ನವದೆಹಲಿ (ಜು. 24): ದಶಕಗಳ ಕಾಲ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್‌ಪ್ರಸಾದ ಮುಖರ್ಜಿ ಅವರನ್ನು ಮಮತಾ ಬ್ಯಾನರ್ಜಿ ‘ಆರ್‌ಎಸ್‌ಎಸ್‌ನ ಬಾಲಂಗೋಚಿ’ ಎಂದೇ ಹೀಗಳೆಯುತ್ತಿದ್ದರು. ಆದರೆ ಈಗ ಚುನಾವಣೆ ಹತ್ತಿರದಲ್ಲಿದೆ. ಹೀಗಾಗಿ ಮೋದಿ ಸರ್ಕಾರ ಕೊಲ್ಕತ್ತಾ ಬಂದರು ಟ್ರಸ್ಟ್‌ಗೆ ಶ್ಯಾಮ್‌ ಪ್ರಸಾದರ ಹೆಸರು ಕೊಟ್ಟರೆ ಮಮತಾ ಸ್ವಾಗತಿಸಿದ್ದಾರೆ.

ವಿಕಾಸ್ ದುಬೆ ಎನ್‌ಕೌಂಟರ್‌ ನಂತರ ಬದಲಾದ ಉ. ಪ್ರ ರಾಜಕೀಯ; ಬ್ರಾಹ್ಮಣರ ಓಲೈಕೆಯಲ್ಲಿ ಪ್ರಿಯಾಂಕ ಗಾಂಧಿ

ಮುಖರ್ಜಿ ಅವರನ್ನು ಈಗ ಹೀಗಳೆದು ಬಂಗಾಳಿ ಮತದಾರರ ಮನಸ್ಸು ನೋಯಿಸಲು ಮಮತಾ ತಯಾರಿಲ್ಲ. ಹಿಂದೆ ಸುಭಾಷ್‌ಚಂದ್ರ ಬೋಸ್‌ರನ್ನು ಕಮ್ಯುನಿಸ್ಟ್‌ ಪಕ್ಷಗಳು ‘ಜಪಾನಿ ಜನರಲ… ತೋಜೋನ ಚಮಚಾ’ ಎಂದು ಟೀಕಿಸುತ್ತಿದ್ದವು. ಆದರೆ ನಂತರ ಸುಭಾಷ್‌ಬಾಬು ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಯಿತು. ಈ ಬಾರಿಯ ಬಂಗಾಳಿ ಕದನ ಈಗಿನಿಂದಲೇ ಆಸಕ್ತಿ ಕೆರಳಿಸುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ