ಭಾರತೀಯರ ಹಜ್ ಯಾತ್ರೆ ಮೊದಲ ಬಾರಿಗೆ ರದ್ದು| 2.13 ಲಕ್ಷ ಅರ್ಜಿದಾರರಿಗೆ ತಕ್ಷಣವೇ ಶುಲ್ಕ ವಾಪಸ್
ನವದೆಹಲಿ(ಜೂ.24): ಈ ವರ್ಷದ ಹಜ್ ಯಾತ್ರೆಗೆ ವಿದೇಶೀ ಯಾತ್ರಿಕರಿಗೆ ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಯಾವುದೇ ಯಾತ್ರಿಕರನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತ ಸರ್ಕಾರ ನಿಧಾರ ಪ್ರಕಟಿಸಿದೆ. ಸ್ವಾತಂತ್ರ್ಯಾನಂತರ ಭಾರತೀಯರು ಹಜ್ ಯಾತ್ರೆ ಕೈಗೊಳ್ಳದೇ ಇರುವುದು ಇದೇ ಮೊದಲು.
ಮೆಕ್ಕಾ ಯಾತ್ರೆಗೆ ಕೂಡಿಟ್ಟ 5 ಲಕ್ಷ ರೂ. ಆರೆಸ್ಸೆಸ್‌ಗೆ ನೀಡಿದ ಮಹಿಳೆ!
‘ಕೊರೋನಾ ವೈರಸ್ ಹೆಚ್ಚಳದ ಕಾರಣ ಹಜ್ ಯಾತ್ರೆಯನ್ನು ಕೇವಲ ಸೌದಿಯಲ್ಲಿನ ಜನರು ಮಾತ್ರ ಕೈಗೊಳ್ಳಬಹುದು. ಬೇರೆ ದೇಶಗಳಿಂದ ಆಗಮಿಸುವ ಯಾತ್ರಿಕರಿಗೆ ಅವಕಾಶವಿಲ್ಲ’ ಎಂದು ಸೋಮವಾರ ತಡರಾತ್ರಿ ಹೇಳಿದ್ದ ಸೌದಿ ಸರ್ಕಾರ, ಯಾತ್ರಿಕರನ್ನು ಹಜ್‌ಗೆ ಕಳಿಸಬೇಡಿ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಸೌದಿಯ ಹಜ್ ವ್ಯವಹಾರಗಳ ಸಚಿವ ತಾಹಿರ್ ಬೆಂಟನ್ ಅವರು ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಕರೆ ಮಾಡಿದ್ದರು. ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ನಖ್ವಿ, ‘ಸೌದಿ ಸರ್ಕಾರದ ಕೋರಿಕೆ ಮನ್ನಿಸಿದ್ದೇವೆ. 2020ರ ಹಜ್ ಯಾತ್ರೆಗೆ 2.13 ಲಕ್ಷ ಅರ್ಜಿ ಸ್ವೀಕರಿಸಿದ್ದೆವು. ಅರ್ಜಿ ಜತೆ ಶುಲ್ಕ ಕೂಡ ಸಂಗ್ರಹಿಸಲಾಗಿತ್ತು. ಈಗ ಈ ಶುಲ್ಕವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ಮರಳಿಸುವ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದೆ’ ಎಂದರು.
ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!
ಸಂಗಾತಿ ಜತೆ ತೆರಳದೇ ಏಕಾಂಗಿಯಾಗಿ ಹಜ್ ಯಾತ್ರೆಗೆ ತೆರಳಲು 2300 ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಮುಂದಿನ ವರ್ಷ ಪರಿಗಣಿಸಲಾಗುವುದು. ಜತೆಗೆ ಹೊಸ ಅರ್ಜಿದಾರರನ್ನೂ ಪರಿಗಣಿಸಲಾಗುವುದು ಎಂದು ನಖ್ವಿ ಸ್ಪಷ್ಟಪಡಿಸಿದರು. ಕಳೆದ ವರ್ಷ 2 ಲಕ್ಷ ಜನರು ಯಾತ್ರೆ ಕೈಗೊಂಡಿದ್ದರು.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"
