Asianet Suvarna News Asianet Suvarna News

ಕುಡುಕ ತಂದೆ ದಿನಾ ಅಮ್ಮನನ್ನು ಹೊಡೀತಾರೆ: ಪೊಲೀಸರಿಗೆ ದೂರು ನೀಡಿದ ಬಾಲಕ

ಕುಡಿದ ಅಮಲಿನಲ್ಲಿ ತಂದೆ ತಾಯಿಗೆ ಆಗಾಗ್ಗೆ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಪರಿಸ್ಥಿತಿ ಹದಗೆಟ್ಟಾಗ, 9 ವರ್ಷದ ಬಾಲಕ ತನ್ನ ತಾಯಿಯನ್ನು ರಕ್ಷಿಸಲು ಏನಾದರೂ ಮಾಡಬೇಕೆಂದು ನಿರ್ಧರಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. 

nine year old reports abusive father to police in andhra pradesh ash
Author
First Published May 6, 2023, 12:18 PM IST | Last Updated May 6, 2023, 12:45 PM IST

ಗುಂಟೂರು (ಮೇ 6, 2023): ತಾಯಿಯ ಸಂಕಟದಿಂದ ಮನನೊಂದ 9 ವರ್ಷದ ಬಾಲಕನೊಬ್ಬ ಮದ್ಯವ್ಯಸನಿ ತಂದೆಯ ವಿರುದ್ಧ ಬಾಪಟ್ಲಾ ಜಿಲ್ಲೆಯ ಕರ್ಲಪಾಲೆಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾನೆ. 3 ನೇ ತರಗತಿ ವಿದ್ಯಾರ್ಥಿ ಕರ್ಲಪಾಲೆಂನಲ್ಲಿ ವಾಸಿಸುತ್ತಿದ್ದು, ಆತನ ತಂದೆ ಎಸ್‌.ಕೆ. ಸುಭಾನಿ ಟೈಲರ್ ಆಗಿದ್ದರೆ, ತಾಯಿ ಸುಬಂಬಿ ಗೃಹಿಣಿ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿದ ಅಮಲಿನಲ್ಲಿ ತಂದೆ ತಾಯಿಗೆ ಆಗಾಗ್ಗೆ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಪರಿಸ್ಥಿತಿ ಹದಗೆಟ್ಟಾಗ, 9 ವರ್ಷದ ಬಾಲಕ ತನ್ನ ತಾಯಿಯನ್ನು ರಕ್ಷಿಸಲು ಏನಾದರೂ ಮಾಡಬೇಕೆಂದು ನಿರ್ಧರಿಸಿದನು. ಅಲ್ಲದೆ, ಕೆಲವು ತಿಂಗಳ ಹಿಂದೆ ಪೊಲೀಸರ ಸೇವೆಯ ಕುರಿತು ತಮ್ಮ ಶಾಲೆಯಲ್ಲಿ ನಡೆಸಿದ ಜಾಗೃತಿ ಕಾರ್ಯಕ್ರಮಗಳನ್ನು ಸಹ ಬಾಲಕ ನೆನಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!

ಈ ಹಿನ್ನೆಲೆ ಶುಕ್ರವಾರ ಬೆಳಗ್ಗೆ ತನ್ನ ಮನೆಯಿಂದ 700 ಮೀಟರ್ ದೂರದಲ್ಲಿರುವ ಕರ್ಲಪಾಲೆಂ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಎಲ್ಲವನ್ನೂ ವಿವರಿಸಿದ್ದಾನೆ. ಅಲ್ಲದೆ, ಪೊಲೀಸರು ತಂದೆಯ ವಿರುದ್ಧ ಕ್ರಮ ಕೈಗೊಂಡು ತಾಯಿಯನ್ನು ರಕ್ಷಿಸಬೇಕು ಎಂದು ಆತ ಬೇಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಕರ್ಲಪಾಲೆಂ ಎಸ್‌ಐ ಶಿವಯ್ಯ ಅವರು ಬಾಲಕನ ಪೋಷಕರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ಮಾಡಿದ್ದಾರೆ. ಹಾಗೂ, ನಿಮ್ಮ ಮಗು ಜವಾಬ್ದಾರಿಯುತ ಹಾಗೂ ಉತ್ತಮ ಪ್ರಜೆಯಾಗಿ ಬೆಳೆಯಲು ಆರೋಗ್ಯಕರ ವಾತಾವರಣ ನಿರ್ಮಿಸಿಕೊಡುವಂತೆಯೂ ಅವರು ಸಲಹೆ ನೀಡಿದ್ದಾರೆ. ಇನ್ನು, ಮುಂದೆಯೂ ಸುಭಾನಿ ತನ್ನ ಮಾರ್ಗವನ್ನು ತಿದ್ದಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಎಚ್ಚರಿಕೆ ಹೇಳಿದ್ದು, ಆದರೆ ಸದ್ಯ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಲೈಕ್ ಮಾಡಿ ಹಣ ಗಳಿಸ್ಬೋದು ಎಂದು ನಂಬಿ 1.3 ಕೋಟಿ ರೂ ಕಳೆದುಕೊಂಡ ಭೂಪ!

ಇನ್ನೊಂದೆಡೆ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ಲಪಾಲೆಂ ಎಸ್‌ಐ ಶಿವಯ್ಯ, “ಹುಡುಗನ ವರ್ತನೆಯಿಂದ ನನಗೆ ಆಶ್ಚರ್ಯವಾಯಿತು. ಅವನು ತಮ್ಮ ಮನೆಯ ಸಂಪೂರ್ಣ ಪರಿಸ್ಥಿತಿಯನ್ನು ವಿವರವಾಗಿ ವಿವರಿಸಿದನು. ಅವನು ತುಂಬಾ ಪ್ರಬುದ್ಧರಾಗಿದ್ದಾನೆ. ಅಲ್ಲದೆ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಲ್ಲಿ ತುರ್ತು ಸೇವೆಗಳು, ಮಕ್ಕಳಿಗೆ ಶಿಕ್ಷಣ ನೀಡಲು ಪೋಕ್ಸೋ ಕಾಯ್ದೆ ಮತ್ತು ದಿಶಾ ಕುರಿತು ಜಾಗೃತಿ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿದೆ ಎಂದೂ ಅವರು ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

Latest Videos
Follow Us:
Download App:
  • android
  • ios