ಕಾವೇರಿ ಬಗ್ಗೆ ಮಾತುಕತೆ ಇಲ್ಲ, ಸುಪ್ರೀಂ ತೀರ್ಪೇ ಅಂತಿಮ: ತಮಿಳುನಾಡು ಸ್ಪಷ್ಟನೆ
ಕಾವೇರಿ ಸಮಸ್ಯೆ ಕುರಿತು ಕರ್ನಾಟಕದ ವಾದವನ್ನು ತಳ್ಳಿ ಹಾಕಿದರು. ಅಲ್ಲದೇ ‘ಕಾವೇರಿ ವಿಷಯದ ಕುರಿತು ಮಾತುಕತೆಗೆ ಅವಕಾಶವಿಲ್ಲ. ಏಕೆಂದರೆ ಹಲವು ವರ್ಷಗಳಿಂದ ನಡೆದ ಮಾತುಕತೆಗಳು ಯಾವುದೇ ಫಲಿತಾಂಶ ನೀಡಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ: ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈಮುರುಗನ್

ಚೆನ್ನೈ(ಸೆ.22): ಕಾವೇರಿ ನದಿ ನೀರು ಬಿಡುಗಡೆ ಕುರಿತ ವಿವಾದದ ಬಗ್ಗೆ ಇನ್ನು ಕರ್ನಾಟಕ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ, ಈ ಸಮಸ್ಯೆಯ ಕುರಿತು ಸುಪ್ರೀಂಕೋರ್ಟ್ ತೀರ್ಪೇ ಉತ್ತಮ ಮತ್ತು ಅಂತಿಮ ನಿರ್ಣಯವಾಗಿರಲಿದೆ ಎಂದು ತಮಿಳುನಾಡು ಹೇಳಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈಮುರುಗನ್, ಕಾವೇರಿ ಸಮಸ್ಯೆ ಕುರಿತು ಕರ್ನಾಟಕದ ವಾದವನ್ನು ತಳ್ಳಿ ಹಾಕಿದರು. ಅಲ್ಲದೇ ‘ಕಾವೇರಿ ವಿಷಯದ ಕುರಿತು ಮಾತುಕತೆಗೆ ಅವಕಾಶವಿಲ್ಲ. ಏಕೆಂದರೆ ಹಲವು ವರ್ಷಗಳಿಂದ ನಡೆದ ಮಾತುಕತೆಗಳು ಯಾವುದೇ ಫಲಿತಾಂಶ ನೀಡಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಕಾವೇರಿ ವಿವಾದ: ಎರಡು ರಾಜ್ಯಗಳಿಗೆ ಸಮಾಧಾನ ಆಗುವ ರೀತಿ ವ್ಯವಸ್ಥೆ ಕಲ್ಪಿಸಬೇಕು - ಮಧು ಬಂಗಾರಪ್ಪ
ಇನ್ನು ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ಮಾಡಬೇಕೆಂಬ ಕರ್ನಾಟಕದ ವಾದವನ್ನು ತಳ್ಳಿ ಹಾಕಿದ ಮುರುಗನ್, ಕರ್ನಾಟಕವು ‘ಕಾವೇರಿ ಜಲವಿವಾದ ನ್ಯಾಯಮಂಡಳಿ’ಯನ್ನು ಸಂಪರ್ಕಿಸಬೇಕಿತ್ತು. ಆದರೆ ಈಗ ಇದರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಅಂತಿಮವಾಗಿರಲಿದೆ’ ಎಂದಿದ್ದಾರೆ.