Asianet Suvarna News Asianet Suvarna News

ನೀರವ್ ಮೋದಿಗೆ ಇಡಿ ಮತ್ತೊಂದು ಶಾಕ್, ಫ್ಲಾಟ್, ಫಾರ್ಮ್ ಹೌಸ್ ಜಪ್ತಿ

ಬಹುಕೋಟಿ ವಂಚಕ ನೀರವ್ ಮೋದಿಗೆ ಇಡಿಯಿಂದ ಮತ್ತೊಂದು ಶಾಕ್/ 329.66 ಕೋಟಿ ರೂಪಾಯಿ ಮೊತ್ತದ ಫ್ಲಾಟ್ಸ್, ಫಾಮ್೯ ಹೌಸ್, ವಿಂಡ್ ಮಿಲ್, ಶೇರ್ ಮುಟ್ಟುಗೋಲು/ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ

Nirav Modi s assets worth Rs 329 cr seized by ED
Author
Bengaluru, First Published Jul 8, 2020, 7:10 PM IST

ನವದೆಹಲಿ (ಜು. 08)  ಸಾವಿರಾರು ಕೋಟಿ ರೂ. ವಂಚನೆ ಮಾಡಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಒಂದಾದ ಮೇಲೆ ಒಂದು ಶಾಕ್ ನೀಡಲಾಗುತ್ತಿದೆ. ನೀರವ್ ಮೋದಿ ಆಸ್ತಿ ಮುಟ್ಟುಗೋಲು  ಹಾಕಿಕೊಳ್ಳಲಾಗಿದೆ. 

329.66 ಕೋಟಿ ರೂಪಾಯಿ ಮೊತ್ತದ ಫ್ಲಾಟ್ಸ್, ಫಾಮ್೯ ಹೌಸ್, ವಿಂಡ್ ಮಿಲ್, ಶೇರ್ ಗಳು, ಬ್ಯಾಂಕ್ ಭದ್ರತಾ ಠೇವಣಿ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.   ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ  ಕೆಲ ದಿನಗಳ ಹಿಂದೆ ಶಾಕ್ ನೀಡಲಾಗಿತ್ತು.  1,350 ಕೋಟಿ ಮೌಲ್ಯದ ಮುತ್ತು ಮತ್ತು ವಜ್ರಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.

ಭಾರತದ ಜೈಲಲ್ಲಿ ಇಲಿಗಳಿವೆ ಎಂದಿದ್ದ ನೀರವ್ ಮೋದಿ

ಹಣ ಅಕ್ರಮ ವರ್ಗಾವಣೆ, ಬ್ಯಾಂಕುಗಳಿಗೆ ವಂಚಿಸಿದ ಆರೋಪ ಹೊತ್ತು, ದೇಶಭ್ರಷ್ಟರಾಗಿರುವ ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿ ಅವರ ಒಡೆತನ ಸಂಸ್ಥೆಗಳಿಗೆ ಸೇರಿದ ವಜ್ರ ಹಾಗೂ ಮುತ್ತುಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಂಗ್‌ಕಾಂಗ್‌ನಿಂದ ಭಾರತಕ್ಕೆ ತಂದಿದ್ದರು. ಈಗ ಮತ್ತೊಂದು ಪ್ರಹಾರ ಮಾಡಲಾಗಿದೆ.

ಕಳೆದ ಡಿಸೆಂಬರ್ ನಲ್ಲಿಯೇ ನೀರವ್ ಮೋದಿಯನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿದೆ. ವಿಜಯ್ ಮಲ್ಯ ಸಹ  ಇದೇ ರೀತಿ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿದ್ದು ಕರೆತರುವ ಯತ್ನ ಮಾಡಲಾಗುತ್ತಿದೆ. ನೀರವ್ ಮೋದಿ ಮೇಲೆ ಪಂಜಾಬ್ ನ್ಯಾಶನಲ್ ಬ್ಯಾಂಕ್‌ ಗೆ 2 ಬಿಲಿಯನ್ ಡಾಲರ್(14 ಸಾವಿರದ 997 ಕೋಟಿ 91 ಲಕ್ಷ ರೂ. )  ವಂಚನೆ ಮಾಡಿರುವ ಆರೋಪ ಇದೆ. 

 

Follow Us:
Download App:
  • android
  • ios