Asianet Suvarna News Asianet Suvarna News

ಮೋಸ ಮಾಡಲೆಂದು ನೀನು ಬಂದೆಯಾ..! ಪಾರ್ಟ್‌ನರ್‌ಗೆ ಮೋಸ ಮಾಡ್ರೋದಲ್ಲಿ ಗಂಡು-ಹೆಣ್ಣು ಇಬ್ಬರೂ ಎತ್ತಿದ ಕೈ!

1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸೆಕ್ಸ್‌ ಪಾರ್ಟ್‌ನರ್‌ಗಳನ್ನು ಹೊಂದಿದ್ದಾರೆ ಎಂದು ತೋರಿಸಿದೆ.

NFHS survey Shows women in 11 states have more than one sexual partner san
Author
First Published Aug 19, 2022, 3:01 PM IST

ನವದೆಹಲಿ (ಆ.19): ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಮಹಿಳೆಯರು ಹಾಗೂ ಪುರುಷರ ಲೈಂಗಿಕ ಸಂಬಂಧದ ಕುರಿತಾಗಿ ತನ್ನ ಮಹತ್ವದ ಮತ್ತು ಆಘಾತಕಾರಿ ಸರ್ವೇಯನ್ನು ಬಹಿರಂಗ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿಯೇ ಅನೈತಿಕ ಸಂಬಂಧ ಜಾಸ್ತಿ ಎಂದು ಹೇಳಿದೆ. ಈ 11 ರಾಜ್ಯಗಳಲ್ಲಿ ಮಹಿಳೆಯರು ಒಂದಕ್ಕಿಂತ ಹೆಚ್ಚಿನ ಸಂಬಂಧಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಇದರ ನಡುವೆ ಪುರುಷರು ಕೂಡ ತನ್ನ ಗೆಳತಿ ಅಥವಾ ಪತ್ನಿಗೆ ಮೋಸ ಮಾಡುವ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಹೆಂಡತಿ ಅಥವಾ ಗೆಳತಿಯ ಹೊರತಾಗಿ ಬೇರೆ ಹುಡುಗಿಯರೊಂದಿಗೆ ಸೆಕ್ಸ್‌ ನಡೆಸಿದ ವಿಚಾರದಲ್ಲಿ ಪುರುಷರೇ ಮುಂದಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ ಶೇ. 4ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ.0,5ರಷ್ಟಿದೆ.  1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸರಾಸರಿ ಸೆಕ್ಸ್ ಪಾರ್ಟ್‌ನರ್‌ಅನ್ನು ಹೊಂದಿದೆ ಎಂದು ತೋರಿಸಿದೆ. ಈ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ಆಗಿವೆ.

ರಾಜಸ್ಥಾನದಲ್ಲಿ ಗರಿಷ್ಠ: ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ರಾಜಸ್ಥಾನ ಹೊಂದಿದೆ. ಅಂತಹ ಮಹಿಳೆಯರು ಸರಾಸರಿ 3.1 ಪ್ರತಿಶತದಷ್ಟು ಸೆಕ್ಸ್‌ ಪಾರ್ಟನರ್‌ಗಳನ್ನು ಹೊಂದಿದ್ದರೆ, ಒಂದಕ್ಕಿಂತ ಹೆಚ್ಚು ಸೆಕ್ಸ್‌ ಪಾರ್ಟ್‌ನರ್‌ಗಳನ್ನು ಹೊಂದಿರುವ ಪುರುಷರು ಸರಾಸರಿ ಶೇ.1.8 ರಷ್ಟಿದ್ದಾರೆ. 2019 ರಿಂದ 2021 ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5, ದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ 707 ಜಿಲ್ಲೆಗಳನ್ನು ಸಮೀಕ್ಷೆ ಮಾಡಿದೆ. ಇದರ ವರದಿಗಳು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆ ಗುಣಲಕ್ಷಣಗಳು, ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತ ಡೇಟಾವನ್ನು ಸಹ ಒದಗಿಸುತ್ತವೆ.

ಹೆಂಡತಿಗೆ ಹೊಡೆಯೋದ್ರಲ್ಲಿ ಕರ್ನಾಟಕವೇ ನಂಬರ್ 1

ಗ್ರಾಮೀಣ ಮಹಿಳೆಯರೇ ಹೆಚ್ಚು: ಎನ್‌ಎಫ್‌ಎಚ್‌ಎಸ್‌ ಮಾಹಿತಿಯ ಪ್ರಕಾರ, ಸೆಕ್ಸ್‌ ಪಾರ್ಟ್‌ನರ್‌ಗಳಲ್ಲಿ ನಗರ ಪ್ರದೇಶದ ಮಹಿಳೆಯರಿಗಿಂತ  (1.5 ಪ್ರತಿಶತ), ಗ್ರಾಮೀಣ ಭಾಗದ ಮಹಿಳೆಯರು ಮುಂದೆ ಇದ್ದಾರೆ ಮತ್ತು ಅವರ ಜೀವಿತಾವಧಿಯಲ್ಲಿ ಸರಾಸರಿ 1.8 ಕ್ಕಿಂತ ಹೆಚ್ಚು ಸೆಕ್ಸ್‌ ಪಾರ್ಟ್‌ನರ್‌ಗಳನ್ನು ಹೊಂದಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ, ಪುರುಷರ ಸೆಕ್ಸ್‌ ಪಾರ್ಟ್‌ನರ್ಗಳು ಕೂಡ ಇದೇ ರೀತಿ ಇರುವುದು ಕಂಡುಬಂದಿದೆ.

 

NFHS Survey: ಗಂಡ ಹೆಂಡತಿಗೆ ಹೊಡೆಯೋದ್ರಲ್ಲಿ ತಪ್ಪಿಲ್ಲ ಎಂದ ಕರ್ನಾಟಕದ ಶೇ. 77ರಷ್ಟು ಮಹಿಳೆಯರು!

ಮಧ್ಯಪ್ರದೇಶದಲ್ಲೂ ಹೆಚ್ಚು: ಸಮೀಕ್ಷೆಯನ್ನು ನಂಬುವುದಾದರೆ, ದೆಹಲಿಯಲ್ಲಿ ಮಹಿಳೆಯರು ಸರಾಸರಿ 1.1 ಪ್ರತಿಶತದಷ್ಟು ಸೆಕ್ಸ್ ಪಾರ್ಟ್‌ನರ್‌ಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. ಅಂದರೆ, ಸರಾಸರಿಯಾಗಿ, ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಸೆಕ್ಸ್‌ ಪಾರ್ಟ್‌ನರ್‌ಅನ್ನು ಹೊಂದಿದ್ದಾಳೆ, ಆದರೆ ಮಧ್ಯಪ್ರದೇಶದಲ್ಲಿ ಈ ಸಂಖ್ಯೆ 2.5 ಪ್ರತಿಶತ, ಉತ್ತರ ಪ್ರದೇಶದಲ್ಲಿ 2.2 ಪ್ರತಿಶತ, ತಮಿಳುನಾಡಿನಲ್ಲಿ 2.4 ಪ್ರತಿಶತ, ಅಸ್ಸಾಂನಲ್ಲಿ 2.1 ಪ್ರತಿಶತ ಮತ್ತು ಹರಿಯಾಣದಲ್ಲಿ 1.8 ಪ್ರತಿಶತ ಆಗಿದೆ.

Follow Us:
Download App:
  • android
  • ios