ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಎನ್‌ಐಎ ಮಂಗಳವಾರ ಐಸಿಸ್‌ ಉಗ್ರ ಆಸಿಫ್‌ ಅಲಿಯಾಸ್‌ ಮಾಥಿಲ್‌ ಅಕಾತ್‌ ಕೊಡೈಯಿಲ್‌ ಅಶ್ರಫ್‌ನನ್ನು ಸತ್ಯಮಂಗಲಂನಲ್ಲಿ ಬಂಧಿಸಿತ್ತು. ಇವರು ಕೇರಳದ ಧಾರ್ಮಿಕ ಸ್ಥಳಗಳು ಮತ್ತು ಪ್ರಮುಖ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ (ಜುಲೈ 21, 2023): ಕೇರಳದ ಧಾರ್ಮಿಕ ಸ್ಥಳಗಳು ಮತ್ತು ಪ್ರಮುಖ ನಾಯಕರ ಮೇಲೆ ದಾಳಿ ನಡೆಸಲು ಐಸಿಸ್‌ ಭಯೋತ್ಪಾದಕರು ನಡೆಸಿದ್ದ ಸಂಚನ್ನು ರಾಷ್ಟ್ರೀಯ ತನಿಖಾ ದಳ ಬಯಲಿಗೆಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಬಂಧಿಸಲಾಗಿದ್ದ ಉಗ್ರನಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಸಂಭವನೀಯ ಭಯೋತ್ಪಾದನಾ ದಾಳಿ ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್‌ಐಎ ತಂಡ ಹಾಗೂ ಕೇರಳ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದು, ಕೇರಳದಲ್ಲಿ ಉಗ್ರರಿಗೆ ಸೇರಿದ್ದು ಎನ್ನಲಾದ 4 ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ತ್ರಿಶೂರು ಮತ್ತು ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿದ್ದು, ಇವರು ದಾಳಿ ನಡೆಸುವ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ವಕ್ತಾರ ಹೇಳಿದ್ದಾರೆ. 

ಇದನ್ನು ಓದಿ: ದೇಶದಲ್ಲಿ ರೊಬೋಟ್‌ ಬಾಂಬ್‌ ಸ್ಫೋಟಕ್ಕೆ ಐಸಿಸ್‌ ಉಗ್ರ ಸಂಚು? ರೋಬೋಟಿಕ್‌ ಕೋರ್ಸ್‌ ಸೇರಲು ವಿದೇಶಿ ಬಾಸ್‌ಗಳ ಸೂಚನೆ

ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಎನ್‌ಐಎ ಮಂಗಳವಾರ ಐಸಿಸ್‌ ಉಗ್ರ ಆಸಿಫ್‌ ಅಲಿಯಾಸ್‌ ಮಾಥಿಲ್‌ ಅಕಾತ್‌ ಕೊಡೈಯಿಲ್‌ ಅಶ್ರಫ್‌ನನ್ನು ಸತ್ಯಮಂಗಲಂನಲ್ಲಿ ಬಂಧಿಸಿತ್ತು. ಈ ಐಸಿಸ್‌ ಗುಂಪು ಹಣ ಸಂಗ್ರಹಣೆ, ಡಕಾಯಿತಿ ಮತ್ತು ಇತರ ಉಗ್ರ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿತ್ತು. ಇವರು ಕೇರಳದ ಧಾರ್ಮಿಕ ಸ್ಥಳಗಳು ಮತ್ತು ಪ್ರಮುಖ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Breaking: ನಾಲ್ವರು ಐಸಿಸ್‌ ಸಹಚರರ ಬಂಧಿಸಿದ ಗುಜರಾತ್‌ ಎಟಿಎಸ್‌ : ಮತ್ತೊಬ್ಬ ಆತಂಕವಾದಿಗಾಗಿ ಶೋಧ