ಮನೆಯಿಂದ ಕೆಲಸ ಮಾಡುವರು, ಕಚೇರಿ ಸೇರಿದಂತೆ ಎಲ್ಲರಿಗೂ ವಿಡಿಯೋ ಕಾಲ್ ಮೀಟಿಂಗ್. ಆದರೆ ಹಲವರು ಕ್ಯಾಮೆರಾ ಆನ್ ಮಾಡಿರಲಿಲ್ಲ. ಕಡ್ಡಾಯವಾಗಿ ಕ್ಯಾಮೆರಾ ಆನ್ ಮಾಡಿ ಮೀಟಿಂಗ್ ಹಾಜರಾಗಲು ಸೂಚಿಸಿದ್ದಾರೆ. ಹೀಗೆ ಉದ್ಯೋಗಿಯೊಬ್ಬ ಕ್ಯಾಮೆರಾ ಆನ್ ಮಾಡುತ್ತಿದ್ದಂತೆ ಬಾಸ್ ಕಕ್ಕಾಬಿಕ್ಕಿಯಾದ ಘಟನೆ ನಡದಿದೆ. 

ಕೋವಿಡ್ ಬಳಿಕ ಭಾರತ ಸೇರಿದಂತೆ ಬಹುತೇಕ ರಾಷ್ಟ್ರದಲ್ಲಿ ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡಲ್ ಹೆಚ್ಚು ಚಾಲ್ತಿಗೆ ಬಂದಿದೆ. ಇದೀಗ ಹಲವು ಕಂಪನಿಗಳು ಎಲ್ಲಾ ಮಾಡೆಲ್ ಅಂತ್ಯಗೊಳಿಸಲಾಗಿದ್ದು, ಕಚೇರಿಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಇದರ ನಡುವೆ ವಿಡಿಯೋ ಕಾಲ್ ಮೀಟಿಂಗ್ ನಡೆಯುತ್ತಲೇ ಇರುತ್ತದೆ. ವಿಡಿಯೋ ಕಾಲ್ ಮೀಟಿಂಗ್‌ನಲ್ಲಿ ವಿಡಿಯೋ ಆನ್ ಮಾಡಿ ಹಾಜರಾಗುವುದು ಬಹುತೇಕ ಕಂಪನಿಗಳಲ್ಲಿ ಕಡ್ಡಾಯವಾಗಿದೆ. ಇಷ್ಟಾಗದರೂ ಕೆಲವರು ವಿಡಿಯೋ ಆಫ್ ಮಾಡಿ ಮೀಟಿಂಗ್ ಹಾಜರಾಗುತ್ತಾರೆ. ಹೀಗೆ ಉದ್ಯೋಗಿಯೊಬ್ಬ ವಿಡಿಯೋ ಆಫ್ ಮಾಡಿ ಮೀಟಿಂಗ್ ಅಟೆಂಡ್ ಮಾಡಿದ್ದಾನೆ. ಬಾಸ್ ಸೂಚನೆ ಬಳಿಕ ವಿಡಿಯೋ ಆನ್ ಮಾಡಿದ್ದಾನೆ. ಆದರೆ ಉದ್ಯೋಗಿ ನೋಡಿದ ಬಾಸ್ ಅಚ್ಚರಿಗೊಂಡ ಘಟನೆ ನಡೆದಿದೆ.

ಈ ಘಟನೆ ಕುರಿತು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಾರ್ಕ್ ಅನ್ನೋ ಪ್ರಾಜೆಕ್ಟ್ ಮ್ಯಾನೇಜರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಈ ಮಾಹಿತಿ ನೀಡಿದ್ದಾನೆ. ಮ್ಯಾನೇಜರ್ ಮಾರ್ಕ್‌ಗೆ ಮನೆಯಿಂದ ಕೆಲಸ ಮಾಡುವುದು ಯಾವುದೇ ಕಾರಣಕ್ಕೂ ಇಷ್ಟವಿರಲಿಲ್ಲ. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಸಿಲಾಗಿತ್ತು. ಪ್ರತಿ ವಾರ ವಿಡಿಯೋ ಮೀಟಿಂಗ್ ನಡೆಯುತ್ತಿತ್ತು. ಆದರೆ ಬಹುತೇಕ ಉದ್ಯೋಗಿಗಳು ಈ ಮೀಟಿಂಗ್‌ನಲ್ಲಿ ವಿಡಿಯೋ ಆಫ್ ಮಾಡುತ್ತಿದ್ದರು. ಹೀಗಾಗಿ ಮುಂದಿನ ವಾರದ ಮೀಟಿಂಗ್‌ನಲ್ಲಿ ಎಲ್ಲರೂ ವೀಡಿಯೋ ಆನ್ ಮಾಡಿ ಹಾಜರಾದಲು ಕಟ್ಟು ನಿಟ್ಟಾಗಿ ಸೂಚಿಸಲಾಗಿತ್ತು.

ಇದರಿಂತ ಮೀಟಿಂಗ್ ಆರಂಭಗೊಂಡಿತ್ತು. ಬಹುತೇಕ ಎಲ್ಲರೂ ವೀಡಿಯೋ ಆನ್ ಮಾಡಿದ್ದರು. ಆದರೆ ಒಬ್ಬ ಉದ್ಯೋಗಿ ಮಾತ್ರ ವಿಡಿಯೋ ಆಫ್ ಮಾಡಿ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಬಾಸ್ ಸೂಚನೆ ನೀಡಿದ್ದರೂ ಮೀಟಿಂಗ್‌ನಲ್ಲಿ ವಿಡಿಯೋ ಆನ್ ಮಾಡಿಲ್ಲ ಎಂದು ಏಕಾಏಕಿ ಗರಂ ಆಗಿದ್ದಾರೆ. ತಕ್ಷಣವೇ ವಿಡಿಯೋ ಆನ್ ಮಾಡಿ ಮೀಟಿಂಗ್ ಅಟೆಂಡ್ ಮಾಡಲು ಸೂಚಿಸಿದ್ದಾರೆ.

ಬೇರೆ ದಾರಿ ಇಲ್ಲದೆ ಉದ್ಯೋಗಿ ವಿಡಿಯೋ ಆನ್ ಮಾಡಿದ್ದಾರೆ. ಈ ವೇಳೆ ಉದ್ಯೋಗಿ ಸ್ಥಿತಿ ನೋಡಿ ಬಾಸ್ ಅಚ್ಚರಿಗೊಂಡಿದ್ದಾರೆ. ಕಾರಣ ಉದ್ಯೋಗಿ ಆಸ್ಪತ್ರೆ ಬೆಡ್ ಮೇಲೆ ಡ್ರಿಪ್ ಹಾಕಿ ಮಲಗಿದ್ದ. ಆದರೂ ಕಚೇರಿ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ. ಆರಂಭಿಕ ಕೆಲ ದಿನ ಆರೋಗ್ಯ ಸಮಸ್ಯೆಗೆ ರಜೆ ಹಾಕಿದ್ದ ಉದ್ಯಮಿ ಬಳಿಕ ರಜೆ ಹಾಕಿರಲಿಲ್ಲ. ಆದರೆ ಚಿಕಿತ್ಸೆ ಮುಂದುವರಿದಿತ್ತು. ಇತ್ತ ಉದ್ಯೋಗಿ ಆಸ್ಪತ್ರೆಯಿಂದಲೇ ಕೆಲಸ ಮಾಡಲು ಶುರು ಮಾಡಿದ್ದ. ಉದ್ಯೋಗಿಯ ಪರಿಸ್ಥಿತ ನೋಡಿ ಬಾಸ್ ಅಚ್ಚರಿಗೊಂಡಿದ್ದಾರೆ. 

ತಕ್ಷಣವೇ ಈ ಪರಿಸ್ಥಿತಿಯಲ್ಲಿ ಯಾಕೆ ಮೀಟಿಂಗ್ ಅಟೆಂಡ್ ಮಾಡಿದ್ದೀ ಎಂದು ಪ್ರಶ್ನಿಸಿದ್ದಾರೆ. ಬಳಿಕ ಪರಿಸ್ಥಿತಿ ವಿವರಿಸಲಾಗಿದೆ. ವೀಡಿಯೋ ಆನ್ ಮಾಡಿದ ಕಾರಣ ಉದ್ಯೋಗಿಗೆ ತಕ್ಷಣವೆ ರಜೆಗೆ ಅನುಮತಿ ನೀಡಲಾಗಿದೆ. ಈ ಘಟನೆ ಕುರಿತು ವಿವರಿಸಿರುವ ಉದ್ಯೋಗಿ, ಬಾಸ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದರು. ವಿಡಿಯೋ ಆನ್ ಮಾಡಿ ನನಗೆ ವಿಶ್ರಾಂತಿ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.

ಆನ್‌ಲೈನ್ ಮೀಟಿಂಗ್ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದೆ. ವಿಡಿಯೋ ಮೀಟಿಂಗ್ ವೇಳೆ ಹಿಂಭಾಗದಲ್ಲಿ ನಡೆದ ಘಟನೆಗಳು ವೈರಲ್ ಆದ ಹಲವು ಘಟನೆಗಳಿವೆ.