ಜೈಪುರ(ಡಿ. 27) ಕೃಷಿ ಮಸೂದೆ, ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಎಪಿಎಂಸಿ ಬಿಲ್ ವಿರೋಧಿಸಿ ಎನ್‌ಡಿಎ ಯಿಂದ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ (ಆರ್‌ಎಲ್‌ಪಿ) ಹೊರಬರುವ ನಿರ್ಧಾರ ಮಾಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಗೆ ಬರುತ್ತೇವೆ ಎಂದು ಆರ್‌ಎಲ್‌ಪಿ ಅಧ್ಯಕ್ಷ ಹನುಮಾನ್ ಬೆನಿವಾಲ್ ಖಚಿತಪಡಿಸಿದ್ದಾರೆ. ಆದರೆ ನಾವು ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹನುಮಾನ್ ಬೆನಿವಾಲ್  ಮಾತನಾಡಿ, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದೇವು. ಪ್ರತಿಭಟನೆಯನ್ನು ನಡೆಸಿದ್ದೇವು. ಆದರೆ ಕೇಂದ್ರ ಸರ್ಕಾರ ಯಾವುಕ್ಕೂ ಬೆಲೆ ನೀಡಿಲ್ಲ. ಹಾಗಾಗಿ ಹೊರಕ್ಕೆ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ಮೋದಿ ಅದ್ಭುತ ಠಕ್ಕರ್

ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉದ್ದೇಶೀಸಿ ಮಾತನಾಡಿ ಬೇಕಾದರೆ ನಾನು ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಡಿಸೆಂಬರ್ 19 ರಂದು, ಬೆನಿವಾಲ್ ಸಂಸದೀಯ ಸಮಿತಿಗಳಾದ ಕೈಗಾರಿಕೆಗಳ ಸ್ಥಾಯಿ ಸಮಿತಿ, ಪಿಟಿಷನ್ ಸಮಿತಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಮಾಲೋಚನಾ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದರು.

ಎನ್‌ಡಿಎ ಯ ಮತ್ತೊಂದು ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಹ ಕೃಷಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿ ಒಕ್ಕೂಟದಿಂದ ಹೊರಕ್ಕೆ ಬಂದಿತ್ತು.