ನವದೆಹಲಿ (ಡಿ. 20): ‘ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣ 2012 ರ ಡಿಸೆಂಬರ್‌ನಲ್ಲಿ ನಡೆದ ವೇಳೆ ನಾನು ಅಪ್ರಾಪ್ತನಾಗಿದ್ದೆ’ ಎಂದು ಪ್ರಕರಣದ ದೋಷಿ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಇದರಿಂದ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುವ ಅಪರಾಧಿಯ ಇನ್ನೊಂದು ಕುತಂತ್ರ ವಿಫಲಗೊಂಡಂತಾಗಿದೆ.

ಅತ್ಯಾಚಾರ ಮಾಡುವವರ ಮನಸ್ಸಲ್ಲಿ ಏನಿರುತ್ತದೆ?

ಬುಧವಾರ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪವನ್ ಗುಪ್ತಾ, ‘ 2012 ರಲ್ಲಿ ಅತ್ಯಾಚಾರ ಮತ್ತು ಹತ್ಯೆ ಘಟನೆ ನಡೆದಾಗ ನಾನಿನ್ನೂ ಅಪ್ರಾಪ್ತನಾಗಿದ್ದೆ. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ನನ್ನ ಖಚಿತ ವಯಸ್ಸು ಪತ್ತೆಹಚ್ಚಲು ನೆರವಾಗಬಲ್ಲ ಮೂಳೆ (ಅಸ್ಥಿ) ಪರೀಕ್ಷೆ ನಡೆಸಿಲ್ಲ. ಹೀಗಾಗಿ ತನಗೆ ನೀಡಿರುವ ಗಲ್ಲು ಶಿಕ್ಷೆ ರದ್ದು ಮಾಡಬೇಕು’ ಎಂದು ಕೋರಿದ್ದ.

ನಿರ್ಭಯಾ ಹತ್ಯಾಚಾರಿಗಳ ಅರ್ಜಿ ವಜಾ, ಗಲ್ಲು ಫಿಕ್ಸ್!

ಇದಕ್ಕೆ ಪೂರಕವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದ. ಗುರುವಾರ ಇದನ್ನು ವಿಚಾರಣೆಗೆ ಕೈಗೆತ್ತಿ ಕೊಂಡ ಕೋರ್ಟ್,‘ಪವನ್ ಪರ ಎ.ಪಿ. ಸಿಂಗ್ ಸಲ್ಲಿಸಿದ ಪ್ರಮಾಣಪತ್ರ ನಕಲಿ’ ಎಂದು ಕಿಡಿಕಾರಿತು. ಅಲ್ಲದೆ, ಕಲಾಪಕ್ಕೆ ಎ.ಪಿ. ಸಿಂಗ್ ಗೈರಾಗಿದ್ದನ್ನು ಗಮನಿಸಿ ₹25, 000 ದಂಡ ವಿಧಿಸಿತು.