Asianet Suvarna News Asianet Suvarna News

ಅನ್‌ಲಾಕ್‌ 3.0: ದೇಶಾದ್ಯಂತ ಅಂತಾರಾಜ್ಯ ಪ್ರಯಾಣ ನಿರ್ಬಂಧ ತೆರವಿಗೆ ಕೇಂದ್ರ ಸೂಚನೆ

ಅಂತಾರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿ. ಗಡಿಗಳನ್ನು ತೆರೆಯಿರಿ ಎಂದು ಕೇಂದ್ರ ಗೃಹ ಸಚಿವಾಲಯ ಕೇಂದ್ರಕ್ಕೆ ಸೂಚನೆ ನೀಡಿದೆ.

no restrictions on inter state travel centre tells states to ensure free movement of goods and people under unlock 3.0
Author
Bangalore, First Published Aug 22, 2020, 6:40 PM IST

ನವದೆಹಲಿ(ಆ.22): ಅನ್‌ಲಾಕ್‌ 3.0 ನಿಯಮದಲ್ಲಿ ಅಂತಾರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿ. ಗಡಿಗಳನ್ನು ತೆರೆಯಿರಿ ಎಂದು ಕೇಂದ್ರ ಗೃಹ ಸಚಿವಾಲಯ ಕೇಂದ್ರಕ್ಕೆ ಸೂಚನೆ ನೀಡಿದೆ. 

ಅಂತಾರಾಜ್ಯ ಪ್ರಯಾಣದ ಮೇಲೆ ಯಾವುದೇ ನಿರ್ಬಂಧ ಬೇಡ. ಸರಕು ಸಾಗಾಟ ಹಾಗೂ ಜನರು ಮುಕ್ತವಾಗಿ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರದ ಮೂಲಕ ತಿಳಿಸಿದೆ.

ಕೊರೋನಾತಂಕದ ಮಧ್ಯೆ ಚುನಾವಣೆಗೆ ತಯಾರಿ, ನಿಯಮಗಳೆಲ್ಲಾ ಬದಲು!

ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಆಯಾ ರಾಜ್ಯದ ಸಿಎಂಗಳಿಗೆ ಪತ್ರ ಬರೆದಿದ್ದು, ಕೇಂದ್ರದ 3.0 ಅನ್‌ಲಾಕ್‌ ನಿಯಮಗಳ ಬಗ್ಗೆ ಮಾಹಿತಿ ನೀಡಿದೆ. ಹಲವು ಜಿಲ್ಲೆ, ರಾಜ್ಯಗಳಲ್ಲಿ ಸ್ಥಳೀಯ ಮಟ್ಟದ ಸಂಚಾರ ನಿರ್ಬಂಧ ಹೇರಲಾಗಿದೆ. ಈ ರೀತಿ ಯಾವುದೇ ನಿರ್ಬಂಧ ಇರಬಾರದು. ಹಾಗೆಯೇ ಅನ್‌ಲಾಕ್‌ 3.0 ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕೆಂದು ಸೂಚನೆ ನೀಡಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಅನ್‌ಲಾಕ್ 3.0 ಭಾಗವಾಗಿ ಇತ್ತೀಚೆಗಷ್ಟೇ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಆಗಸ್ಟ್ 1ರಿಂದ ಅನ್ವಯಿಸುವಂತೆ ಇದು ಜಾರಿಯಾಗಿತ್ತು. ಹೊಸ ಮಾರ್ಗಸೂಚಿಗಳ ಪ್ರಕಾರ ಯೋಗ ಕೇಂದ್ರ, ಜಿಮ್‌ಗಳನ್ನು ಆಗಸ್ಟ್ 5ರಿಂದ ತೆರೆಯಲು ಸೂಚನೆ ನೀಡಲಾಗಿತ್ತು. ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಈಗಲೂ ಅಂತಾರಾಜ್ಯ ಗಡಿಗಳನ್ನು ಪ್ರಯಾಣಿಕರಿಗೆ ಮುಕ್ತವಾಗಿಸಿಲ್ಲ.

Follow Us:
Download App:
  • android
  • ios