ಕುಡುಕ ಯುವಕರಿಂದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷನ ಕಾರು ಅಡ್ಡಗಟ್ಟಿ ಕಿರಿಕ್; ಟಿಎಂಸಿ ಕೈವಾಡ ಆರೋಪ

ಕುಡಿದ ಮತ್ತಿನಲ್ಲಿದ್ದ ಅಪರಿಚಿತ ಯುವಕರ ಗುಂಪೊಂದು , ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬರ್ಹಾಂಪುರ ಕ್ಷೇತ್ರದ ಅಭ್ಯರ್ಥಿ ಅಧೀರ್ ರಂಜನ್ ಚೌಧರಿ ಲೋಕಸಭಾ ಪ್ರಚಾರ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆಯಲ್ಲಿ ಅವರ ಕಾರು ಅಡ್ಡಗಟ್ಟಿ ‘ಗೋ ಬ್ಯಾಕ್’ ಘೋಷಣೆ ಕೂಗಿದ ಘಟನೆ ಬರ್ಹಾಂಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.

TMC supporters hooliganism on Adhir Ranjan Chowdhury at west bengal rav

ಬರ್ಹಾಂಪುರ : ಕುಡಿದ ಮತ್ತಿನಲ್ಲಿದ್ದ ಅಪರಿಚಿತ ಯುವಕರ ಗುಂಪೊಂದು , ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬರ್ಹಾಂಪುರ ಕ್ಷೇತ್ರದ ಅಭ್ಯರ್ಥಿ ಅಧೀರ್ ರಂಜನ್ ಚೌಧರಿ ಲೋಕಸಭಾ ಪ್ರಚಾರ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆಯಲ್ಲಿ ಅವರ ಕಾರು ಅಡ್ಡಗಟ್ಟಿ ‘ಗೋ ಬ್ಯಾಕ್’ ಘೋಷಣೆ ಕೂಗಿದ ಘಟನೆ ಬರ್ಹಾಂಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆಗೆ ತೃಣಮೂಲ ಕಾಂಗ್ರೆಸ್ ಹೊಣೆಯೆಂದು ಅಧೀರ್‌ ಆರೋಪಿಸಿದ್ದಾರೆ.‘ ಇದು ನನ್ನನ್ನು ತಡೆದು ನಿಲ್ಲಿಸಬೇಕು ಎನ್ನುವ ತಂತ್ರ. ಇದರ ಹಿಂದೆ ಟಿಎಂಸಿ ಕೈವಾಡವಿದ್ದು ಕಳೆದ ಚುನಾವಣೆಯ ಸಂದರ್ಭದಲ್ಲಿಯೂ ಇದೇ ರೀತಿ ತಂತ್ರವನ್ನು ಉಪಯೋಗಿಸಿತ್ತು’ ಎಂದು ಟಿಎಂಸಿ ವಿರುದ್ಧ ಕಿಡಿಕಾರಿದ್ದಾರೆ.

ಬರ್ಹಾಂಪುರ ಕ್ಷೇತ್ರದಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ. 1999ರಿಂದ ಬರ್ಹಾಂಪುರ ಕ್ಷೇತ್ರದಿಂದ ಗೆದ್ದು ಬರುತ್ತಿರುವ ಅಧೀರ್‌ ಈ ಸಲ ಟಿಎಂಸಿ ಅಭ್ಯರ್ಥಿ, ಕ್ರಿಕೆಟಿಗ ಯೂಸುಫ್‌ ಪಠಾಣ್‌ರನ್ನು ಎದುರಿಸುತ್ತಿದ್ದಾರೆ.

ಮಿಠಾಯಿ ಅಂಗಡಿಗೆ ಹಠಾತ್ ಭೇಟಿ; ಜಾಮೂನು ತಿಂದು ಸ್ಟಾಲಿನ್‌ಗೆ ಮೈಸೂರು ಪಾಕ್ ತಿನ್ನಿಸಿದ ರಾಹುಲ್ ಗಾಂಧಿ!

Latest Videos
Follow Us:
Download App:
  • android
  • ios