Asianet Suvarna News Asianet Suvarna News

ಯೂಟ್ಯೂಬರ್‌ಗೆ ಇಷ್ಟೊಂದು ಅಭಿಮಾನಿಗಳಾ..? ಫ್ಯಾನ್ಸ್‌ಗಳಿಂದ ರಸ್ತೆ ಬಂದ್‌, ಗೌರವ್ ತನೇಜಾ ಅಂದರ್‌

ಮೆಟ್ರೋ ರೈಲಿನಲ್ಲಿ ಹುಟ್ಟುಹಬ್ಬ ಆಚರಿಸಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಖ್ಯಾತ ಯೂಟ್ಯೂಬರ್ ಗೌರವ್‌ ತನೇಜಾ ಅವರನ್ನು ಉತ್ತರಪ್ರದೇಶದ ನೋಯ್ಡಾದ ಗೌತಮ್‌ ಬುದ್ಧ ನಗರದ ಪೊಲೀಸರು ಬಂಧಿಸಿದ್ದಾರೆ. 

Noida police arrested Famous Youtuber Gourav taneja akb
Author
Noida, First Published Jul 10, 2022, 11:45 AM IST

ನೋಯ್ಡಾ: ಮೆಟ್ರೋ ರೈಲಿನಲ್ಲಿ ಹುಟ್ಟುಹಬ್ಬ ಆಚರಿಸಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಖ್ಯಾತ ಯೂಟ್ಯೂಬರ್ ಗೌರವ್‌ ತನೇಜಾ ಅವರನ್ನು ಉತ್ತರಪ್ರದೇಶದ ನೋಯ್ಡಾದ ಗೌತಮ್‌ ಬುದ್ಧ ನಗರದ ಪೊಲೀಸರು ಬಂಧಿಸಿದ್ದಾರೆ. ಇವರ ಸಾವಿರಾರು ಅಭಿಮಾನಿಗಳು ನೋಯ್ದಾ ಮೆಟ್ರೋ ಸ್ಟೇಷನ್‌ಗೆ ಆಗಮಿಸಿದ ಹಿನ್ನೆಲೆ ಸಿಆರ್‌ಪಿಸಿ ಸೆಕ್ಷನ್ 144 ಉಲ್ಲಂಘಿಸಿದ ಆರೋಪದ ಮೇಲೆ ಯೂಟ್ಯೂಬರ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. 

ಅಸಹಕಾರ ಹಾಗೂ ಅವಿಧೇಯತೆಯ ಕಾರಣಕ್ಕೆ ತನೇಜಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಯ್ಡಾದ ಮೆಟ್ರೋ ರೈಲು ನಿಗಮದ ಅಧಿಕಾರಿಗಳ ಪ್ರಕಾರ ಯೂಟ್ಯೂಬರ್ ತನೇಜಾ ಅವರ ಮ್ಯಾನೇಜರ್ ತನೇಜಾ ಅವರ ಹುಟ್ಟುಹಬ್ಬದ ಆಚರಣೆಗಾಗಿ ಚಲಿಸುತ್ತಿರುವ ಮೆಟ್ರೋ ರೈಲಿನ ಬೋಗಿಯೊಂದನ್ನು ಬುಕ್ ಮಾಡಿದ್ದರು ಎನ್ನಲಾಗಿದೆ. 

ಇಬ್ಬರಿಗಾಗಿ ಇಡೀ ಊರಿನವರಿಗೆಲ್ಲಾ ಉಚಿತ ಪೆಟ್ರೋಲ್ ಹಂಚಿದ ಯುಟ್ಯೂಬರ್ ಹರ್ಷ!

ತಿಂಗಳ ಹಿಂದೆ ಗೌರವ್‌ ತನೇಜಾ (Gaurav Taneja) ಅವರ ಹೆಸರಿನಲ್ಲಿ ರೈಲು ಬುಕ್ ಆಗಿರುವುದನ್ನು ನಾವು ಸ್ವೀಕರಿಸಿದ್ದೇವೆ. ಮೆಟ್ರೋದ ಜನ ತುಂಬುವ ಸಾಮರ್ಥ್ಯ  200 ಆಗಿದ್ದು, ಪ್ರತಿ ಬೋಗಿಯಲ್ಲಿ 50 ಜನ ಇರಬಹುದು. ಅಲ್ಲದೇ ಈ ಸಂದರ್ಭದಲ್ಲಿ ಸೆಕ್ಷನ್‌ 144 ಜಾರಿಯಲ್ಲಿರುವುದು. ಒಂದು ವೇಳೆ ಅಭಿಮಾನಿಗಳು ಹೆಚ್ಚಿದ್ದರೆ, ಸಮೀಪದ ಪೊಲೀಸ್ ಠಾಣೆಗೂ ಮಾಹಿತಿ ನೀಡುವಂತೆ ನಾವು ಅವರಿಗೆ ತಿಳಿಸಿದ್ದೆವು. ಒಂದು ವೇಳೆ ಹೆಚ್ಚಿನ ಸಂಖ್ಯೆಯ ಜನ ಸೇರಿದಲ್ಲಿ ನಿಯಂತ್ರಿಸುವ ಸಲುವಾಗಿ ಈ ಸಲಹೆ ನೀಡಿದ್ದೆವು ಎಂದು ನೊಯ್ಡಾ ಮೆಟ್ರೋ ನಿಗಮದ ಅಧಿಕಾರಿ ನಿಶಾ ವಧ್ವಾನ್ (Nisha vadhwan) ಹೇಳಿದ್ದಾರೆ.

ಆದರೆ ಪೊಲೀಸರ ಪ್ರಕಾರ ತನೇಜಾ ಪೊಲೀಸರಿಗೂ ಮಾಹಿತಿ ನೀಡಿಲ್ಲ. ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ನೋಯ್ಡಾದ ಸೆಕ್ಟರ್‌39 ರ ಪೊಲೀಸ್ ಠಾಣೆಯಲ್ಲಿ ಗೌರವ್‌ ತನೇಜಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೆಕ್ಟರ್ 51 ರ ಮೆಟ್ರೋ ಸ್ಟೇಷನ್ ಮುಂಭಾಗ ತನೇಜಾ ಅವರ ಅಭಿಮಾನಿಗಳು ರಸ್ತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. 

ತನೇಜಾ ಅವರು ತಾನು ತನ್ನ 36ನೇ ವರ್ಷದ ಹುಟ್ಟುಹಬ್ಬವನ್ನು ನೋಯ್ಡಾದ ಮೆಟ್ರೋ ರೈಲಿನಲ್ಲಿ (Noida metro station) ಆಚರಿಸುತ್ತಿದ್ದು, ತನ್ನನ್ನು ಸೆಕ್ಟರ್ 51 ರ ಮೆಟ್ರೋ ಸ್ಟೇಷನ್ ಎದುರು ಇರುವ ಹೀರಾ ಸ್ವೀಟ್‌ ಮುಂಭಾಗ ಭೇಟಿ ಮಾಡಬಹುದು ಎಂದು ತನ್ನ 3.3 ಮಿಲಿಯನ್ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್‌ನಲ್ಲಿ ಬಹಿರಂಗ ಆಹ್ವಾನ ನೀಡಿದ್ದರು. ಇದನ್ನು ನೋಡಿದ ಸಾವಿರಾರು ಅಭಿಮಾನಿಗಳು ಅಲ್ಲಿ ಬಂದು ಸೇರಿದ್ದು, ಆತನನ್ನು ಭೇಟಿಯಾಗುವ ಸಲುವಾಗಿ ಗದ್ದಲ ಸೃಷ್ಟಿಸಿದ್ದರು. ಇದು ವಾಹನ ದಟ್ಟಣೆ ಹಾಗೂ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿತ್ತು. ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ರಣವಿಜಯ್ ಸಿಂಗ್‌ ಹೇಳಿದರು. 

22 ವರ್ಷಕ್ಕೆ ಕೊನೆ ಉಸಿರೆಳೆದ ಖ್ಯಾತ ಯುಟ್ಯೂಬರ್; ತಂದೆ ತಿಳಿಸಿದ ಅಸಲಿ ಸತ್ಯವಿದು!

ಮಧ್ಯಾಹ್ನ 2 ಗಂಟೆ ಸುಮಾರಿಗೆ ತನೇಜಾ ಸೆಕ್ಟರ್ 51 ರ ಮೆಟ್ರೋ ಸ್ಟೇಷನ್ (Metro station) ಮುಂಭಾಗ ಆಗಮಿಸಿದರು. ಈ ವೇಳೆ ಸಾಕಷ್ಟು ಜನ ಅಲ್ಲಿ ಸೇರಿದ ಪರಿಣಾಮ ಸೆಕ್ಟರ್‌ 71ರತ್ತ ತೆರಳುವ ರಸ್ತೆಗಳು ಬಂದ್ ಆದವು. ಗೌರವ್‌ ತನೇಜಾ ಅವರು 7.58 ಮಿಲಿಯನ್ ಫಾಲೋವರ್‌ಗಳನ್ನು ಯೂಟ್ಯೂಬ್‌ನಲ್ಲಿ ಹೊಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 3.3  ಮಿಲಿಯನ್‌ ಅಭಿಮಾನಿಗಳಿದ್ದಾರೆ. ತಾನು ಐಐಟಿ ಖರಘ್‌ಪುರದ (IIT Kharagpura) ಹಳೆ ವಿದ್ಯಾರ್ಥಿಯಾಗಿದ್ದು, ಮಾಜಿ ಪೈಲಟ್ ಕೂಡ ಎಂದು ಅವರು ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios