Asianet Suvarna News Asianet Suvarna News

ಸಿಲಿಗುರಿ ಕಾರ್ಯಕ್ರಮದ ನಡುವೆ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರಪೇರಾಗಿ ದಿಢೀರ್ ಆಸ್ಪತ್ರೆ ದಾಖಲಾಗದ ಘಟನೆ ನಡೆದಿದೆ. ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ಶಂಕುುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಗಡ್ಕರಿ ವೇದಿಕೆಯಲ್ಲೇ ಅಸ್ವಸ್ಥಗೊಂಡಿದ್ದಾರೆ.

Nitin Gadkari health suddenly deteriorated while attending elevated road construction program in Siliguri West Bengal ckm
Author
First Published Nov 17, 2022, 4:00 PM IST

ಕೋಲ್ಕತಾ(ನ.17):  ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರಪೇರಾದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಸಿಲಿಗುರಿಯಿಂದ ಉತ್ತರ ಬಂಗಾಳ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಯ ಶಂಕು ಸ್ಥಾಪನೆಗಾಗಿಗಿ ನಿತಿನ್ ಗಡ್ಕರಿ ಸಿಲಿಗುರಿಗೆ ಆಗಮಿಸಿದ್ದರು. 1206 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ. ಈ ಹೆದ್ದಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ನಿತಿನ್ ಗಡ್ಕರಿ ಆರೋಗ್ಯ ಕ್ಷೀಣಿಸಿದೆ. ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ವೇದಿಕೆಯಲ್ಲೇ ನಿತಿನ್ ಗಡ್ಕರಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ವೈದ್ಯರ ತಂಡ ನಿತಿನ್ ಗಡ್ಕರಿಗೆ ಚಿಕಿತ್ಸೆ ನೀಡಿದೆ. ವೇದಿಕೆಯ ಹಿಂಬಾಗದಲ್ಲಿ ಗಡ್ಕರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ಸದ್ಯ ನಿತಿನ್ ಗಡ್ಕರಿ ಚೇತರಿಸಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ನೀರಜ್ ಜಿಂಬಾ ಹೇಳಿದ್ದಾರೆ.

ಸಿಲಿಗುರಿಯ ಶಿವಮಂದಿರ ಮೈದಾನದಲ್ಲಿ ಆಯೋಜಿಸಿದ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ಹೆದ್ದಾರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಹೆದ್ದಾರಿ ಯೋಜನೆಗೆ ಚಾಲನೆ ನೀಡಿರುವ ಫೋಟೋಗಳನ್ನು ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದಾರೆ. ವೇದಿಕೆಯಲ್ಲಿರುವಾಗಲೇ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. 

 

Mangaluru: ಕೊನೆಗೂ suratkal tollgate ರದ್ದು; ನಿಲ್ಲಿಸಿಲ್ಲ ಇನ್ನು ಹೋರಾಟ!

ವೈದ್ಯರ ತಂಡದ ಗಡ್ಕರಿಗೆ ವೇದಿಕೆ ಹಿಂಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಡಾರ್ಜಲಿಂಗ್ ಸಂಸದ ರಾಜು ಬಿಸ್ತಾ ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ರಾಜು ಬಿಸ್ತಾ ಮನೆಯಲ್ಲಿ ವಿಶ್ರಾಂತಿಗೆ ಜಾರಿಗೆ ನಿತಿನ್ ಗಡ್ಕರಿ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ. ಬಳಿಕ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. 

ಗುಜರಾತ್‌ನಲ್ಲೂ ಪ್ರಚಾರದ ಜವಾಬ್ದಾರಿಗೆ ಗಡ್ಕರಿ ಅಲಭ್ಯ ಸಾಧ್ಯತೆ
ನಿತಿನ್ ಗಡ್ಕರಿ ಆರೋಗ್ಯ ಏರಪೇರಾಗಿರುವ ಕಾರಣ ಗುಜರಾತ್ ಚುನಾವಣೆಯಲ್ಲಿ ಪ್ರಚಾರದಿಂದ ಗಡ್ಕರಿ ಹಿಂದೆ ಸರಿಯುವ ಸಾಧ್ಯತೆ. ಗುಜರಾತ್‌ ವಿಧಾನಸಭಾ ಚುನಾವಣೆಗೆ ಬಿಜೆಪಿಯ 40 ಸ್ಟಾರ್‌ ಪ್ರಚಾರಕರ ಪಟ್ಟಿಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ, ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ, ರಾಜ್‌ನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಸ್ಮೃತಿ ಇರಾನಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಯೋಗಿ ಆದಿತ್ಯನಾಥ್‌, ಹೇಮಾಮಾಲಿನಿ ಮೊದಲಾದವರು ಸೇರಿದ್ದಾರೆ. ಆದರೆ ಗಡ್ಕರಿ ಆರೋಗ್ಯ ಕುರಿತು ವೈದ್ಯರು ಗ್ರೀನ್ ಸಿಗ್ನಲ್ ನೀಡಿದ ಬಳಿಕವಷ್ಟೇ ಗುಜರಾತ್ ಪ್ರಚಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕೆಲವೇ ತಿಂಗಳಲ್ಲಿ ಪೆಟ್ರೋಲ್ ಕಾರಿನ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಕಾರು

ಕಳಪೆ ಹೆದ್ದಾರಿ ನಿರ್ಮಾಣ: ಮಧ್ಯಪ್ರದೇಶದ ಜನರಲ್ಲಿ ಗಡ್ಕರಿ ಕ್ಷಮೆಯಾಚನೆ
ಇಲ್ಲಿನ ರಾಷ್ಟ್ರೀಯ ಹೆದ್ದಾ​ರಿ-63ರ ಕಳಪೆ ನಿರ್ಮಾ​ಣದ ಬಗ್ಗೆ ಮಧ್ಯ​ಪ್ರ​ದೇ​ಶದ ಜನರ ಮುಂದೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕ್ಷಮೆ ಯಾಚಿಸಿದ್ದಾರೆ. ತಕ್ಷಣವೇ ಇಲ್ಲಿ ಹೊಸ ದುರಸ್ತಿ ಯೋಜನೆಗೆ ಆದೇಶಿಸಿದ್ದಾರೆ. ಇಲ್ಲಿ ನಡೆದ ಅಷ್ಟಪಥ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ನಿತಿನ ಗಡ್ಕರಿ, ‘ತಪ್ಪಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯುವುದಿಲ್ಲ. ಮಂಡಲ ಹಾಗೂ ಜಬಲ್ಪುರ್‌ ನಡುವಿನ ಹೆದ್ದಾರಿಯನ್ನು 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣ ಕಾರ್ಯ ನನಗೆ ತೃಪ್ತಿ ನೀಡಿಲ್ಲ’ ಎಂದು ಹೇಳಿದರು.

Follow Us:
Download App:
  • android
  • ios