ನವದೆಹಲಿ(ಅ.10): ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಮಧಿ ವಿಡಿಯೋ ಒಂದರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಸೋಶಿಯತಲ್ ಮಿಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಮೋದಿಗೆ 8400 ಕೋಟಿ ಮೊತ್ತ ನೀಡಿ ಐಷಾರಾಮಿ ವಿಮಾನ ಖರೀದಿಸಿ, ದೇಶದ ಸೈನಿಕರನ್ನು ಬುಲೆಟ್ ಪ್ರೂಫ್ ಅಲ್ಲದ ಟ್ರಕ್‌ಗಳಲ್ಲಿ ಹುತಾತ್ಮರಾಗಲು ಕಳುಹಿಸುವುದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. 

ಇಂದು ಶನಿವಾರ ಪೋಸ್ಟ್‌ ಮಾಡಲಾದ ಈ ವಿಡಿಯೋದಲ್ಲಿ ಟ್ರಕ್‌ಗಳಲ್ಲಿ ಕುಳಿತ ಸೈನಿಕರು ಪರಸ್ಪರ ಮಾತನಾಡುತ್ತಿರುವ ದೃಶ್ಯಗಳಿವೆ. ಇವರಲ್ಲಿ ಓರ್ವ ಸೈನಿಕ ಬುಲೆಟ್ ಪ್ರೂಫ್ ಅಲ್ಲದ ಟ್ರಕ್‌ಗಳಲ್ಲಿ ನಮ್ಮನ್ನು ಕಳುಹಿಸಿ ನಮ್ಮ ಪ್ರಾಣದೊಂದಿಗೆ ಆಟವಾಡುತ್ತಿದ್ದಾರೆ ಎಂದಿದ್ದಾಋಎ.

ಕಳೆದ ವಾರ ಕೃಷಿ ಮಸೂದೆ ವಿರುದ್ಧ ಪಂಜಾಬ್‌ನಲ್ಲಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಮೋದಿ ವಿರುದ್ಧ ಕಿಡಿ ಕಾರುತ್ತಾ 'ಅವರು ದೇಶ ವಿರೋಧಿ ನೀತಿ ಹಾಗೂ ಕಾರ್ಯಗಳಿಂದ ದೇಶವನ್ನು ಬಲಹೀನಗೊಳಿಸಿದ್ದಾರೆ' ಎಂದು ಆರೋಪಿಸಿದ್ದರು.