ರಾಂಚಿ(ನ.22): ಮಹಾರಾಷ್ಟ್ರದಲ್ಲಿ ರಚನೆಯಾಗಲಿರುವ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿ ಸರ್ಕಾರದ ಆಯಸ್ಸು ಕೇವಲ 6 ತಿಂಗಳು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.

ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಲು ಶಿವಸೇನೆ ಶತ ಪ್ರಯತ್ನ ಮಾಡುತ್ತಿದ್ದು, ಕೇವಲ 6 ತಿಂಗಳುಗಳ ಕಾಲ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಗಡ್ಕರಿ ವ್ಯಂಗ್ಯವಾಡಿದ್ದಾರೆ.

ವಾರಾಂತ್ಯಕ್ಕೆ ರಚನೆಯಾಗಲಿದೆ ಹೊಸ ಸರ್ಕಾರ: ತ್ರಿಮೂರ್ತಿಗಳ ಕನಸು ಸಾಕಾರ?

ಜಾರ್ಖಂಡ್ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ನಿತಿನ್ ಗಡ್ಕರಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಸೈದ್ಧಾಂತಿಕವಾಗಿ ಭಿನ್ನ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ಹೇಳಿದರು. 

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೂರು ಪಕ್ಷಗಳು ಒಂದಾಗಿವೆ. ಆದರೆ ಸರ್ಕಾರ ರಚನೆ ಮಾಡಿದರೂ ಅದರ ಆಯಸ್ಸು 6 ರಿಂದ 8 ತಿಂಗಳು ಮಾತ್ರ ಎಂದು ಹೇಳಿದರು.

ಬಿಜೆಪಿ-ಶಿವಸೇನೆ ಮೈತ್ರಿ ಕಡಿತವಾಗಿರುವುದು ದೇಶ ಮತ್ತು ಹಿಂದುತ್ವಕ್ಕೆ ಹಿನ್ನಡೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. 

ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?