ಪಟ್ನಾ (ಆ. 07): ಹಾರದಲ್ಲಿ 2015 ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ಗೆ ಯಾವ ಮಟ್ಟದ ಜನಪ್ರಿಯತೆ ಇತ್ತೋ ಆ ಪ್ರಮಾಣದಲ್ಲಿ 2020ರಲ್ಲಿ ಗಾಳಿ ಪೂರ್ತಿ ಅವರ ಪರವಾಗಿ ಬೀಸುತ್ತಿಲ್ಲ. ಆದರೆ ಬಿಹಾರದಲ್ಲಿ ಸದ್ಯದ ಸ್ಥಿತಿಯಲ್ಲಿ ನಿತೀಶ್‌ಗೆ ಪರ್ಯಾಯ ಯಾರು ಎಂಬ ಪ್ರಶ್ನೆಗೂ ಉತ್ತರವಿಲ್ಲ.

ರಾಮಮಂದಿರ ಹೋರಾಟ: ಆ ಕಾಲದ ಮಸುಕು ನೆನಪುಗಳು!

ಮುಂಬೈ, ದಿಲ್ಲಿ, ಪುಣೆ, ಕೊಲ್ಕತ್ತಾಗಳಲ್ಲಿ ಸಿಕ್ಕಿ ಹಾಕಿಕೊಂಡು ಊರಿಗೆ ಮರಳ ಬೇಕೆಂದಿದ್ದ ವಲಸಿಗರಿಗೆ ನಿತೀಶ್‌ ಬಗ್ಗೆ ಆಕ್ರೋಶವಿದೆ. ಒಟ್ಟಾರೆ ಕೊರೋನಾವನ್ನು ನಿರ್ವಹಿಸಿರುವ ರೀತಿ ಬಗ್ಗೆ ಕೂಡ ಮೆಚ್ಚುಗೆ ಇಲ್ಲ. ಆದರೆ ನಿತೀಶ್‌ ಎದುರಾಳಿ ಲಾಲು ಪುತ್ರ ತೇಜಸ್ವಿಗೆ; ಒಂದು, ಅನುಭವ ಇಲ್ಲ. ಎರಡು, ಎಲ್ಲರನ್ನೂ ಒಟ್ಟಿಗೆ ಒಯ್ಯುವ ಸಾಮರ್ಥ್ಯ ಇಲ್ಲ. ಸಹೋದರ ತೇಜ್‌ ಪ್ರತಾಪ್‌ ಮತ್ತು ಅಕ್ಕ ಮಿಸಾ ಅಂದರೆ ತೇಜಸ್ವಿ ಯಾದವ್‌ಗೆ ಅಷ್ಟಕಷ್ಟೆ. ಮಿತ್ರ ಪಕ್ಷ ಕಾಂಗ್ರೆಸ್‌ ಬಳಿ ಕೂಡ ನಾಯಕತ್ವ ಇಲ್ಲ. ಜೊತೆಗೆ ಇದ್ದವರನ್ನೆಲ್ಲ ನಿತೀಶ್‌ ತಮ್ಮ ಜೊತೆ ಒಯ್ದು ಆಗಿದೆ. ಆದರೆ ಚುನಾವಣೆಗೆ ಮೂರು ತಿಂಗಳು ಇನ್ನೂ ಬಾಕಿ ಇದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ