ನವದೆಹಲಿ(ಆ.15): 74ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾತಂಕ ನಡುವೆ ಕಣ್ಣಿಗೆ ಈ ವೈರಿ ವಿರುದ್ಧ ಹಿರಾಡುತ್ತಿರುವ ಕೊರೋನಾ ವಾರಿಯರ್‌ಗಳಿಗೆ ನಮಿಸಿದ್ದಾರೆ. ಇದೇ ವೇಳೆ ಕೊರೋನಾ ಲಸಿಕೆಡಯ ಸುಳಿವನ್ನೂ ನೀಡಿದ್ದಾರೆ. ಆತ್ಮನಿರ್ಭರ್ ಭಾರತ್ ಕನಸು ಸಾಕಾರಗೊಳಿಸುವ ಬಗ್ಗೆ ಮಾತನಾಡಿವ್ದ ಪ್ರಧಾನಿ ಮೋದಿ, ದೇಶದ ರೈರತರನ್ನು ಎಲ್ಲಾ ಬಂಧಗಳಿಂದ ಮುಕ್ತರಾಗಿಸಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಚೀನಾಗೂ ಗುದ್ದು ಕೊಟ್ಟಿದ್ದಾರೆ.

"

ಮೋದಿ ಭಾಷಣದ ಪ್ರಮುಖ ಅಂಶಗಳು

* ದೇಶದ ಉಜ್ವಲ ಭವಿಷ್ಯಕ್ಕೆ ಕೊರೊನಾ ಅಡ್ಡಿಯಾಗಿದೆ. ಮಹಾಮಾರಿ ವಿರುದ್ಧದ ಸಮರದಲ್ಲಿ ಕೊರೋನಾ ವಾರಿಯರ್ಸ್‌ ಶ್ರಮ ಮೆಚ್ಚಿದ ಪಿಎಂ ಮೋದಿ. 

* ನಾವು ಸಂಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ನಾನಿಂದು ಪುಟ್ಟ ಮಕ್ಕಳನ್ನು ನನ್ನ ಮುಂದೆ ನೋಡಲು ಸಾಧ್ಯವಾಗುತ್ತಿಲ್ಲ. ಕೊರೋನಾ ಎಲ್ಲರಿಗೂ ತಡೆಯೊಡ್ಡಿದೆಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಕ್ಕಳನ್ನೂ ಮಿಸ್ ಮಾಡಿಕೊಂಡ ಪ್ರಧಾನಿ.

* ಕೊರೋನಾ ಸಂಕಷ್ಟದ ಸಮಯದಲ್ಲಿ ಕೊರೋನಾ ಯೋಧರಿಗೆ ನಮನ ಸಲ್ಲಿಸುವ ಸಮಯ. ದೇಶ ಆರೋಗ್ಯವಾಗಿಡಲು ಅನೇಕ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು.

74ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ವೈಭವ!

* ನಮ್ಮ ಪೂರ್ವಜರು ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮುಂದಿನ 2 ವರ್ಷಗಳಿಗೆ ದೊಡ್ಡ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ. ಹೊಸ ಪರ್ವದ ರೀತಿಯಲ್ಲಿ ಆಚರಣೆ ಮಾಡೋಣ. ಭಾರತದ ಪರಂಪರೆ, ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಮಂದಿ ಕೆಲಸ ಮಾಡಿದ್ದರು. ಆದರೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ನಾವು ಗೆದ್ದಿದ್ದೇವೆ

* 130 ಕೋಟಿ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಾರೆ ಎನ್ನುವ ನಂಬಿಕೆ ಇದೆ. ಆತ್ಮ ನಿರ್ಭರ ಭಾರತ ಒಂದು ಕನಸು ಸಂಕಲ್ಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, 130 ಕೋಟಿ ಜನರಿಗೆ ಮಂತ್ರವಾಗಿದೆ.

* ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ. 

* ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ. ‘ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ

'ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ' ದ ಬಗ್ಗೆ ತಿಳಿಯೋಣ ಬನ್ನಿ

* ಕೃಷಿ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರವಾಗುತ್ತಿದೆ. ಬೇರೆ ದೇಶಗಳಿಗೂ ಊಟ ನೀಡಲು ನಮ್ಮ ರೈತರು ತಯಾರಿದ್ದಾರೆ. ಕೃಷಿ ಜಗತ್ತನ್ನು ಮುನ್ನುಗ್ಗಿಸುವ ಅವಶ್ಯಕತೆ ಇದೆ. ಕೃಷಿ ಕ್ಷೇತ್ರವನ್ನು ಎಲ್ಲಾ ಕಾನೂನಿನಿಂದ ಮುಕ್ತಗೊಳಿಸಿದ್ದೇವೆ. ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲ್ಯವನ್ನು ಹೆಚ್ಚಿಸುವುದು ಕೂಡ ಪ್ರಮುಖವಾಗಿದೆ. 

* ಕೊರೋನಾ ಸಂಕಷ್ಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್‌ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿವೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ. ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು.

* ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ. ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್‌ ಫಾರ್ ವರ್ಲ್ಡ್ ಘೋಷವಾಕ್ಯದೊಂದಿಗೆ ಮುನ್ನುಗ್ಗಬೇಕಿದೆ.

* ಕೊರೋನಾ, ಭೂಕಂಪ, ಪ್ರವಾಹ ಏನೇ ಬರಲಿ ಜನರು ಆತ್ಮ ವಿಶ್ವಾಸವನ್ನು ಬಿಟ್ಟಿಲ್ಲ, ಗಟ್ಟಿ ಮನಸ್ಸಿನಿಂದ ಮುನ್ನುಗ್ಗಿದ್ದಾರೆ. ಯಾವುದೇ ಸಮಾಜದ ಸ್ವಾತಂತ್ರ್ಯ ಅವರ ಸಾಮರ್ಥ್ಯವಾಗಿರುತ್ತೆ, ಶ್ರಮವೇ ಅವರ ಉತ್ತಮ ಜೀವನಕ್ಕೆ ಕಾರಣವಾಗಿರುತ್ತದೆ.

* ಅಭಿವೃದ್ಧಿಯ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಾರೆ, ಬಡತನದಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಯೋಚಿಸಲಾಗಿದೆ.

* ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ 18ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ

* ಕಳೆದ ವರ್ಷ ಇದೇ  ದಿನ ಇದೇ ಸ್ಥಳದಿಂದ ಜಲ ಜೀವನ್ ಮಿಷನ್ ಆರಂಭಿಸಿದ್ದೆವು. ಇಂದು ಮನೆ ಮನೆಗೆ ನೀರು ತಲುಪಿಸುವ ಯೋಜನೆ ಜಲ ಜೀವನ್ ಮಿಷನ್ ನಿಂದ 2 ಕೋಟಿ ಮನೆಗೆ ನೀರು ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಮಧ್ಯಮ ವರ್ಗದವರ ಹಣವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಆರ್‌ಬಿಐ ಜೊತೆ ಜೋಡಣೆ ಮಾಡಲಾಗಿದೆ

* 2014 ಕ್ಕಿಂತ ಮೊದಲು ಕೇವಲ 60 ಗ್ರಾಮ ಪಂಚಾಯಿತಿಗಳು ಮಾತ್ರ ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕ ಹೊಂದಿದ್ದವು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕ ಹೊಂದಿವೆ. ಮುಂಬರುವ 1000 ದಿನಗಳಲ್ಲಿ ರಾಷ್ಟ್ರದ ಪ್ರತಿ ಹಳ್ಳಿಯನ್ನು ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕ ಹೊಂದುವಂತೆ ಮಾಡಲಾಗುತ್ತದೆ

* ಆತ್ಮನಿರ್ಭರ್, ಆಧುನಿಕತೆ, ಆಧುನಿಕತೆಯಿಂದ ಮತ್ತು ಸಮೃದ್ಧತೆಯಿಂದ ಭಾರತವನ್ನು ತಯಾರಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಇದೀಗ ನೂವು ಮೂರು ದಶಕಗಳ ಬಳಿಕ ಹೊಸ ಶಿಕ್ಷಣ ನೀತಿಯನ್ನು ದೇಶಾದ್ಯಂತ ಸ್ವಾಗತಿಸಿದ್ದೇವೆ, ಈ ಬೆಳವಣಿಗೆ ಹೊಸ ವಿಶ್ವಾಸವನ್ನು ಮೂಡಿಸಿದೆ,

* ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳನ್ನು ತಮ್ಮ ಸಂಸ್ಕೃತಿಯಲ್ಲಿ ಬೇರೂರುವಂತೆ ಮಾಡುತ್ತದೆ. ಆದರೆ ಅವರನ್ನು ಜಾಗತಿಕ ನಾಗರಿಕರನ್ನಾಗಿ ಮಾಡುತ್ತದೆ

* ಕೊರೊನಾ ಸಂದರ್ಭದಲ್ಲಿ ಒಂದು ಲ್ಯಾಬ್‌ನಿಂದ 1400 ಲ್ಯಾಬ್‌ಗಳ ನಿರ್ಮಾಣ, 300 ಪರೀಕ್ಷೆಗಳಿಂದ 7 ಲಕ್ಷ ಪರೀಕ್ಷೆಗಳು ನಡೆಯುತ್ತಿವೆ. ಇಂದಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ

* ಮಹಿಳೆಯರಿಗೆ ಅವಕಾಶ ಸಿಕ್ಕಾಗಲೆಲ್ಲಾ ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಈ ಮೂಲಕ ಭಾರತವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿಂದು ಮಹಿಳೆಯರು ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ನಮ್ಮ ದೇಶದ ಹೆಣ್ಣುಮಕ್ಕಳು ಯುದ್ಧ ವಿಮಾನವನ್ನು ಹಾರಿಸುವಾಗ ಆಗಸ ಮುಟ್ಟುತ್ತಿದ್ದಾರೆ. ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿ ಮರುಪರಿಶೀಲಿಸಲು ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು,  ಸಮಿತಿ ತನ್ನ ವರದಿಯನ್ನು ಸಲ್ಲಿಸಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ

* ಭಾರತದಲ್ಲಿ ಕೊರೋನಾಗೆ ಮೂರು ಲಸಿಕೆಗಳು ಪರೀಕ್ಷಾ ಹಂತದಲ್ಲಿವೆ. ವಿಜ್ಞಾನಿಗಳು ಗ್ನೀನ್ ಸಿಗ್ನನ್ ನೀಡಿದ ಕೂಡಲೇ, ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ

* ಜಮ್ಮು ಕಾಶ್ಮೀರಲ್ಲಿ ಮತ್ತೆ ಚುನಾವಣೆ ನಡೆಯಲಿದೆ, ಜಮ್ಮು ಕಾಶ್ಮೀರಲ್ಲಿ 370ನೇ ವಿಧಿ ನಿಷೇಧಿಸಿ ಒಂದು ವರ್ಷ ಕಳೆದಿದೆ. ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ, ಲಡಾಖ್ ಜನರ ಬಹು ವರ್ಷಗಳ ಕನಸನ್ನು ನಾವು ನನಸು ಮಾಡಿದ್ದೇವೆ, ಇನ್ನು ಅಭಿವೃದ್ಧಿಯ ಅವಶ್ಯಕತೆ ಇದೆ.

* LACಯಿಂದ LoCವರೆಗೆ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಸೇನಾಪಡೆಗಳು ಉತ್ತಮ ಉತ್ತರ ನೀಡಿದ್ದಾರೆ

* ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯಗಳಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ. ಚೀನಾಗೆ ಮೋದಿ ಗುದ್ದು.

* ದೇಶದಲ್ಲಿ 1300 ಕ್ಕೂ ಹೆಚ್ಚು ದ್ವೀಪಗಳಿದ್ದು ಅದರ ಭೌಗೋಳಿಕ ಸ್ಥಳ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿನ ಅವುಗಳ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೆಲವು ದ್ವೀಪಗಳಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಕೆಲಸ ನಡೆಸಲಾಗುತ್ತಿದೆ

* ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ 10 ದಿನಗಳ ಹಿಂದೆ ಚಾಲನೆ ದೊರಕಿದೆ. ಶತಮಾನಗಳಿಂದಲೂ ಚಾಲ್ತಿಯಲ್ಲಿದ್ದ ರಾಮಜನ್ಮ ಭೂಮಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ. ದೇಶದ ಜನರ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು. ಭವಿಷ್ಯಕ್ಕೆ ಸ್ಫೂರ್ತಿಯಾಗಿದೆ

74 ನೇ ಸ್ವತಂತ್ರೋತ್ಸವ ಸಂಭ್ರಮ: ಕರುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು

"