ಕನಿಷ್ಠ ಬೆಂಬಲ ಬೆಲೆ ಸೇರಿದೆ ಕೆಲ ಬೇಡಿಕೆಗೆ ಆರಂಬಗೊಂಡ ರೈತ ಪ್ರತಿಭಟನೆ ಹಲೆವೆಡೆ ಹಿಂಸಾಚಾರಕ್ಕೆ ತಿರುಗಿದೆ. ಇದರ ನಡುವೆ ರೈತ ಪ್ರತಿಭಟನೆಯಲ್ಲಿ ನಿಹಾಂಗ ಸಿಖರ್ ಕತ್ತಿ ಝಳಪಿಸಿದ್ದಾರೆ. ಇತ್ತ ಉಗ್ರ ಬಿಂದ್ರನ್‌ವಾಲೆ ಪೋಸ್ಟರ್, ಟಿಶರ್ಟ್‌ಗಳು ಪ್ರತಿಭಟನೆಯಲ್ಲಿ ರಾರಾಜಿಸುತ್ತಿದೆ. ಇದರೊಂದಿಗೆ ಈ ಬಾರಿಯ ರೈತರ ಪ್ರತಿಭಟನೆ ಹೈಜಾಕ್ ಆಗಿದೆಯಾ ಅನ್ನೋ ಅನುಮಾನಗಳು ಬಲವಾಗತೊಡಗಿದೆ.
ದೆಹಲಿ(ಫೆ.17) ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿದ ಬೇಡಿಕೆ ಮುಂದಿಟ್ಟ ರೈತರು ದಿಲ್ಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಮಾತುಕತೆಗೂ ರೈತರು ಬಗಿಲ್ಲ. ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳಿಸುತ್ತಿದ್ದಾರೆ. ರೈಲ್ ತಡೆದು ಪ್ರತಿಭಟನೆ ಬಳಿಕ ಗ್ರಾಮೀಣ ಭಾರತ ಬಂದ್ ಆಚರಿಸಿದ್ದಾರೆ. ಇದೀಗ ದೆಹಲಿ ಗಡಿಯಲ್ಲಿ ಹಾಕಿದ್ದ ತಡೆಗೋಡೆ ಮುರಿದು ಒಳ ನುಗ್ಗುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಪೊಲೀಸು ಆಶ್ರುವಾಯ, ಜಲಫಿರಂಗಿ ಸೇರಿದಂತೆ ಹಲವು ಪ್ರಯೋಗ ಮಾಡಿದ್ದಾರೆ. ದಿನ ಕಳಯುತ್ತಿದ್ದಂತೆ ರೈತ ಪ್ರತಿಭಟನೆ ಅಸಲಿ ಮುಖ ಕಳಚುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ನಿಹಾಂಗ ಸಿಖ್‌ರು ಪ್ರತಿಭಟನೆಯಲ್ಲಿ ಕತ್ತಿ ಝಳಪಿಸಿ ಹೋರಾಟಕ್ಕೆ ಧುಮುಕಿದ್ದಾರೆ. ಇನ್ನು ಪ್ರತಿಭಟನಾ ನಿರತ ರೈತರು ಉಗ್ರ ಬಿಂದ್ರನ್‌ವಾಲೆ ಪೋಸ್ಟರ್, ಟಿಶರ್ಟ್ ಧರಿಸಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ರೈತ ಪ್ರತಿಭಟನೆ ಹೈಜಾಕ್ ಆಗಿದೆ ಅನ್ನೋಮಾನಗಳನ್ನು ಹೆಚ್ಚಿಸಿದೆ.
ಶಂಭು ಗಡಿ ಹಾಗೂ ದೆಹಲಿ ಇತರ ಗಢಿಯಲ್ಲಿ ನಿಹಾಂಗ ಸಿಖ್‌ರು ಪೊಲೀಸರ ಮೇಲೆ ಖಡ್ಗದ ಮೂಲಕ ದಾಳಿಗೆ ಪ್ರಯತ್ನಿಸಿದ್ದಾರೆ.2021ರ ಪ್ರತಿಭಟನೆಯಲ್ಲೂ ನಿಹಾಂಗ ಸಿಖರ್ ಆಕ್ರಮಣಕಾರಿ ನಡೆ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಕೆಂಪು ಕೋಟೆ ಮೇಲೆ ಲಗ್ಗೆ ಇಟ್ಟ ರೈತರ ಪ್ರತಿಭಟನೆ ರಾಷ್ಟ್ರ ಧ್ವಜ ಕೆಳಕ್ಕಿಳಿಸಿದ ಖಲಿಸ್ತಾನ ಧ್ವಜ ಹಾರಿಸಿದ್ದರು. ಈ ವೇಳೆ ಪೊಲೀಸರ ಮೇಲೆ ನಿಹಾಂಗ ಸಿಖರ್, ರೈತ ಪ್ರತಿಭಟನಾಕಾರರು ಖಡ್ದಗ ಮೂಲಕ ದಾಳಿ ನಡೆಸಿದ್ದರು. 500ಕ್ಕೂ ಹೆಚ್ಚು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಈ ಬಾರಿಯ ಪ್ರತಿಭಟನೆಯಲ್ಲೂ ಪೊಲೀಸರ ಮೇಲೆ ಖಡ್ದದ ಮೂಲಕ ದಾಳಿ ಪ್ರಯತ್ನ ನಡೆದಿದೆ.
ರೈತರು- ಕೇಂದ್ರದ ಮಾತುಕತೆ ಅಪೂರ್ಣ, ನಾಳೆ 4ನೇ ಸುತ್ತಿನ ಚರ್ಚೆ, ಪ್ರತಿಭಟನೆ ವೇಳೆ ಅಶ್ರುವಾಯು ಸಿಡಿಸಿದ ಪೊಲೀಸ್
ಪ್ರತಿಭಟನಾ ನಿರತ ಹಲವು ರೈತರು ಖಲಿಸ್ತಾನ ಉಗ್ರತ್ವ ಹುಟ್ಟುಹಾಕಿದ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಟಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇನ್ನು ಹಲವು ರೈತರು ಉಗ್ರ ಬಿಂದ್ರನ್‌ವಾಲೆ ಪೋಸ್ಟರ್ ಹಿಡಿದಿದ್ದಾರೆ. ರೈತ ಹೋರಾಟಕ್ಕೂ ಬಿಂದ್ರನ್‌ವಾಲೆಗೂ ಯಾವುದೇ ಸಂಬಂಧವಿಲ್ಲ. ಬಿಂದ್ರನ್‌ವಾಲೆ ಒರ್ವ ಉಗ್ರ. ಈತನನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮೂಲಕ ಹತ್ಯೆ ಮಾಡಿತ್ತು. ಆದರೆ ಈ ಉಗ್ರ ರೈತನಲ್ಲ. ಹೀಗಿರುವಾಗಿ ಉಗ್ರನ ಪೋಸ್ಟರ್ ಯಾಕೆ ಅನ್ನೋ ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ಎದ್ದಿದೆ.
ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ವಿವಾದಾತ್ಮಕ ಹೇಳಿಕೆ ಕೂಡ ಒಂದೊಕ್ಕೊಂದು ತಾಳೆಯಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್-ಹರ್ಯಾಣದ ಶಂಭು ಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರೈತ ನಾಯಕ ದಲ್ಲೇವಾಲ್, ‘ಮೋದಿ ಜನಪ್ರಿಯತೆ ಹೆಚ್ಚಿದೆ. ರಾಮ ಮಂದಿರ ನಿರ್ಮಾಣದಿಂದಾಗಿ ಅವರ ವರ್ಚಸ್ಸಿನ ಗ್ರಾಫ್ ಉನ್ನತ ಮಟ್ಟದಲ್ಲಿದೆ. ನಮಗೆ ಸಮಯ ಕಡಿಮೆ ಇದೆ (2024 ಲೋಕಸಭೆ ಚುನಾವಣೆ ಮುನ್ನ). ನಾವು ಮೋದಿಯ ಗ್ರಾಫ್ ಅನ್ನು ಕೆಳಗೆ ತರಬೇಕಾಗಿದೆ ಎಂದಿದ್ದಾರೆ. ಈ ವಿವಾದಾತ್ಮಕ ಹೇಳಿಕೆ, ಪ್ರತಿಭಟನಾ ನಿರತ ರೈತರ ನಡೆಗಳಿಂದ ಈ ಬಾರಿಯ ಪ್ರತಿಭಟನೆ ಕೂಡ ಹೈಜಾಕ್ ಆಗಿರುವ ಸಾಧ್ಯತೆ ಇದೆ ಎಂಬ ಅನುಮಾನ ಬಲವಾಗತೊಡಗಿದೆ.
