ಆರ್ಥಿಕ ಪ್ಯಾಕೇಜ್: ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸುದ್ದಿಗೋಷ್ಠಿ!
ಕೊರೋನಾ ವೈರಸ್ ವಿರುದ್ಧ ಭಾರತದ ಸಮರ| ಕೊರೋನಾದಿಂದ ನಷ್ಟ ಪರಿಹರಿಸಲು ಕೇಂದ್ರದಿಂದ 20 ಲಕ್ಷ ಕೋಟಿ ರೂ. ನೆರವು ಘೋಷಣೆ| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಆರ್ಥಿಕ ಪ್ಯಾಕೇಜ್‌ನ ವಿಸ್ತಾರವಾದ ಮಾಹಿತಿ
ನವದೆಹಲಿ(ಮೇ.13): ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್‌ನಿಂದ ದೇಶದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಆರ್ಥಿಕ ಸಸಹಾಯ ಮಾಡಲು ಇಪ್ಪತ್ತು ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಸದ್ಯ ಈ ಆರ್ಥಿಕ ಪ್ಯಾಕೇಜ್ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು, ಬುಧವಾರ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಆರ್ಥಿಕ ಪ್ಯಾಕೇಜ್ ಸಂಬಂಧ ವಿಸ್ತಾರವಾದ ಮಾಹಿತಿ ನೀಡಲಿದ್ದಾರೆ.
ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ
ಮಂಗಳವಾರ ರಾತ್ರಿ ಎಂಟು ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪಿಎಂ ಮೋದಿ, ಈ ಪ್ಯಾಕೇಜ್‌ನಿಂದ ದೇಶದ ರೈತ, ಕಾರ್ಮಿಕ, ಸಣ್ಣ ಕೈಗಾರಿಕೆ ಹಾಗೂ ಕೆಲಸಗಾರ ಹೀಗೆ ಪ್ರತಿ ವರ್ಗದವರಿಗೆ ಲಾಭವಾಗಲಿದೆ ಎಂದಿದ್ದರು. ಇದೇ ವೇಳೆ ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕ ಕೆಲ ಕಾರ್ಯಗಳನ್ನು ಹೆಚ್ಚು ಸಮಯ ನಿಲ್ಲಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಎರಡು ಗಜ ಅಂತರ ಪಾಲಿಸಿ, ಮಾಸ್ಕ್ ಧರಿಸಿ ಹಾಗೂ ಎಲ್ಲಾ ನಿಯಮ ಹಾಗೂ ನಿರ್ದೇಶನಗಳನ್ನು ಪಾಲಿಸಿ ಇದರೊಂದಿಗೆ ಬದುಕಲು ಕಲಿಯಬೇಕು. ವೈರಸ್ ವಿರುದ್ಧದ ಸಮರ ಈ ದೀರ್ಘ ಕಾಲವಿರುತ್ತದೆ ಎಂದೂ ಹೇಳಿದ್ದರು.
ಮೇ.17ರ ಬಳಿಕ ಮತ್ತೆ ಲಾಕ್‌ಡೌನ್ ಫಿಕ್ಸ್: ಹೊಸ ರೀತಿ ಎನ್ನುವುದೇ ಸಸ್ಪೆನ್ಸ್...!
ಮೋದಿ ಘೋಷಿಸಿದ್ದು ವಿಶ್ವದ 3ನೇ ಅತಿದೊಡ್ಡ ಪ್ಯಾಕೇಜ್
ಕೊರೋನಾದಿಂದ ಆರ್ಥಿಕತೆ ಮೇಲಾಗಿರುವ ಪರಿಣಾಮ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ನೆರವಿನ ಪ್ಯಾಕೇಜ್ ಆಗಿದೆ. ಕೊರೋನಾದಿಂದ ಆಗಿರುವ ನಷ್ಟಸರಿಪಡಿಸಲು ವಿಶ್ವದ ವಿವಿಧ ದೇಶಗಳು ಆರ್ಥಿಕ ಪ್ಯಾಕೇಜ್ ಘೋಷಣೆ ಆರಂಭಿಸಿವೆ. ಜಪಾನ್ ತನ್ನ ಜಿಡಿಪಿಯ ಶೇ.21.7ರಷ್ಟುಗಾತ್ರದ ಪ್ಯಾಕೇಜ್ ಪ್ರಕಟಿಸಿದ್ದರೆ, ಅಮೆರಿಕ ತನ್ನ ಜಿಡಿಪಿಯ ಶೇ.11ರಷ್ಟುಮೊತ್ತದ ಪ್ಯಾಕೇಜ್ ಘೋಷಿಸಿದೆ. ಇದೀಗ ಭಾರತ ಪ್ರಕಟಿಸಿರುವ ಪ್ಯಾಕೇಜ್ ಜಿಡಿಪಿಯ ಶೇ.10ರಷ್ಟಿರುವುದರಿಂದ ಇದು ವಿಶ್ವದ ಮೂರನೇ ಅತಿದೊಡ್ಡ ಹಣಕಾಸು ನೆರವಾಗಿದೆ.