Asianet Suvarna News Asianet Suvarna News

Supertech Twin Towers: ಮೇ 22ರೊಳಗೆ ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ!

* ನೋಯ್ಡಾ ಪ್ರಾಧಿಕಾರದಿಂದ ಸುಪ್ರೀಂ ಕೋರ್ಟ್‌ಗೆ ಮಹತ್ವದ ಮಾಹಿತಿ

* ಮೇ 22ರೊಳಗೆ ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ

* ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠಕ್ಕೆ ಮಾಹಿತಿ

Noida Supertech Twin Towers Demolition By May 22 Supreme Court Told pod
Author
Bnagalore, First Published Feb 28, 2022, 4:45 PM IST | Last Updated Feb 28, 2022, 4:45 PM IST

ನೊಯ್ಡಾ(ಫೆ.28): ನೋಯ್ಡಾದಲ್ಲಿರುವ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಮೇ 22 ರೊಳಗೆ ಸಂಪೂರ್ಣವಾಗಿ ನೆಲಸಮಗೊಳಿಸಲಾಗುವುದು ಎಂದು ನೋಯ್ಡಾ ಪ್ರಾಧಿಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮಾಹಿತಿ ನೀಡಿದೆ. 31 ಆಗಸ್ಟ್ 2021 ರಂದು, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸೂಪರ್ಟೆಕ್ ಅವಳಿ ಗೋಪುರಗಳನ್ನು ಕೆಡವಲು ಆದೇಶಿಸಿತ್ತು. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ನೋಯ್ಡಾ ಪ್ರಾಧಿಕಾರ, ಗೋಪುರ ನೆಲಸಮಗೊಳಿಸುವ ಕಾರ್ಯ ಆರಂಭವಾಗಿದ್ದು, ಮೇ 22ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠಕ್ಕೆ ಆಗಸ್ಟ್ 22 ರೊಳಗೆ M/s ಎಡ್ಫಿಸ್ ಕಟ್ಟಡದ ಅವಶೇಷಗಳನ್ನು ಸ್ಥಳದಿಂದ ತೆಗೆದುಹಾಕುತ್ತಾರೆಂದೂ ಹೇಳಲಾಗಿದೆ. ನೋಯ್ಡಾ ಪ್ರಾಧಿಕಾರದ ಪರ ವಾದ ಮಂಡಿಸಿದ ವಕೀಲ ರವೀಂದ್ರ ಕುಮಾರ್, ಗೋಪುರ ಕೆಡವುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮೇ 22ರೊಳಗೆ ಕಟ್ಟಡ ಸಂಪೂರ್ಣ ನೆಲಸಮವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಈ ಸಂಬಂಧ ಫೆಬ್ರವರಿ 9 ರಂದು ಎಲ್ಲ ಪಾಲುದಾರರ ಸಭೆ ನಡೆಸಿ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ನೆಲಸಮಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ವಕೀಲ ರವೀಂದ್ರ ಕುಮಾರ್ ಹೇಳಿದರು. ಮೇ 22 ಅಥವಾ ಅದಕ್ಕೂ ಮೊದಲು ಅವಳಿ ಗೋಪುರಗಳನ್ನು ಕೆಡವಲಾಗುತ್ತದೆ. ಆದರೆ, ಕೆಲವು ಅನಿರೀಕ್ಷಿತ ಘಟನೆ ಅಥವಾ ಇತರ ಕಾರಣಗಳಿಂದ, ಈ ದಿನಾಂಕವನ್ನು ಬದಲಾಯಿಸಬಹುದು ಮತ್ತು ಅದನ್ನು ನ್ಯಾಯಾಲಯದ ಪೂರ್ವಾನುಮತಿ ಪಡೆದ ನಂತರವೇ ಮಾಡಲಾಗುತ್ತದೆ ಎನ್ನಲಾಗಿದೆ.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಲಾಗುತ್ತಿದ್ದು, ಕಾಮಗಾರಿಗೆ ಸಂಬಂಧಿಸಿದ ಫೋಟೋ ಸಹಿತ ಸ್ಥಿತಿಗತಿ ವರದಿ ಸಲ್ಲಿಸಲಾಗಿದೆ ಎಂದು ವಕೀಲ ರವೀಂದ್ರಕುಮಾರ್ ತಿಳಿಸಿದರು. ಈ ಪ್ರಕರಣದಲ್ಲಿ, ಜನವರಿ 12 ರಂದು, ನೋಯ್ಡಾದ ಸೆಕ್ಟರ್ 93 ರಲ್ಲಿ ನೆಲೆಗೊಂಡಿರುವ 40 ಅಂತಸ್ತಿನ ಸೂಪರ್‌ಟೆಕ್ ಅವಳಿ ಗೋಪುರವನ್ನು ಕೆಡವಲು ನೀಡಿದ ಆದೇಶವನ್ನು ಪಾಲಿಸದ ಬಿಲ್ಡರ್ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯವು ಇದೀಗ ನೋಯ್ಡಾ ಪ್ರಾಧಿಕಾರ ಮತ್ತು ಸೂಪರ್‌ಟೆಕ್‌ಗೆ ಗಡುವನ್ನು ಅನುಸರಿಸಲು ಕೇಳಿದೆ.

ಕಳೆದ ವರ್ಷ ಆಗಸ್ಟ್ 31 ರಂದು, ಸುಪ್ರೀಂ ಕೋರ್ಟ್ ನೋಯ್ಡಾ ಅಧಿಕಾರಿಗಳ ಸಹಯೋಗದೊಂದಿಗೆ ನಿರ್ಮಾಣ ಹಂತದಲ್ಲಿರುವ ಸೂಪರ್‌ಟೆಕ್ ಲಿಮಿಟೆಡ್‌ನ 40 ಅಂತಸ್ತಿನ ಅವಳಿ ಗೋಪುರವನ್ನು ನಿಯಮಗಳ ಉಲ್ಲಂಘನೆಗಾಗಿ ಮೂರು ತಿಂಗಳೊಳಗೆ ಕೆಡವಲು ಆದೇಶಿಸಿತ್ತು ಎಂಬುವುದು ಉಲ್ಲೇಖನೀಯ

Latest Videos
Follow Us:
Download App:
  • android
  • ios