ನಿತೀಶ್ ಕುಮಾರ್ ಜೆಡಿಯುಗೆ ಸಿಎಂ, ಬಿಜೆಪಿ-ಎಲ್‌ಜೆಪಿಗೆ ಡಿಸಿಎಂ ಸ್ಥಾನ, ಬಿಹಾರ ಸೀಟು ಹಂಚಿಕೆ ಫೈನಲ್ ಆಗಿದೆ. ಟಿಕೆಟ್ ಹಂಚಿಕೆ ವೇಳೆ ತೆಗೆದುಕೊಂಡ ಸೂತ್ರದಡಿ ಸಚಿವ ಸ್ಥಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ನವದೆಹೆಲಿ (ನ.16) ಬಿಹಾರದಲ್ಲಿ ಎನ್‌ಡಿಎ 202 ಸ್ಥಾನ ಗೆಲ್ಲುವ ಮೂಲಕ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇತ್ತ ಮಹಾಘಟಬಂದನ್ ಹೀನಾಯ ಸೋಲು ಕಂಡಿದ್ದು ಮಾತ್ರವಲ್ಲ ಇದೀಗ ಮೈತ್ರಿಯಲ್ಲೇ ಕೋಲಾಹಗಳು ಶುರುವಾಗಿದೆ. ಇತ್ತ ಸರ್ಕಾರ ರಚನೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳು ನಿರತವಾಗಿದೆ. ಈ ಬಾರಿ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲಕ್ಕೆ ಬಹುತೇಕ ಅಂತಿಮ ಮಾತುಕತೆಗಳು ನಡೆದಿದೆ. ಚುನಾವಣೆ ವೇಳೆ ಸೀಟು ಹಂಚಿಕೆಯಲ್ಲಿ ತೆಗೆದುಕೊಂಡ ಅದೇ ಸೂತ್ರದಲ್ಲಿ ಇದೀಗ ಅಧಿಕಾರ ಹಂಚಿಕೆಯೆನ್ನು ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ, ಬಿಜೆಪಿ ಹಾಗೂ ಎಲ್‌ಜೆಪಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.
ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ
ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸೂತ್ರ ಬಹುತೇಕ ಅಂತಿಮಗೊಂಡಿದೆ. ಹೀಗಾಗಿ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋದು ಬಹುತೇಕ ಖಚಿತ. ಜೊತೆಗೆ ಜೆಡಿಯುಗೆ 14 ಸಚಿವ ಸ್ಥಾನಗಳು ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್‌ಡಿಎ ಸರ್ಕಾರ ರಚನೆ ಮಾಡಲು ತಯಾರಿ ನಡೆಸುತ್ತಿದೆ.
ನ.19 ಅಥವಾ 20 ರಂದು ಪ್ರಮಾಣ ವಚನ
ನಾಳೆ ಎನ್‌ಡಿಎ ಲೆಜಿಸ್‌ಲೆಟೀವ್ ಅಸೆಂಬ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಬಳಿಕ ಈ ನಾಯಕ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ. ಸೂತ್ರದ ಪ್ರಕಾರ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ. ಹೀಗಾಗಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಭೇಟಿಯಾಗಿ ಸರ್ಕಾರ ರಚನಗೆ ಮನವಿ ಸಲ್ಲಿಸಲಿದ್ದಾರೆ. ನವೆಂಬರ್ 19 ಅಥವಾ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದಕ್ಕೂ ಮೊದಲು ಅಂದರೆ ನವೆಂಬರ್ 17 ರಂದು ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕ ರಾಜೀನಾಮೆ ನೀಡಲಿದ್ದಾರೆ.
ಎನ್‌ಡಿಎ ಮೈತ್ರಿ ಪಕ್ಷಗಳ ಗೆಲುವು
- ಎನ್‌ಡಿಎ ಒಟ್ಟು ಗೆಲುವು 202
- ಬಿಜೆಪಿ ಗೆಲುವು 89
- ಜೆಡಿಯು ಗಲುವು 85
- ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ)ಗೆಲುವು 19
- ಹಿಂದುಸ್ತಾನಿ ಅವಾಮ್ ಮೋರ್ಚಾ (HAMS) ಗೆಲುವು 5
- ರಾಷ್ಟ್ರೀಯ ಲೋಕ ಮೋರ್ಚಾ ಗೆಲುವು 4
