ಬಿಹಾರ ಸೋಲಿನ ಬಳಿಕ ಲಾಲು ಕುಟುಂಬ ಛಿದ್ರ, ಚಪ್ಪಲಿ ಎಸೆದು ಕಿಡ್ನಿ ಕೊಟ್ಟ ಪುತ್ರಿಗೆ ಗೆಟ್ ಔಟ್ ಹೇಳಲಾಗಿದೆ. ಕೊಳಕು ಕಿಡ್ನಿಯನ್ನು ಲಾಲು ಪ್ರಸಾದ್ ಯಾದವ್‌ಗೆ ಕೊಟ್ಟು ಕೋಟಿ ರೂಪಾಯಿ ಪಡೆದಿದ್ದು ಮಾತ್ರವಲ್ಲ, ಟಿಕೆಟ್ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾಟ್ನಾ (ನ.16) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. 202 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದೆ. ಇತ್ತ ಮಹಾಘಟನಬಂದನ್ ತೀವ್ರ ಮುಖಭಂಗ ಅನುಭವಿಸಿದೆ. ಕಾರಣ ಆರ್‌ಜೆಡಿ ಕೇವಲ 25 ಸ್ಥಾನಕ್ಕೆ ಸೀಮಿತಗೊಂಡರೆ, ಕಾಂಗ್ರೆಸ್ 6 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹಲವು ದಶಕಗಳ ಕಾಲ ಬಿಹಾರ ಆಳಿದ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಸದ್ಯ ಪುತ್ರ ತೇಜಸ್ವಿ ಯಾದವ್ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಆದರೆ 25 ಸ್ಥಾನ ಪಡೆದುಕೊಳ್ಳುವ ಮೂಲಕ ಕುಟುಂಬದ ಮನಸ್ತಾಪ ತೀವ್ರಗೊಂಡಿದೆ. ಚುನಾವಣೆ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಣಿ ಆಚಾರ್ಯ ರಾಜಕೀಯ ನಿವೃತ್ತಿ ಘೋಷಿಸಿ, ರಾಜಕೀಯವೂ ಬೇಡ, ಕುಟುಂಬವೂ ಬೇಡ ಎಂದಿದ್ದರು. ಇದರ ಬೆನ್ನಲ್ಲೇ ರೋಹಣಿ ಆಚಾರ್ಯ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಂದೆಗೆ ಕಿಡ್ನಿ ಕೊಟ್ಟ ಲಾಲು ಪುತ್ರಿ ಮೇಲೆ ಚಪ್ಪಲಿ ಎಸೆದು ಮನೆಯಿಂ ಹೊರಹಾಕಲಾಗಿದೆ ಎಂದು ಸ್ವತಃ ರೋಹಿಣಿ ಆಚಾರ್ಯ ಆರೋಪಿಸಿದ್ದಾರೆ.
ಮನೆಯಿಂದ ಹೊರಕ್ಕೆ, ಚಪ್ಪಲಿ ಎಸೆದು ಅವಮಾನ
ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಕುಟುಂಬವೂ ಬೇಡ, ರಾಜಕಾರಣವೂ ಬೇಡ ಎಂದು ನೋವು ತೋಡಿಕೊಂಡ ರೋಹಿಣಿ ಆಚಾರ್ಯ, ಇದೀಗ ಲಾಲು ಪ್ರಸಾದ್ ಯಾದವ್ ಕುಟುಂಬದ ಮನಸ್ತಾಪ ಹಾಗೂ ಜಗಳದ ತೀವ್ರತೆ ಬಯಲಾಗಿದೆ. ಮನೆಯಿಂದ ನನ್ನನ್ನು ಹೊರಹಾಕಲಿದೆ. ನನಗೆ ಸ್ವಾಭಿಮಾನ ಇದೆ, ಆದರೆ ಅಭಿಮಾನ ಬೀದಿಯಲ್ಲಿ ಹರಾಜಹಾಕುವಂತೆ ಮಾಡಿದ್ದಾರೆ. ನನಗೆ ಅವಾಮಾನ ಮಾಡಿದ್ದಾರೆ. ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಅನಾಥರನ್ನಾಗಿ ಮಾಡಿದರು. ಯಾರು ನನ್ನ ಹಾದಿಯಲ್ಲಿ ನಡೆದಿಲ್ಲ. ಯಾರಿಗೂ ನನ್ನಂತ ಮಗಳು ಸಹದೋರಿ ಸಿಗ್ಗಲ ಎಂದು ರೋಹಿಣಿ ಆಚಾರ್ಯ ಹೇಳಿದ್ದಾರೆ.
ಕೊಳಕು ಕಿಡ್ನಿ ಕೊಟ್ಟ ಲಾಭ ಮಾಡಿದರು ಎಂದು ಆರೋಪ
ತಂದೆಯ ಕಷ್ಟ, ಆರೋಗ್ಯ ನೋಡಿ ನಾನು ನನ್ನ ಕುಟುಂಬವನ್ನು, ಪತಿ, ಅತ್ತೆ ಮಾವ ಯಾರನ್ನೂ ಕೇಳದೆ ತಂದೆಗೆ ನನ್ನ ಕಿಡ್ನಿ ನೀಡಿದೆ. ಇದರ ನೋವು ತ್ಯಾಗ ಯಾರಿಗೂ ಗೊತ್ತಾಗುತ್ತಿಲ್ಲ. ಆದರೆ ಕೊಳಕು ಕಿಡ್ನಿಯನ್ನು ತಂದೆಗೆ ನೀಡಿ ಕೋಟಿ ಕೋಟಿ ರೂಪಾಯಿ ಲಾಭ ಮಾಡಿದ್ದಾರೆ ಎಂದು ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಕೊಳಕು ಕಿಡ್ನಿ ಲಾಲು ಪ್ರಸಾದ್ ಯಾದವ್‌ಗೆ ನೀಡಿ ಕೋಟಿ ರೂಪಾಯಿ ಪಡೆದಿದ್ದು ಮಾತ್ರವಲ್ಲ,ಜೊತೆಗೆ ಚನಾವಣಾ ಟಿಕೆಟ್ ಕೂಡ ಪೆಡೆಯಲಾಗಿದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ನೇರವಾಗಿ ರೋಹಣಿ ಆಚಾರ್ಯ ಸಹೋದರ ತೇಜಸ್ವಿ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತೇಜಸ್ವಿ ಯಾದವ್, ಆತನ ಆಪ್ತರಾದ ಸಂಜಯ್ ಯಾದವ್ ಹಾಗೂ ರಮೀಜ್ ಅಲಂ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಆರ್‌ಜೆಡಿ ಸೋಲನ್ನು ಸ್ವೀಕರಿಸಲು ಸಾಧ್ಯವಾಗದೆ ನನ್ನ ಮೇಲೆ ತೀರಿಸಿಕೊಳ್ಳುತ್ತದ್ದಾರೆ. ಎಲ್ಲಾ ಹೆಣ್ಣು ಮಕ್ಕಳು, ಸಹೋದರಿಯರಿಗೆ ನನ್ನ ಸೂಚನೆ, ನಿಮ್ಮ ಮನೆಯಲ್ಲಿ ಸಹೋದರ ಆತನ ಕುಟುಂಬಗಳು ಇದ್ದರೆ ನೀವು ಮದೆಯಾದ ಮೇಲೆ ನಿಮ್ಮ ಪತಿ ಮಕ್ಕಳು ಹಾಗೂ ಕುಟುಂಬದ ಮೇಲೆ ಕಾಳಜಿ ತೋರಿಸಿ, ನಿಮ್ಮ ಮನೆ, ಸಹೋದರರು ಅಲ್ಲಿನ ಕುಟುಂಬದ ಕುರಿತಲ್ಲ. ಇದರಿಂದ ನಿಮಗೆ ನಷ್ಟವೇ ಹೆಚ್ಚು ಎಂದು ರೋಹಣಿ ಆಚಾರ್ಯ ಹೇಳಿದ್ದಾರೆ. ಬಿಹಾರದಲ್ಲಿ 140 ಸ್ಥಾನದಲ್ಲಿ ಸ್ಪರ್ಧಿಸಿದ ಆರ್‌ಜೆಡಿ 25 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
