* ರಸ್ತೆಯ ಗುಣಮಟ್ಟವನ್ನು ಖದ್ದು ಪರೀಕ್ಷಿಸಿದ ಹೆದ್ದಾರಿ ಸಚಿವ* ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌

ನವದೆಹಲಿ(ಸೆ.20): ಶೀಘ್ರದಲ್ಲೇ ಉದ್ಘಾಟನೆ ಆಗಲಿರುವ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗಂಟೆಗೆ 170 ಕಿ.ಮೀ. ವೇಗದಲ್ಲಿ ಟೆಸ್ಟ್‌ ಡ್ರೈವ್‌ ಮಾಡಿ ಗಮನ ಸೆಳೆದಿದ್ದಾರೆ.

ಹೆದ್ದಾರಿಯ ಗುಣಮಟ್ಟಮತ್ತು ಕ್ಷಮತೆಯನ್ನು ಖದ್ದಾಗಿ ಪರೀಕ್ಷಿಸಿದ ನಿತಿನ್‌ ಗಡ್ಕರಿ ಕಿಯಾ ಕಾರ್ನಿ​ವಾ​ಲ್‌ ಕಾರಿನ ಪ್ರಯಾಣಿಕ ಸೀಟಿನಲ್ಲಿ ಕುಳಿತು ಟೆಸ್ಟ್‌ ಡ್ರೈವ್‌ ಕೈಗೊಂಡಿದ್ದರು. ಟೆಸ್ಟ್‌ ಡ್ರೈವ್‌ನ ವಿಡಿಯೋ ಚಿತ್ರೀಕರಣವನ್ನು ನಡೆಸಲಾಗಿತ್ತು. ಈ ವೇಳೆ ಕಾರು ಗರಿಷ್ಠ 170 ಕಿ.ಮೀ. ವೇಗವನ್ನು ತಲುಪಿರುವುದನ್ನು ನೋಡಬಹುದಾಗಿದೆ.

ದೆಹಲಿ ಮುಂಬೈ ಹೆದ್ದಾರಿಯ ವೇಗ ಮಿತಿಯನ್ನು ಗಂಟೆಗೆ 110 ಕಿ.ಮೀ. ನಿಗದಿಪಡಿಸಲಾಗಿದೆ. ಆದರೆ ಟೆಸ್ಟ್‌ ಡ್ರೈವ್‌ಗಾಗಿ ಗರಿಷ್ಠ ವೇಗದಲ್ಲಿ ಕಾರನ್ನು ಓಡಿಸಿ ರಸ್ತೆಯ ಗುಣಮಟ್ಟವನ್ನು ಪರೀಕ್ಷೆ ನಡೆಸಲಾಗಿತ್ತು.

YouTube video player

ದೆಹಲಿ ಮತ್ತು ಮುಂಬೈ ಮಧ್ಯೆ ಸಂಪರ್ಕ ಕಲ್ಪಿಸುವ ಈ ಹದ್ದಾರಿ 1200 ಕಿ.ಮೀ. ಉದ್ದವಿದೆ. ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸಲು 20ರಿಂದ 24 ಗಂಟೆ ತಗುಲುತ್ತಿದೆ. ಎಕ್ಸ್‌ಪ್ರೆಸ್‌ ಹೆದ್ದಾರಿ ಪೂರ್ಣಗೊಂಡ ಬಳಿಕ 8 ಗಂಟೆಯಷ್ಟುಪ್ರಯಾಣ ಸಮಯ ಉಳಿತಾಯ ಆಗಲಿದ್ದು, ದೆಹಲಿ ಮತ್ತು ಮುಂಬೈ ಮಧ್ಯೆ ಕೇವಲ 12 ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ. 2024ರ ವೇಳೆ ಹೆದ್ದಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.