ಮುಂಬೈ(ಆ.14): 63 ಮೂನ್ಸ್‌ ಟೆಕ್ನಾಲಜೀಸ್ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಬಿಐ ಬಾಂಬೆ ಹೈ ಕೋರ್ಟ್‌ಗೆ ತಿಳಿಸಿದೆ.

63 ಮೂನ್ಸ್ ಟೆಕ್ನಾಲಜೀಸ್ ದಾಖಲಿಸಿದ ಪ್ರಕರಣವನ್ನು  ಹಣಕಾಸು ಸಚಿವಾಲಯದ ಮುಖ್ಯ ವಿಜಿಲೆನ್ಸ್ ಅಧಿಕಾರಿಗೆ ಕಳುಹಿಸಿ ಕೊಡಲಾಗಿದೆ ಎಂದು ಸಿಬಿಐ ವಕೀಲ ಹಿಟೆನ್ ವಿನೆಗಾವ್ಕರ್ ನ್ಯಾ.ಸಾಧನಾ ಜಾಧವ್ ಹಾಗೂ ಎನ್‌ಜೆ ಜಮದಾರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದ್ದಾರೆ.

10 ರಲ್ಲಿ ಎರಡು ಅಂಕಿ, 1 ಮತ್ತು 0: ‘ಲೆಕ್ಕ’ ಚುಕ್ತಾ ಮಾಡಿದ ಚಿದು!

ಪಿ. ಚಿದಂಬರಂ, ಕೆ.ಪಿ ಕೃಷ್ಣನ್ ಹಾಗೂ ರಮೇಶ್ ಅಭಿಷೇಕ್ ವಿರುದ್ಧ ಸಿಬಿಐ ಕ್ರಮ ಕೈಗೊಳ್ಳಲು ತಡವಾಗುತ್ತಿರುವುದನ್ನು ಪ್ರಶ್ನಿಸಿ ಫಿನಾನ್ಶಿಯಲ್ ಟೆಕ್ನಾಲಜೀಸ್ ಮುಖ್ಯಸ್ಥ ಜಿಗ್ನೇಶ್ ಶಾ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಕೋರ್ಟ್‌ ವಿಚಾರಣೆ ನಡೆಸಿದೆ.

ಬೇಲ್‌ ನಿರಾಕರಿಸಲು ನಾನು ಬಿಲ್ಲಾ- ರಂಗಾ ಅಲ್ಲ: ಚಿದಂಬರಂ

2012-13ರಲ್ಲಿ ಹಗರಣ ಬೆಳಕಿಗೆ ಬಂದಾಗ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದು, ಅಭಿಷೇಕ್ ಫಾರ್ವರ್ಡ್ ಮಾರ್ಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದರು. ಕೃಷ್ಣನ್ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಹಣಕಾಸು ಸಚಿವಾಲಯದಲ್ಲಿ ಸಹ ಕಾರ್ಯದರ್ಶಿಯಾಗಿದ್ದರು.

ಸಿಬಿಐ ದೂರನ್ನು ಪರಿಶೀಲಿಸಿದ್ದು, ಕಂಪನಿಯ ದೂರು ದೃಢಿಕರಿಸುವ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ವಕೀಲ ತಿಳಿಸಿದ್ದಾರೆ. ಅರ್ಜಿದಾರರು ಯಾವುದೇ ಸಾಕ್ಷಿಗಳನ್ನು, ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಸಿಬಿಐ ತಿಳಿಸಿದೆ.

ಇಂದಿರಾ, ರಾಜೀವ್ ಗಾಂಧಿ ಕಲಿಸಿದ್ದಾರೆ ನಿರ್ಭೀತ ಪಾಠ; ಮೋದಿ ಬೆದರಿಕೆಗೆ ಜಗ್ಗಲ್ಲ: ಪಿ ಚಿದಂಬರಂ!

ಕೇಸಿನಲ್ಲಿಆರೋಪಗಳನ್ನು ದರಢೀಕರಿಸುವ ಸಾಕ್ಷಿ, ಆಧಾರಗಳ ಕೊರತೆ ಇರುವುದರಿಂದ ಮತ್ತು, ಟೆಕ್ನಿಕಲ್‌ನಂತಹ ಪ್ರಕರಣವಾಗಿರುವುದರಿಂದ ಇದನ್ನು ಮುಖ್ಯ ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರಿಸಲಾಗಿದೆ.

63 ಮೂನ್ ಕೇಸ್ ಎಂದರೇನು..?

2019 ಫೆ.15ರಂದು ಮೂನ್‌ ಟೆಕ್ನಾಲಜೀಸ್ ಪ್ರಕರಣದ ಬಗ್ಗೆ ಸಿಬಿಐಗೆ ದೂರು ನೀಡಿತ್ತು. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್‌ ಲಿಮಿಟೆಡ್‌ನಲ್ಲಿ ಆದ ಹಗರಣ ಬೆಳಕಿಗೆ ಬಂದಾಗ ಫುಲ್ ಮೂನ್ ಕಂಪನಿಗೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಇಬ್ಬರು ಅಧಿಕಾರಿಗಳಿಂದ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.