ನವದೆಹಲಿ(ಮೇ.31): ದೇಶದಲ್ಲಿ ಸದ್ಯ ಕೊರೋನಾ ವೈರಸ್ ಅಟ್ಟಹಾಸ ಆರಂಭಿಸಿದೆ. ಹೀಗಿರುವಾಗ ಇಂತಹ ಪರಿಸ್ಥಿತಿಯಲ್ಲಿ ದೇಶವ್ಯಾಪಿ ಭಾರೀ ವಿರೋಧ ವ್ಯಕ್ತವಾಗಿದ್ದ ಎನ್‌ಆರ್‌ಸಿ ಜಾರಿಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಜ್‌ ತಕ್‌ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ನಾಗರಿಕತೆ ಸಾಬೀತುಪಡಿಸಲು ಬೇಕಾದ ದಾಖಲೆಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ 'ಎನ್‌ಆರ್‌ಸಿ ಇನ್ನೂ ಜಾರಿಗೆ ಬಂದಿಲ್ಲ. ಯಾವಾಗ ಜಾರಿಗೊಳಿಸಲಾಗುತ್ತದೆ ಎಂಬ ಕುರಿತು ಚರ್ಚೆಯೂ ಆಗಿಲ್ಲ. ಒಂದು ವೇಳೆ ಇದು ಜಾರಿಯಾದರೂ ಈ ಬಗ್ಗೆ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆಯಲಾಗುತ್ತದೆ' ಎಂದಿದ್ದಾರೆ.

27 ಬಿಜೆಪಿ ಬಂಡಾಯ ಶಾಸಕರಿಗೆ ಶಾಕ್ ಕೊಟ್ಟ ಅಮಿತ್ ಶಾ..!

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾಗಿಯೂ ಮಾತನಾಡಿದ ಅಮಿತ್ ಶಾ 'ಈ ಕಾಯ್ದೆ ಯಾವೊಬ್ಬ ನಾಗರಿಕನ ಪೌರತ್ವಕ್ಕೆ ಧಕ್ಕೆಯುಂಟು ಮಾಡುವುದಿಲ್ಲ. ಪೌರತ್ವ ಹಿಂಪಡೆಯುವ ಬಗ್ಗೆ ಕಾನೂನಿನಲ್ಲಿ ಉಲ್ಲೇಖಿಸಿಲ್ಲ' ಎಂದಿದ್ದಾರೆ.

ಇನ್ನು ಮೋದಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದೆ. ಹೀಗಿರುವಾಗ ಒಂದು ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ ಸಾಧನೆಗಳ ಕುರಿತಾಗಿಯೂ ಅಮಿತ ಶಾ ಉಲ್ಲೇಖಿಸಿದ್ದ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದು, ರಾಮ ಮಂದಿರ ಟ್ರಸ್ಟ್ ಹಾಗೂ ದೇವಸ್ಥಾನ ನಿರ್ಮಾಣ ಕಾರ್ಯ, ತ್ರಿವಳಿ ತಲಾಖ್ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಮೊದಲಾದ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದಿದ್ದಾರೆ