ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ!
* ಕೇಂದ್ರೀಯ ತನಿಖಾ ತಂಡ (ಸಿಬಿಐ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೊಸ ರೂಲ್ಸ್
* ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ
* ಕರ್ತವ್ಯದ ಮೇಲಿದ್ದಾಗ ಜೀನ್ಸ್ ಮತ್ತು ಟೀ ಶರ್ಟ್ ಹಾಗೂ ಕ್ರೀಡಾ ಶೂಗಳನ್ನು ಧರಿಸಲೇಬಾರದು ಎಂದು ಸಿಬಿಐ ನೂತನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಆದೇಶ
ನವದೆಹಲಿ(ಜೂ.05): ಕೇಂದ್ರೀಯ ತನಿಖಾ ತಂಡ (ಸಿಬಿಐ) ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ಮುಂದೆ ಕರ್ತವ್ಯದ ಮೇಲಿದ್ದಾಗ ಜೀನ್ಸ್ ಮತ್ತು ಟೀ ಶರ್ಟ್ ಹಾಗೂ ಕ್ರೀಡಾ ಶೂಗಳನ್ನು ಧರಿಸಲೇಬಾರದು ಎಂದು ಸಿಬಿಐ ನೂತನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಆದೇಶಿಸಿದ್ದಾರೆ.
ಅಲ್ಲದೆ ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿ ಔಪಚಾರಿಕ ಉಡುಗೆಗಳಲ್ಲೇ ಕಚೇರಿಗೆ ಆಗಮಿಸಬೇಕು. ಅಂದರೆ ಪುರುಷ ಸಿಬ್ಬಂದಿಯು ಸಾಮಾನ್ಯ ಶರ್ಟ್, ಸಾಮಾನ್ಯ ಪ್ಯಾಂಟ್, ಫಾರ್ಮಲ್ ಶೂಗಳು ಮತ್ತು ಕ್ಲೀನ್ ಶೇವ್ನಲ್ಲಿರಬೇಕು. ಯಾವುದೇ ಕಾರಣಕ್ಕೂ ಗಡ್ಡ ಬಿಡಲೇಬಾರದು ಎಂದು ಸೂಚಿಸಿದ್ದಾರೆ.
ಇನ್ನು ಮಹಿಳಾ ಸಿಬ್ಬಂದಿ ಸೀರೆಗಳು, ಸೂಟ್ಗಳು, ಸಾಮಾನ್ಯ ಅಂಗಿ ಮತ್ತು ಪ್ಯಾಂಟ್ಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇಶಾದ್ಯಂತ ಇರುವ ಸಿಬಿಐ ಕಚೇರಿಗಳಿಗೆ ಈ ನಿಯಮ ಅನ್ವಯವಾಗಲಿದೆ.