ಅಹ್ಮದಾಬಾದ್(ಜ.31)‌: ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಗುಜರಾತಿನ ನಾಲ್ಕು ನಗರಗಳಲ್ಲಿ ಜಾರಿಗೊಳಿಸಿದ್ದ ರಾತ್ರಿ ಕಫä್ರ್ಯ ಫೆ.15ರ ವರೆಗೆ ಮುಂದುವರೆಯಲಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ.

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಅಹ್ಮದಾಬಾದ್‌, ಸೂರತ್‌, ವಡೋದರ ಮತ್ತು ರಾಜ್‌ಕೋಟ್‌ ನಗರಗಳಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 6ರ ವರೆಗೆ ಕಫäರ್‍ ಜಾರಿಗೊಳಿಸಲಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್‌ ಹೆಚ್ಚುವರಿ ಮುಖ್ಯ ಕಾರ‍್ಯದರ್ಶಿ(ಗೃಹ) ಪಂಕಜ್‌ ಕುಮಾರ್‌, ‘ಕೊರೋನಾ ಗುಣಮುಖರಾಗುವವ ಪ್ರಮಾಣ ಶೇ.96.94ರಷ್ಟಿದೆ. ಆದಾಗ್ಯೂ ಕೊರೋನಾ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹೀಗಾಗಿ ಫೆ.15ರ ವರೆಗೆ ರಾತ್ರಿ ಕಫäರ್‍ ಜಾರಿಯಲ್ಲಿದೆ’ ಎಂದು ತಿಳಿಸಿದರು.

ಕಳೆದ ವರ್ಷ ಡಿಸೆಂಬರ್‌ನಿಂದ ಗುಜರಾತ್‌ನಲ್ಲಿ ರಾತ್ರಿ ಕಫäರ್‍ ಜಾರಿಗೊಳಿಸಲಾಗಿದೆ.