ಹಿಂಸೆಗಾಗಿ ಜೈ ಶ್ರೀರಾಮ್ ಘೋಷಣೆ ಬಳಕೆ ಆರೋಪ| ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್| ‘ಜನರನ್ನು ಥಳಿಸಲು ಜೈ ಶ್ರೀರಾಮ್ ಘೋಷಣೆ ಬಳಕೆ ವಿಷಾದ’| ಮಾ ದುರ್ಗೆ ಬಂಗಾಳ ಸಂಸ್ಕೃತಿಯ ಪ್ರತೀಕ ಎಂದ ಅಮರ್ತ್ಯ ಸೇನ್| ಜೈ ಶ್ರೀರಾಮ್ ಘೋಷಣೆ ಬಂಗಾಳದ ಸಂಸ್ಕೃತಿಯೊಂದಿಗೆ ಬೆರೆತಿಲ್ಲ|
ಕೋಲ್ಕತ್ತಾ(ಜು.06): ದೇಶದಲ್ಲಿ ಜೈ ಶ್ರೀರಾಮ್ ಘೋಷಣೆಯನ್ನು ಜನರನ್ನು ಥಳಿಸಲು ಬಳಸುತ್ತಿರುವುದು ದುರದೃಷ್ಟಕರ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಖೇದ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜಾಧವ್’ಪುರ್ ವಿವಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಸೇನ್, ಪ.ಬಂಗಾಳದಲ್ಲಿ ಮಾ ದುರ್ಗಾ ಸರ್ವವ್ಯಾಪಿಯಾಗಿದ್ದು, ಶ್ರೀರಾಮ್ ನಮ್ಮ ಸಂಸ್ಕೃತಿಯೊಂದಿಗೆ ಬೆರೆತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೈ ಶ್ರೀರಾಮ್ ಘೋಷಣೆಯನ್ನು ಜನರ ಮೇಲೆ ಹಲ್ಲೆ ಮಾಡಲು ಬಳಸಿಕೊಳ್ಳಾಗುತ್ತಿದೆ, ಆದರೆ ಬಂಗಾಳಿ ಸಂಸ್ಕೃತಿಯೊಂದಿಗೆ ಜೈ ಶ್ರೀರಾಮ್ ಘೋಷಣೆ ಬೆರೆತಿಲ್ಲ ಎಂದು ಸೇನ್ ನುಡಿದರು.
