ನವದೆಹಲಿ(ನ.09): ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ವೈರಸ್‌ ಲಸಿಕೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗುತ್ತಿರುವಾಗಲೇ, ಕೊರೋನಾ ಲಸಿಕೆ ಪಡೆಯಲು ಶ್ರೀಸಾಮಾನ್ಯರು 2022ರವರೆಗೂ ಕಾಯಬೇಕಾಗುತ್ತದೆ ಎಂದು ಏಮ್ಸ್‌ ವೈದ್ಯ ಹಾಗೂ ಕೊರೋನಾ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಡಾ| ರಣದೀಪ್‌ ಗುಲೇರಿಯಾ ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಕೊರೋನಾ ಲಸಿಕೆ ಮುಕ್ತವಾಗಿ ಲಭ್ಯವಾಗಲು ಒಂದು ವರ್ಷ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಅಧಿಕವಾಗಿದೆ. ಹೀಗಾಗಿ ನಮಗೆ ಸಮಯ ಹೆಚ್ಚು ಬೇಕಾಗುತ್ತದೆ. ದೇಶದ ಮೂಲೆಮೂಲೆಗೂ ಲಸಿಕೆ ತಲುಪಿಸುವುದು, ಕೋಲ್ಡ್‌ ಚೈನ್‌ ನಿರ್ವಹಿಸುವುದು, ಸೂಕ್ತ ಪ್ರಮಾಣದ ಸಿರಿಂಜ್‌, ಸೂಜಿಗಳನ್ನು ಸಂಗ್ರಹಿಸುವುದು ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ತಡೆಗೆ ಬಿಸಿಜಿ ಲಸಿಕೆ ಪರಿಣಾಮಕಾರಿ

ಬಿಸಿಜಿ ಲಸಿಕೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದು ಕಂಡು ಬಂದಿದೆ. ಅಧ್ಯಯನದ ವೇಳೆ ತಿಳಿದುಬಂದ ಅಂಶಗಳನ್ನು ಇಂಡಿಯನ್‌ ಜರ್ನಲ್‌ ಆಫ್‌ ಅಪ್ಲೈಯ್ಡ್‌ ರಿಸಚ್‌ರ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕೊರೋನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ