ' ಎಂದು ಬರೆದಿದ್ದಾರೆ. ನಾನು ಸನಾತನ ಧರ್ಮದ ವಿರುದ್ಧ ಘೋಷಣೆಗಳನ್ನು ಕೂಗಲಾರೆ ಅಥವಾ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ಬೆಳಗ್ಗೆ ಮತ್ತು ಸಂಜೆ ನಿಂದಿಸಲಾರೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಖರ್ಗೆ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಅವರು ತಾನು ಬಹಳ ಭಾವುಕನಾಗಿದ್ದೇನೆ ಹಾಗೂ ಪಕ್ಷದಲ್ಲಿ ಮನನೊಂದಿದ್ದೇನೆ ಎಂದೂ ಬರೆದಿದ್ದಾರೆ. ನಾನು ಬಹಳಷ್ಟು ಹೇಳಲು, ಬರೆಯಲು ಮತ್ತು ತಿಳಿಸಲು ಬಯಸುತ್ತೇನೆ. ಆದರೆ ನನ್ನ ಮೌಲ್ಯಗಳು ಹಾಗೆ ಏನನ್ನೂ ಹೇಳುವುದನ್ನು ತಡೆದಿದೆ. ಆದರೂ ಸತ್ಯವನ್ನು ಮರೆಮಾಚುವುದು ಕೂಡ ಅಪರಾಧ ಎಂಬ ಭಾವನೆಯಿಂದ ನನ್ನ ಅಭಿಪ್ರಾಯಗಳನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. ಅಂತಹ ಪರಿಸ್ಥಿತಿಯಲ್ಲಿ, ನಾನು ಅಪರಾಧದ ಭಾಗವಾಗಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಗೌರವ್ ವಲ್ಲಭ್ ಹೇಳಿದ್ದೇನು?: ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಕಾಂಗ್ರೆಸ್ ದೇಶದ ಅತ್ಯಂತ ಹಳೆಯ ಪಕ್ಷ ಎಂದು ನಂಬಿದ್ದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ. ಇಲ್ಲಿ ಯುವ ಮತ್ತು ಬುದ್ಧಿಜೀವಿಗಳ ವಿಚಾರಗಳಿಗೆ ಬೆಲೆಯಿದೆ, ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಪಕ್ಷದ ಪ್ರಸ್ತುತ ರೂಪವು ಹೊಸ ಆಲೋಚನೆಗಳೊಂದಿಗೆ ಯುವಕರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.

Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

ರಾಮ ಮಂದಿರದ ಉಲ್ಲೇಖ: ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕ ಸಮಾರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಧೋರಣೆಯಿಂದ ನಾನು ಅಸಮಾಧಾನಗೊಂಡಿದ್ದೇನೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ. ನಾನು ಹುಟ್ಟಿನಿಂದ ಹಿಂದೂ ಮತ್ತು ವೃತ್ತಿಯಲ್ಲಿ ಶಿಕ್ಷಕ, ಪಕ್ಷದ ಈ ನಿಲುವು ನನಗೆ ಯಾವಾಗಲೂ ಅಹಿತಕರವಾಗಿದೆ. ಪಕ್ಷ ಮತ್ತು ಮೈತ್ರಿಗೆ ಸಂಬಂಧಿಸಿದ ಅನೇಕ ಜನರು ಸನಾತನ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

'ನೆಕ್ಕೋಕೆ ಹೇಮಾ ಮಾಲಿನಿಯನ್ನ ಎಂಪಿ ಮಾಡಿದ್ದಾರೆ..' ಎಂದ ಸುರ್ಜೇವಾಲಾ, 'ಸೆಕ್ಸಿಸ್ಟ್‌' ಹೇಳಿಕೆಗೆ ಬಿಜೆಪಿ ಟೀಕೆ!

ಇತ್ತೀಚಿನ ದಿನಗಳಲ್ಲಿ ಪಕ್ಷ ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು. ಒಂದೆಡೆ ಜಾತಿ ಆಧಾರಿತ ಜನಗಣತಿಯ ಬಗ್ಗೆ ಮಾತನಾಡುತ್ತಿದ್ದರೆ ಮತ್ತೊಂದೆಡೆ ಇಡೀ ಹಿಂದೂ ಸಮಾಜವನ್ನು ವಿರೋಧಿಸುತ್ತಿರುವುದನ್ನು ಕಾಣಬಹುದಾಗಿ ಎಂದಿದ್ದಾರೆ.

Latest Videos
Follow Us:
Download App:
  • android
  • ios