Asianet Suvarna News Asianet Suvarna News

40 ಸ್ಥಾನ ಗೆದ್ದ ನಿತೀಶ್ ಮುಖ್ಯಮಂತ್ರಿ ಹೇಗೆ ಸಾಧ್ಯ? ಹೊಸ ದಾಳ ಉರುಳಿಸಿದ RJD!

ಬಿಹಾರದಲ್ಲಿ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಎನ್‌ಡಿಎ ಸಭೆಗೂ ಮೊದಲೇ ನೀತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಎಂಬುದನ್ನು ಘೋಷಿಸಲಾಗಿದೆ. ಇದೀಗ ಚುನಾವಣೆಯಲ್ಲಿ ಮುಖಭಂಘ ಅನುಭವಿಸಿದ ಆರ್‌ಜೆಡಿ  ಹೊಸ ದಾಳ ಉರುಳಿಸಿದೆ.

Nitish kumar JDU won only 43 seats how can he become cm RJD raised against jdu ckm
Author
Bengaluru, First Published Nov 15, 2020, 2:53 PM IST

ಪಾಟ್ನಾ(ನ.15): ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ನಾಳೆ(ನ.16) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಕೂಟ ನಿತೀಶ್‌ಗೆ ಪಟ್ಟ ಕಟ್ಟುವುದಾಗಿ ಖಚಿತಪಡಿಸಿದೆ. ಇದರ ಬೆನ್ನಲ್ಲೇ ತೇಜಸ್ವಿ ಯಾದವ್ ನೇತೃತ್ವದ RJD ಇದೀಗ ನಿತೀಶ್ ಪ್ರಮಾಣವಚನಕ್ಕೆ ಅಡ್ಡಗಾಲು ಹಾಕಲು ಹೊಸ ದಾಳ ಉರುಳಿಸಿದೆ.

"

ಗಠಬಂಧನ್‌ಗೆ ‘ತವರೂರಲ್ಲೇ’ ಆಘಾತ: ಯಾವ ಪಕ್ಷಕ್ಕೆ ಏನು ಸಂದೇಶ?

ಕೇವಲ 43 ಸ್ಥಾನ ಗೆದ್ದ ನಿತೀಶ್ ಕುಮಾರ್ ನೇತೃತ್ವದ ಆರ್‌ಜೆಡಿ 43 ಸ್ಥಾನಗೆದ್ದಿದೆ. ಬಿಜೆಪಿಗಿಂತ ಕಡಿಮೆ ಸ್ಥಾನ ಗೆದ್ದ ನಿತೀಶ್ ಕುಮಾರ್ ಹೇಗೆ ಬಿಹಾರ ಮುಖ್ಯಮಂತ್ರಿಯಾಗುತ್ತಾರೆ ಎಂದು ಆರ್‌ಜೆಡಿ ಪ್ರಶ್ನಿಸಿದೆ. ಬಿಹಾರ ಜನತೆ ನಿತೀಶ್ ಕುಮಾರ್ ಅವರನ್ನು ತಿರಸ್ಕರಿಸಿದ್ದಾರೆ.  ಹೀಗಿರುವಾಗ ನಿತೀಶ್ ಮತ್ತೆ ಮುಖ್ಯಮಂತ್ರಿಯಾಗುವುದು ಸರಿಯಲ್ಲ ಎಂದು ಆರ್‌ಜೆಡಿ ಹೇಳಿದೆ.

ಬಿಹಾರ ಗೆದ್ದ ಎನ್‌ಡಿಎ, ಪ್ರಜಾಪ್ರಭುತ್ವಕ್ಕೆ ಸಂದ ಜಯ: ಮೋದಿ!

NDA ಸಭೆಯಲ್ಲಿ ನಿತೀಶ್ ಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಸುಶೀಲ್ ಮೋದಿ ಉಪಮುಖ್ಯಮಂತ್ರಿಯಾಗಿ ನಾಳೆ(ನ.16) ಪ್ರಮಾವಣ ವಚನ ಸ್ವೀಕರಿಸಲಿದ್ದಾರೆ.  ಬಿಹಾರ ಚುನಾವಣೆಯಲ್ಲಿ  ಬಿಜೆಪಿ 74 ಸ್ಥಾನ ಹಾಗೂ ಜೆಡಿಯು 43 ಸ್ಥಾನ ಗೆದ್ದಿದೆ. ಈ ಮೂಲಕ ಎನ್‌ಡಿಎ 125 ಸ್ಥಾನ ಗೆಲ್ಲೋ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

Follow Us:
Download App:
  • android
  • ios