Asianet Suvarna News Asianet Suvarna News

ಸಿಎಎ, ಎನ್ಆರ್‌ಸಿ ನಿಷೇಧ, ಹೆಣ್ಣುಮಕ್ಕಳಿಗೆ ಕನ್ಯಾಶ್ರೀ ಯೋಜನೆ; ಟಿಎಂಸಿ ಪ್ರಣಾಳಿಕೆ ಪ್ರಕಟ!

ಲೋಕಸಭಾ ಚುನಾವಣೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹೆಣ್ಣುಮಕ್ಕಳಿಗೆ ಕನ್ಯಾಶ್ರಿ ಯೋಜನೆ, ಮನರೇಗಾ ವೇತನ ಹೆಚ್ಚಳ ಸೇರಿದಂತೆ ಹಲವು ಘೋಷಣೆಗಳು ಹೊರಬಿದ್ದಿದೆ. ಇದೇ ವೇಳೆ ಸಿಎಎ ವಾಪಸ್, ಎನ್ಆರ್‌ಸಿಗೆ ತಡೆ ಸೇರಿದಂತೆ ಪ್ರಮುಖ ಭರವಸೆಗಳನ್ನು ಟಿಎಂಸಿ ನೀಡಿದೆ.
 

No CAA NRC UCC TMC Release Manifesto for upcoming Lok sabha Election 2024
Author
First Published Apr 17, 2024, 4:43 PM IST

ಕೋಲ್ಕತಾ(ಏ.16) ಲೋಕಸಭಾ ಚುನಾವಣಾ ಕಾವು ಏರತೊಡಗಿದೆ. ಪಕ್ಷ, ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ. ಇದೀಗ ತೃಣಮೂಲ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮತದಾರರಿಗೆ ಭರ್ಜರಿ ಘೋಷಣೆಗಳನ್ನು ನೀಡಿದೆ.  ಈ ಪೈಕಿ ತಾವು ಅಧಿಕಾರಕ್ಕೆ ಬಂದರೆ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಸಿಎಎ ವಾಪಸ್ ಪಡೆಯುವುದಾಗಿ ಹೇಳಿದೆ. ಇಷ್ಟೇ ಅಲ್ಲ ಜಾರಿ ಮಾಡಲು ಹೊರಟಿರುವ ಎನ್ಆರ್‌ಸಿಗೆ ನಿಷೇಧ ಹೇರುವುದಾಗಿ ಟಿಎಂಸಿ ಹೇಳಿದೆ.

ಪ್ರಮುಖವಾಗಿ 10 ಘೋಷಣೆಗಳನ್ನು ಟಿಎಂಸಿ ಮಾಡಿದೆ. ಈಾಗಾಗಲೇ ಮಮತಾ ಬ್ಯಾನರ್ಜಿ ಸಿಎಎ ವಿರುದ್ಧ ಕಿಡಿ ಕಾರಿದ್ದರು. ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದರು. ಇದರಂತೆ ಪ್ರಣಾಳಿಕೆಯಲ್ಲೂ ಸಿಎಎ ವಾಪಸ್ ಪಡೆಯುವ ಭರವಸೆ ನೀಡಿದ್ದಾರೆ. ಇಂಗ್ಲೀಷ್, ಬಂಗಾಳಿ ಸೇರಿದಂತೆ 7 ಪ್ರಮುಖ ಭಾಷೆಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ ನೇಪಾಳಿ ಹಾಗೂ ಸಂತಾಲ್ ಭಾಷೆಯೂ ಸೇರಿದೆ.

ಕುಡುಕ ಯುವಕರಿಂದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷನ ಕಾರು ಅಡ್ಡಗಟ್ಟಿ ಕಿರಿಕ್; ಟಿಎಂಸಿ ಕೈವಾಡ ಆರೋಪ

ಕೂಲಿ ಕಾರ್ಮಿಕರಿಗೆ ಕನಿಷ್ಟ 100 ದಿನ ಕೆಲಸ ಹಾಗೂ ಪ್ರತಿ ದಿನದ ವೇತವನ್ನು 400 ರೂಪಾಯಿಗೆ ಏರಿಕೆ
ಎಲ್ಲಾ ಬಡವರಿಗೆ ಸಂಪೂರ್ಣ ಉಚಿತ ಮನೆ ಯೋಜನೆ
BPL ಕುಟುಂಬಸ್ಥರಿಗೆ ವಾರ್ಷಿಕ 10 ಗ್ಯಾಸ್ ಸಿಲಿಂಡರ್ ಉಚಿತ
ಪಡಿತರ ಚೀಟಿ ಹೊಂದಿದ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ವಿತರಣೆ
SC/ST ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಭತ್ಯೆ ಹೆಚ್ಚಳ, ಹಿರಿಯ ನಾಗರೀಕರ ಮಾಸಿಕ ಭತ್ಯೆ 1,000 ರೂಪಾಯಿಗೆ ಏರಿಕೆ
ತ್ವರಿತವಾಗಿ ಸ್ವಾಮಿನಾಥನ್ ಕಮಿಷನ್ ನೀಡಿದ ಶಿಫಾರಸುಗಳನ್ನು ಜಾರಿ
ಇಂಡಸ್ಟ್ರಿಯಲ್‌ನ ಪೆಟ್ರೋ ಉತ್ಪನ್ನಗಳಿಗೆ ಆರ್ಥಿಕ ನೆರವು
25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರ ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ ಆರ್ಥಿಕ ನೆರವು
ಸಿಎಎ ವಾಪಸ್ ಮಾಡಲಾಗುತ್ತದೆ, ಎನ್ಆರ್‌ಸಿ ಜಾರಿಗೆ ತಡೆ ನೀಡಲಾಗುತ್ತದೆ. ಇದೇ ವೇಳೆ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಅವಕಾಶವಿಲ್ಲ
ದೇಶಾದ್ಯಂತ ಹೆಣ್ಣುಮಕ್ಕಲ ಸಬಲೀಕರಣಕ್ಕೆ ಕನ್ಯಾಶ್ರೀ ಯೋಜನೆ ಆರಂಭ

ಚುನಾವಣಾ ಪ್ರಚಾರದ ವೇಳೆ ಮಹಿಳೆಗೆ ಕಿಸ್‌ ಕೊಟ್ಟ ಬಿಜೆಪಿ ಅಭ್ಯರ್ಥಿ, ಫೋಟೋ ವೈರಲ್‌!

ಹಲವು ಭರವಸೆಗಳ ತೃಣಮೂಲ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದೇ ವೇಳೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಜೊತೆಗೆ ಯಾವುದೇ ಮೈತ್ರಿ ಇಲ್ಲ , ಟಿಎಂಸಿ ಏಕಾಂಗಿಯಾಗಿ ಹೋರಾಡಲಿದೆ. ಆದರೆ ದೇಶಾದ್ಯಂತ ಟಿಎಂಸಿ ಬಿಜೆಪಿ ದೂರವಿಡಲು ಇಂಡಿಯಾ ಮೈತ್ರಿಗೆ ಬೆಂಬಲ ನೀಡಲಿದೆ ಎಂದಿದೆ.

Follow Us:
Download App:
  • android
  • ios