Asianet Suvarna News Asianet Suvarna News

ತೌಕ್ಟೆ ಚಂಡಮಾರುತ ಹಿನ್ನೆಲೆ ಮುಂಬೈನಲ್ಲಿ ಆರೆಂಜ್ ಅಲರ್ಟ್, ಲಸಿಕೆ ಅಭಿಯಾನಕ್ಕೆ ಬ್ರೇಕ್!

  • ಮುಂಬೈಗೆ ಅಪ್ಪಳಿಸಲಿದೆ ತೌಕ್ಟೆ ಚಂಡಮಾರುತ 
  • ಮುಂಬೈನಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಆರೇಂಜ್ ಅಲರ್ಟ್ ಘೋಷಣೆ
  • ಲಸಿಕೆ ಅಭಿಯಾನಕ್ಕೂ ಬ್ರೇಕ್ ಹಾಕಿದ ಸರ್ಕಾರ
No Covid vaccination drive in Mumbai on Monday due to cyclone Tauktae ckm
Author
Bengaluru, First Published May 16, 2021, 7:32 PM IST

ಮುಂಬೈ(ಮೇ.16): ಕೊರೋನಾ ವೈರಸ್ ಮಹಾಮಾರಿ ನಡುವೆ ಇದೀಗ ತೌಕ್ಟೆ ಚಂಡಮಾರುತ ಆತಂಕ ಭಾರತದ ಕರಾವಳಿ ಭಾಗದಲ್ಲಿ ಅವಂತಾರ ಸೃಷ್ಟಿಸಿದೆ. ಕೇರಳ, ಕರ್ನಾಟಕದಲ್ಲಿ ಈಗಾಗಲೇ ತೌಕ್ಟೆ ಚಂಡಮಾರುತ ಅನಾಹುತ ಸೃಷ್ಟಿಸಿದೆ. ನಾಳೆ(ಮೇ.17) ಮುಂಬೈಗೆ ತೌಕ್ಟೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಮುಂಬೈನಲ್ಲಿ ನಾಳೆ ಲಸಿಕೆ ಅಭಿಯಾನಕ್ಕೆ ಬ್ರೇಕ್ ಹಾಕಲಾಗಿದೆ.

ಭಾರೀ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ, ಈ ಜಿಲ್ಲೆಗಳಲ್ಲಿ ಅಲರ್ಟ್

ಈ ಕುರಿತು ಮುಂಬೈ ಮಹಾನರಗರಿ ಪಾಲಿಕೆ ಸ್ಪಷ್ಟಪಡಿಸಿದೆ. ತೌಕ್ಟೆ ಚಂಡ ಮಾರುತದಿಂದ ದಕ್ಷಿಣ ಭಾರತದಲ್ಲಿ ಹಲವು ನಷ್ಟ ಸಂಭವಿಸಿದೆ. ಸೋಮವಾರ ಮುಂಬೈಗೆ ಅಪ್ಪಳಿಸಲಿರುವ ಕಾರಣ ಮುನ್ನಚ್ಚೆರಿಕಾ ಕ್ರಮವಾಗಿ ಲಸಿಕೆ ಅಭಿಯಾನವನ್ನು ಒಂದು ದಿನ ಸ್ಥಗಿತಗೊಳಿಸುತ್ತಿದ್ದೇವೆ ಎಂದಿದೆ. ಮಂಗಳವಾರ, ಬುಧವಾರ ಹಾಗೂ ಗುರವಾರ ಎಂದಿನಂತೆ ಲಸಿಕೆ ನೀಡಲಾಗುವುದು ಎಂದು ಪಾಲಿಕೆ ಹೇಳಿದೆ.

ಕೇರಳ, ಕರ್ನಾಟಕದ ಸೇರಿ ಹಲವೆಡೆ ತೌಕ್ಟೆ ತೀವ್ರ ಪರಿಣಾಮ: 100 ರಿಲೀಫ್ ತಂಡ ರೆಡಿ  

ಮುಂಬೈನ ಸಮುದ್ರ ತೀರದಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ 580ಕ್ಕೂ ಹೆಚ್ಚಿನ ಸೋಂಕಿತರನ್ನು ಮುನ್ನೆಚ್ಚೆರಿಕಾ ಕ್ರಮವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ.  ಮೇ.17ರಂದು ಗುಜರಾತ್‌ನ ಪೋರಬಂದರ್‌ಗೆ ಚಂಡಮಾರುತ ಪ್ರಬಲವಾಗಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು ಭವನಗರ ಜಿಲ್ಲೆಯ ಮಹುವಾ ಸಮುದ್ರ ತೀರಕ್ಕೆ ಮಾರ್ಚ್ 18 ರಂದು ಚಂಡ ಮಾರುತ ಅಪ್ಪಳಿಸಲಿದೆ. 

Follow Us:
Download App:
  • android
  • ios