ನವದೆಹಲಿ(ಜು.24): ಭಾರತದಲ್ಲಿ ಹೊಸ ಸೋಂಕಿತರು ಮತ್ತು ಸಾವಿನ ಪ್ರಮಾಣದಲ್ಲಿ ಗುರುವಾರ ಹೊಸ ದಾಖಲೆ ಸೃಷ್ಟಿಯಾಗಿದೆ. ನಿನ್ನೆ ಒಂದೇ ದಿನ ದೇಶಾದ್ಯಂತ 50904 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1285173ಕ್ಕೆ ತಲುಪಿದೆ. ಮತ್ತೊಂದೆಡೆ 1199 ಜನರ ಸಾವಿನೊಂದಿಗೆ ಒಟ್ಟು ಸಾವಿನ ಸಂಖ್ಯೆ 30595ಕ್ಕೆ ತಲುಪಿದೆ. ಇವೆರಡೂ ಈವರೆಗಿನ ದೈನಂದಿನ ಗರಿಷ್ಠ ಪ್ರಮಾಣವಾಗಿದೆ.

ಒಂದೇ ದಿನ, ಒಂದೇ ತರಬೇತಿ ಕೇಂದ್ರದ 91 ಪೊಲೀಸರಿಗೆ ಸೋಂಕು

ಮತ್ತೊಂದೆಡೆ ಗುರುವಾರ 34622 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ಮೂಲಕ ಈವರೆಗೆ ಚೇತರಿಸಿಕೊಂಡವರ ಪ್ರಮಾಣ 813679ಕ್ಕೆ ಮುಟ್ಟಿದೆ.

ಮಹಾರಾಷ್ಟ್ರ ನಿನ್ನೆ 9,895 ಕೇಸ್‌, 298 ಸಾವು, ತಮಿಳುನಾಡಿನಲ್ಲಿ 6472 ಹೊಸ ಕೇಸ್‌, 88 ಮಂದಿ ಸಾವು, ಕರ್ನಾಟಕದಲ್ಲಿ 5,030 ಕೊರೋನಾ ಕೇಸ್‌, 97 ಸಾವು, ಆಂಧ್ರ ಪ್ರದೇಶ ದಾಖಲೆಯ 7,998 ಕೇಸ್‌, 61 ಸಾವು, ಕೇರಳದಲ್ಲಿ 1078 ಹೊಸ ಪ್ರಕರಣ, 5 ಮಂದಿ ಸಾವು ದಾಖಲಾಗಿದೆ.

ದಿಢೀರ್‌ ಪ್ರಮಾಣ ಏರಿಕೆಗೆ ಕಾರಣ?

ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ರೋಗಪತ್ತೆ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಹೊಸ ಸೋಂಕಿತರು ಪತ್ತೆಯಾಗುವ ಪ್ರಮಾಣ ಕೂಡಾ ಏರಿಕೆಯಗಿದೆ.

ದಕ್ಷಿಣ ರಾಜ್ಯಗಳು ತತ್ತರ

ಗುರುವಾರ ಕೂಡಾ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಭಾರೀ ಪ್ರಮಾಣದ ಸೋಂಕು, ಸಾವು ಪತ್ತೆಯಾಗಿದೆ.

ರಾಜ್ಯ - ಸೋಂಕು - ಸಾವು

ಆಂಧ್ರಪ್ರದೇಶ : ಸೋಂಕು -7998, ಸಾವು - 61

ತಮಿಳುನಾಡು : ಸೋಂಕು 6472, ಸಾವು - 88

ಕರ್ನಾಟಕ : ಸೋಂಕು - 5030, ಸಾವು - 97

ಕೇರಳ : ಸೋಂಕು - 1078, ಸಾವು : 5

============

ಅತಿ ಹೆಚ್ಚು ಸೋಂಕು, ಸಾವು ಟಾಪ್‌ 5 ರಾಜ್ಯಗಳು

ರಾಜ್ಯ ಸೋಂಕು ಸಾವು

ಮಹಾರಾಷ್ಟ್ರ: ಸೋಂಕು - 347502, ಸಾವು - 12854

ತಮಿಳುನಾಡು: ಸೋಂಕು - 192964, ಸಾವು - 3232

ದೆಹಲಿ: ಸೋಂಕು - 127364, ಸಾವು - 3745

ಕರ್ನಾಟಕ: ಸೋಂಕು - 80863, ಸಾವು - 1616

ತೆಲಂಗಾಣ: ಸೋಂಕು - 50826, ಸಾವು - 447