ನವದೆಹಲಿ(ಡಿ.07): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇನ್ನು ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ. ಆದರೆ ಕಾಂಗ್ರೆಸ್ ರೈತರ ಬೆಳೆಗೆ ನೀಡಬೇಕಾದ ಕನಿಷ್ಠ ಬೆಂಬಲ ಬೆಲೆ(MSP)ಕಾಯ್ದೆಯನ್ನು ಬೆಂಬಲಿಸಿದೆ. ಆದರೆ ಕಾಂಗ್ರೆಸ್ ತೆಗೆದುಕೊಂಡ ಈ ನಿರ್ಧಾರ, ಕಾಂಗ್ರೆಸ್ ಆಡಳಿತದಲ್ಲಿರುವ ಪಂಜಾಬ್, ಚತ್ತೀಸ್‌ಘಡ ಹಾಗೂ ರಾಜಸ್ಥಾನದಲ್ಲಿ ಬೇರೆ ಅಭಿಪ್ರಾಯವಿದೆ.

11AM ರಿಂದ 3PM ವರೆಗೆ ಭಾರತ್ ಬಂದ್; ಗಮನಿಸಬೇಕಾದ 10 ಅಂಶ ಇಲ್ಲಿವೆ!

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಗಳು ಕೇಂದ್ರಕ್ಕೆ ಹಾಗೂ ಆಯಾ ರಾಜ್ಯ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರಗಳು ವ್ಯತಿರಿಕ್ತವಾಗಿದೆ.  ಪಂಜಾಬ್, ಚತ್ತೀಸ್‌ಘಡ ಹಾಗೂ ರಾಜಸ್ಥಾನ ರಾಜ್ಯಗಳು ತಮ್ಮ ರೈತರನ್ನು ಕೇಂದ್ರ ಕೃಷಿ ಮಸೂದೆಯಿಂದ ರೈತರನ್ನು ಹೊರಗಿಡಲು ಕೋರಿ ಮಸೂದೆಯನ್ನು ಅಂಗೀಕರಿಸಿದೆ.  ಆದರೆ ಈ ಮೂರು ರಾಜ್ಯಗಳು ಕನಿಷ್ಠ ಬೆಂಬಲ ಬೆಲೆಯಲ್ಲಿ ಬೇರೆ ಬೇರೆ ನಿರ್ಧಾರ ತೆಗೆದುಕೊಂಡಿದೆ.

ಬೆಂಝ್ ಬದಲು ಟ್ರಾಕ್ಟರ್ ಏರಿ ಮಂಟಪಕ್ಕೆ ಬಂದ ಮದುಮಗ: ಇದೆ ಬಲವಾದ ಕಾರಣ

ರೈತರ ಬೆಳೆಗೆ ಕನಿಷ್ಠ ಬೆಂಬಲ(MSP) ಬೆಲೆ ವಿಚಾರದಲ್ಲಿ ಪಂಜಾಬ್ ಮಸೂದೆಯು ಗೋಧಿ ಮತ್ತು ಭತ್ತಕ್ಕೆ ಮಾತ್ರ MSP ಕುರಿತು ಮಾತನಾಡುತ್ತಿದೆ.  ಇತರ ಬೆಳೆಗಳಿಗೆ MSPಯಿಂದ ಲಾಭವಿಲ್ಲ ಎಂದಿದೆ. ಇನ್ನು ಕೃಷಿ ಗುತ್ತಿಗೆ ವೇಳೆ ಮಾತ್ರ MSP ಪರಿಣಾಮಕಾರಿ ಎಂಬುದು ರಾಜಸ್ಥಾನ ಅಭಿಪ್ರಾಯಾವಾಗಿದೆ. ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಕಾನೂನು ರೂಪ ನೀಡುವಲ್ಲಿ ಚತ್ತೀಸ್‌ಘಡ ನಿರ್ಧಾರವೇ ಅಸ್ಪಷ್ಟವಾಗಿದೆ. 

ಈ ಮೂರು ರಾಜ್ಯಗಳು ಅಸೆಂಬ್ಲಿಯಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲ ನೀಡುವ ಮಹತ್ವದ ಮಸೂದೆ ಎಂದಿದ್ದ ಈ ರಾಜ್ಯಗಳು, ಸದ್ಯ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಕುರಿತು ಸೊಲ್ಲೆತ್ತಿಲ್ಲ. ಈ ಮೂರು ರಾಜ್ಯಗಳು ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತು ಯಾವುದೇ ಮಹತ್ವದ ಚರ್ಚೆ ನಡೆಸಿಲ್ಲ. 

ಪಂಜಾಬ್ ಕೇವಲ ಗೋಧಿ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಸೀಮಿತಗೊಳಿಸಿದೆ.  ರೈತನು ತನ್ನ  ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಲು 'ಒತ್ತಾಯಿಸಿದರೆ' ಅಥವಾ 'ಒತ್ತಡ ಹೇರಿದರೆ', ಅಂತಹ ವ್ಯಕ್ತಿಯು ಅಪರಾಧ ಮಾಡಿದನೆಂದು ಪರಿಗಣಿಸಲಾಗುತ್ತದೆ. ಇನ್ನು ರಾಜಸ್ಥಾನ ಹಾಗೂ ಚತ್ತೀಸ್‌ಘಡ ಕೂಡ ಬೇರೆ ಬೇರೆ ನಿಲುವುಗಳನ್ನು ತಳೆದಿದೆ.