ನೋಯ್ಡಾದಲ್ಲಿ 24 ವರ್ಷದ ದೀಪಿಕಾ ಎಂಬ ನವವಿವಾಹಿತೆ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮ೧ಹತ್ಯೆ . ಮದುವೆಯಲ್ಲಿ ಸ್ಕಾರ್ಪಿಯೋ ಕಾರು, 50 ಲಕ್ಷದ ಚಿನ್ನ ನೀಡಿದ್ದರೂ, ಫಾರ್ಚುನರ್‌ ಕಾರು ಹಾಗೂ ಹೆಚ್ಚುವರಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದು, ಪತಿ, ಮಾವನನ್ನು ಬಂಧಿಸಲಾಗಿದೆ.

ನೋಯ್ಡಾ: ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಕೇವಲ 24 ವರ್ಷದ ದೀಪಿಕಾ ಎಂಬ ಮಹಿಳೆ ತನ್ನ ಪತಿಯ ಮನೆಯ ಮಹಡಿಯಿಂದ ಹಾರಿ ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ಗೌತಮಬುದ್ಧ ನಗರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವರದಕ್ಷಿಣೆ ಕಿರುಕುಳಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಯ್ಡಾ ವರದಕ್ಷಿಣೆ ಕಿರುಕುಳ ಘಟನೆ ಹಿನ್ನೆಲೆ

ದೀಪಿಕಾ ಪೋಷಕರು ನೀಡಿರುವ ದೂರಿನಲ್ಲಿ, ‘ಭಾನುವಾರ ಮಧ್ಯಾಹ್ನ ದೀಪಿಕಾ ನನಗೆ ಕರೆ ಮಾಡಿ, ಗಂಡನ ಮನೆಯವರು ಟೊಯೋಟಾ ಫಾರ್ಚ್ಯುನರ್‌ ಎಸ್‌ಯುವಿ ಮತ್ತು 50 ಲಕ್ಷ ರು. ವರದಕ್ಷಿಣೆ ಕೊಡುವಂತೆ ಹಿಂಸಿಸುತ್ತಿದ್ದಾರೆ ಎಂದು ಅತ್ತಿದ್ದಳು. ಸಂಜೆ ನಾನವರ ಮನೆಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದೆ. ಆ ರಾತ್ರಿ 12.30ರ ಹೊತ್ತಿಗೆ ದೀಪಿಕಾ ಟೆರೆಸ್ಸಿಂದ ಬಿದ್ದಳೆಂದು ಆಕೆಯ ಮನೆಯವರು ಕರೆ ಮಾಡಿದ್ದರು. ನಾನು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವಳು ಮೃತಪಟ್ಟಿದ್ದಳು’ ಎಂದು ದೂರಿದ್ದಾರೆ. ಮತ್ತೊಂದೆಡೆ ದೀಪಿಕಾರ ಚಿಕ್ಕಪ್ಪ ಮಾತನಾಡಿ, ‘1 ಕೋಟಿ ರು. ಖರ್ಚು ಮಾಡಿ ಮದುವೆ ಮಾಡಿದ್ದೆವು ಹಾಗೂ ಮಹಿಂದ್ರಾ ಸ್ಕಾರ್ಪಿಯೋ ಗಾಡಿ, 35-40 ತೊಲೆ ಬಂಗಾರ, ನಗದನ್ನು ನೀಡಿದ್ದೆವು’ ಎಂದಿದ್ದಾರೆ.