ಇಂದು ಬಿನ್ ಲಾಡೆನ್ ಇದೇ ಕೋರ್ಟ್ ಮುಂದೆ ಬಂದಿದ್ದರೆ ಯಾಸಿನ್ ಮಲಿಕ್ ಬಗ್ಗೆ ಈಗ ಅನುಸರಿಸುತ್ತಿರುವ ಧೋರಣೆಯನ್ನೇ ಅನುಸರಿಸಲಾಗುತ್ತಿತ್ತೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ನವದೆಹಲಿ (ಮೇ 30, 2023): ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರ ಯಾಸಿನ್ ಮಲಿಕ್‌ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್‌ಗೆ ಕೋರಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆತನನ್ನು ಜಗತ್ತಿನ ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದೆ. ‘ಲಾಡೆನ್ ಇಲ್ಲಿದ್ದರೆ ಆತನ ಪರ ಮೃದು ಧೋರಣೆ ತಾಳಲಾಗುತ್ತಿತ್ತೆ?’ ಎಂದು ಎನ್‌ಐಎ ಪ್ರಶ್ನೆ ಮಾಡಿದೆ.
ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಯಾಸಿನ್ ಮಲಿಕ್‌ಗೆ ಕೆಳ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ನೀಡಲು ನಿರಾಕರಿಸಿ ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ, ದಿಲ್ಲಿ ಹೈಕೋರ್ಟ್ ಮೊರೆ ಹೋಗಿ ಯಾಸಿನ್ ಮಲಿಕ್‌ಗೆ ಗಲ್ಲು ಶಿಕ್ಷೆ ಕೇಳಿದೆ.
ಇದನ್ನು ಓದಿ: 1 ವಾರದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ 3 ಸ್ಫೋಟ: ಐವರ ಬಂಧನ; ಶಬ್ದಕ್ಕೆ ಬೆಚ್ಚಿಬಿದ್ದ ಸ್ಥಳೀಯರು!
ಈ ಸಂಬಂಧ ಯಾಸಿನ್ ಮಲಿಕ್ ವಿರುದ್ಧ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಇಂದು ಬಿನ್ ಲಾಡೆನ್ ಇದೇ ಕೋರ್ಟ್ ಮುಂದೆ ಬಂದಿದ್ದರೆ ಯಾಸಿನ್ ಮಲಿಕ್ ಬಗ್ಗೆ ಈಗ ಅನುಸರಿಸುತ್ತಿರುವ ಧೋರಣೆಯನ್ನೇ ಅನುಸರಿಸಲಾಗುತ್ತಿತ್ತೆ?’ ಎಂದರು. ಇದಕ್ಕೆ ದ್ವಿಸದಸ್ಯ ಪೀಠವು, ‘ಬಿನ್ ಲಾಡೆನ್ ಕೇಸೇ ಬೇರೆ. ಈ ಕೇಸೇ ಬೇರೆ. ಬಿನ್ ಲಾಡೆನ್ ಯಾವತ್ತೂ ಕೋರ್ಟ್‌ನಲ್ಲಿ ವಿಚಾರಣೆಯನ್ನೇ ಎದುರಿಸಿರಲಿಲ್ಲ’ ಎಂದಿತು.
ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ‘ಅಮೆರಿಕದಲ್ಲಿ ವಿಚಾರಣೆ ನಡೆದಂತಿತ್ತು’ ಎಂದರು. ಇದಕ್ಕೆ ದಿಲ್ಲಿ ಹೈಕೋರ್ಟ್ ಪೀಠ ಯಾವುದೇ ಉತ್ತರ ನೀಡಲಿಲ್ಲ.
ಇದನ್ನೂ ಓದಿ: 2047ಕ್ಕೆ ಭಾರತವನ್ನು ಇಸ್ಲಾಮಿಕ್ ದೇಶ ಮಾಡುವುದು ಪಿಎಫ್‌ಐ ಗುರಿ: ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಆರೋಪ..!
