Asianet Suvarna News Asianet Suvarna News

ನಿಷೇಧಿತ ಉಗ್ರ ಸಂಘಟನೆ ಸಂಚು ಭೇದಿಸಲು ಕರ್ನಾಟಕ ಸೇರಿ 5 ರಾಜ್ಯದ ಮೇಲೆ NIA ದಾಳಿ!

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಗ್ರ ಸಂಘಟನೆ ನಿಷೇಧಗೊಂಡಿದ್ದರೂ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಸಂಚು ಭೇಧಿಸಲು ರಾಷ್ಟ್ರೀಯ ತನಿಖಾ ದಳ ಕರ್ನಾಟಕ ಸೇರಿದಂತೆ 5 ರಾಜ್ಯದ ಮೇಲೆ ದಾಳಿ ನಡೆಸಿದೆ.

NIA raid 5 state including Karnataka to burst banned outfit Popular Front of India conspiracy ckm
Author
First Published Aug 13, 2023, 6:59 PM IST

ನವದೆಹಲಿ(ಆ.13) ಭಾರತ ವಿರೋಧಿ ಚಟುವಟಿಯಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಈ ಸಂಘಟನೆ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳಿಗೆ ಹಲವು ಘಟನೆಗಳೇ ಸಾಕ್ಷಿಯಾಗಿದೆ.ವಿದ್ವಂಸಕ ಕೃತ್ಯ, ಉಗ್ರರ ದಾಳಿ ಮೂಲಕ 20247ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಹೊರಟ ಈ ಸಂಘಟನೆಯ ರಹಸ್ಯ ಕಾರ್ಯಾಚರಣೆ ಭೇಧಿಸಲು ಇಂದು  NIA ದಾಳಿ ಮಾಡಿದೆ. ಕರ್ನಾಟಕ,ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಬಿಹಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರ್ನಾಟಕದ ದಕ್ಷಿಣದಲ್ಲಿ ಗಟ್ಟಿಯಾಗಿ ಬೇರೂರಿರುವ ಈ ನಿಷೇಧಿತ ಸಂಘಟನೆ ರಹಸ್ಯ ಸಂಚನ್ನು ಭೇದಿಸಲು NIA ದಾಳಿ ಮಾಡಿದೆ. ದಕ್ಷಿಣ ಕನ್ನಡದ ಹಲವು ಭಾಗದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಕೇರಳದ ಕಣ್ಣೂರು, ಮಹಾರಾಷ್ಟ್ರ ನಾಸಿಕ್, ಪಶ್ಚಿಮ ಬಂಗಾಳದ ಮುರ್ಶಿದಾಬಾದ್, ಬಿಗಾರದ ಕಟಿಹಾರ್ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಡಿಜಿಟಲ್ ಡಿವೈಸ್, ಹಲವು ದಾಖಲೆಗಳು, ರಹಸ್ಯ ಕಾರ್ಯಾಚರಣೆ ರೂಪುರೇಶೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

20 ಸಾವಿರ ಕೊಟ್ರೆ ದಾಖಲೆಯಿಲ್ಲದೆ ಭಾರತಕ್ಕೆ ಎಂಟ್ರಿ: ಶಂಕಿತನೊಬ್ಬನ‌ ವಿಚಾರಣೆಯಲ್ಲಿ ಎನ್ಐಎಗೆ ಸ್ಪೋಟಕ‌ ಮಾಹಿತಿ !

ನಿಷೇಧಿತ ಸಂಘಟನೆ ರಹಸ್ಯವಾಗಿ ಯುವಕರನ್ನು ಸೆಳೆದು ಉಗ್ರ ಕೃತ್ಯಗಳಲ್ಲಿ ಬಳಸಿಕೊಳ್ಳಲು ಪ್ರಚೋದನೆ ನೀಡುತ್ತಿದೆ. ಜೊತೆಗೆ ಆರ್ಥಿಕ ನೆರವು ನೀಡುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ, ಸಮುದಾಯಗಳ ನಡುವೆ ಸಂಘರ್ಷದ ಕಿಡಿ ಹೊತ್ತಿಸುವ ಸೇರಿದಂತೆ ಹಲವು ದೇಶ ವಿರೋಧಿ ಚಟುವಟಿಕೆಗೆ ಯುವಕರನ್ನು ಪ್ರಚೋದಿಸುವ ಕೆಲಸದಲ್ಲಿ ನಿಷೇಧಿತ ಸಂಘಟನೆ ತೊಡಗಿಕೊಂಡಿದೆ ಎಂದು ತನಿಖಾಧಿಕಾರಿಗಳ ತಂಡ ದಾಳಿ ನಡೆಸಿದೆ.

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರಿಸಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು 5 ರಾಜ್ಯಗಳ ಹಲವು ಭಾಗದಲ್ಲಿ ದಾಳಿ ನಡೆಸಿದ್ದಾರೆ. ಈಗಾಗಲೇ ನಿಷೇಧಿತ ಸಂಘಟನೆಯ ಕೆಲ ನಾಯಕರನ್ನು ಬಂಧಿಸಲಾಗಿದೆ. ಆದರೂ ಈ ಸಂಘಟನೆ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ. 

ಬೆಂಗಳೂರಲ್ಲಿ 3 ಅಕ್ರಮ ಬಾಂಗ್ಲಾ ಪ್ರಜೆಗಳ ಬಂಧನ

ನಿಷೇಧಿತ ಸಂಘಟನೆ ಸದಸ್ಯರು ಈಗಾಗಲೇ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಇತ್ತೀಚೆಗೆ ಕರ್ನಾಟಕ ಕರಾವಳಿಯ ಮಹಾನಗರ ಮಂಗಳೂರಿನಲ್ಲಿ 2022ರ ನ.19ರಂದು ಸಂಭವಿಸಿದ್ದ ‘ಕುಕ್ಕರ್‌ ಬಾಂಬ್‌’ ಸ್ಫೋಟ ಪ್ರಕರಣದ ‘ಮಾಸ್ಟರ್‌ಮೈಂಡ್‌’ ಬೆಳಗಾವಿ ಜೈಲಿನಲ್ಲಿ ಬಂಧಿತನಾಗಿದ್ದ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಸದಸ್ಯ ಅಫ್ಸರ್‌ ಪಾಷಾ ಎಂಬ ಸ್ಫೋಟಕ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದರು. 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿ ಹಾಗೂ 2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಪಾಷಾ, ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಶಿವಮೊಗ್ಗ ಮೂಲದ ಮೊಹಮ್ಮದ್‌ ಶಾರೀಖ್‌ಗೆ ಕರ್ನಾಟಕದ ಜೈಲೊಂದರಲ್ಲಿ ತರಬೇತಿ ನೀಡಿದ್ದ ಎಂದೂ ಹೇಳಿದ್ದಾರೆ. ಅಫ್ಸರ್‌ ಪಾಷಾಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಇದೇ ನಿಷೇಧಿತ ಸಂಘಟನೆ ಮಾಡಿತ್ತು.
 

Follow Us:
Download App:
  • android
  • ios