ಚೆನ್ನೈ(ಮೇ.17): ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್‌ ಹಾಗೂ ಮೂಲಭೂತವಾದಿ ಸಂಘಟನೆ ಹಿಜ್‌್ಬ ಉಟ್‌ ತಹ್ರೀರ್‌ಗಳನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಸಮುದಾಯವೊಂದನ್ನು ನಿಂದಿಸಿ ಬರಹ ಪ್ರಕಟಿಸಿದ್ದ ಸಂಬಂಧ ತಮಿಳುನಾಡಿನ 4 ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭಾನುವಾರ ದಾಳಿ ನಡೆಸಿದೆ.

ಮದುರೈನ ಕಾಜಿಮಾರ್‌ ಸ್ಟ್ರೀಟ್‌, ಕೆ. ಪೂದುರ್‌, ಪೆಥಾನಿಯಾಪುರಂ ಹಾಗೂ ಮೆಹಬೂಬ್‌ ಪಾಳಯಂನಲ್ಲಿ ಈ ದಾಳಿಯನ್ನು ನಡೆಸಿ, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್‌ಗಳು, ಮೊಬೈಲ್‌ ಫೋನ್‌ಗಳು, ಮೆಮೋರಿ ಕಾರ್ಡುಗಳು, ಪೆನ್‌ ಡ್ರೈವ್‌ಗಳು ಸೇರಿದಂತೆ 16 ಡಿಜಿಟಲ್‌ ಉಪಕರಣಗಳನ್ನು ವಶಕ್ಕೆ ತೆಗೆದುಕೊಂಡಿದೆ. ಮೂಲಭೂತವಾದಕ್ಕೆ ಸಂಬಂಧಿಸಿದ ಪುಸ್ತಕ/ಕರಪತ್ರ/ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಕಾ ಸರ್ಕಾರದ ಮಹತ್ವದ ನಿರ್ಧಾರ; ISIS ಸೇರಿ 11 ಉಗ್ರ ಸಂಘಟನೆಗೆ ನಿಷೇಧ!

ಕಳೆದ ಡಿಸೆಂಬರ್‌ನಲ್ಲಿ ಮದುರೈ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ ಎಂಬಾತನನ್ನು ಎನ್‌ಐಎ ಬಂಧಿಸಿತ್ತು. ಇದೀಗ ಅದೇ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹ ಬರೆದಿದ್ದಾನೆ. ಐಸಿಸ್‌ ಹಾಗೂ ಹಿಜ್‌್ಬ ಉಟ್‌ ತಹ್ರೀರ್‌ ಸಂಘಟನೆಗಳನ್ನು ಸಮರ್ಥಿಸಿಕೊಂಡಿದ್ದಾನೆ. ಅಲ್ಲದೆ ಸಮುದಾಯವೊಂದರ ಬಗ್ಗೆ ಅವಹೇಳನ ಮಾಡಿದ್ದಾನೆ. ವಿವಿಧ ಸಮುದಾಯಗಳ ನಡುವಣ ಸೌಹಾರ್ದತೆ ಹದಗೆಡವುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.